Earthquake: ಗೂಗಲ್ ಬಳಸುವ ಎಲ್ಲರಿಗೂ ಐತಿಹಾಸಿಕ ಯೋಜನೆ ಬಿಡುಗಡೆ, ಈಗಲೇ ಸೆಟ್ಟಿಂಗ್ ಮಾಡಿಕೊಳ್ಳಿ.

ಭಾರತದಲ್ಲಿ Google ಭೂಕಂಪ ಎಚ್ಚರಿಕೆ ವ್ಯವಸ್ಥೆಯನ್ನು ಪ್ರಾರಂಭಿಸಿದೆ.

Earthquake Alert: ಸದ್ಯ ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಹೊಸ ಹೊಸ ಆವಿಷ್ಕಾರಗಳು ಕಾಣಸಿಗುತ್ತಿದೆ. ಡಿಜಿಟಲ್ ಯುಗದಲ್ಲಿ ಹೆಚ್ಚು ಎಲೆಕ್ಟ್ರಾನಿಕ್ ವಸ್ತುಗಳು ಬಳಕೆಯಲ್ಲಿವೆ. ಈ Electronic ವಸ್ತುಗಳಿಂದ ಅನೇಕ ಉಪಯೋಗಗಳು ಆಗುತ್ತಿವೆ ಎನ್ನಬಹುದು. ಸದ್ಯ ಪ್ರಪಂಚದಲ್ಲಿ Smartphone ಬಳಕೆ ಹೆಚ್ಚುತ್ತಿದೆ ಎನ್ನಬಹದು. ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನ್ ಇದ್ದೆ ಇರುತ್ತದೆ.

ಇದೀಗ ಈ Smartphone ಗಳಲ್ಲಿ ಜನರಿಗೆ ಎಚ್ಚರಿಕೆ ಮೂಡಿಸಲು ಹೊಸ ವ್ಯವಸ್ಥೆಯನ್ನು ಪರಿಚಯಿಸಲು ನಿರ್ಧರಿಸಲಾಗಿದೆ. Mobile ನಲ್ಲಿ ಯಾವ ವಿಷಯಕ್ಕೆ ಸಂಬಂಧಿಸಿದ ಎಚ್ಚರಿಕೆ ಸಿಗಲಿದೆ ಎನ್ನುವ ಬಗ್ಗೆ ವಿವರ ಇಲ್ಲಿದೆ.

google earthquake alert system
Image Credit: Rappler

ಇನ್ನುಮುಂದೆ ಭೂಕಂಪದ ಬಗ್ಗೆ ಹೆಚ್ಚು ಚಿಂತಿಸುವಂತಿಲ್ಲ
ಪ್ರಪಂಚದಲ್ಲಿ ನಡೆಯುವ ನೈಸರ್ಗಿಕ ವಿಪತ್ತುಗಳಲ್ಲಿ ಭೂಕಂಪ ಕೂಡ ಒಂದು. ಈ ಭೂಕಂಪದಿಂದಾಗಿ ಜಗತ್ತಿನಲ್ಲಿ ಸಾಕಷ್ಟು ಜೀವಗಳು ನಾಶವಾಗಿದೆ ಎನ್ನಬಹುದು. ಭೂಕಂಪದಿಂದಾಗಿ ಪೃಕೃತಿಯು ಸಂಪೂರ್ಣ ನಾಶವಾಗಿರುವ ಸನ್ನಿವೇಶಗಳು ಕೂಡ ಇದೆ. ಭೂಕಂಪ ಎದುರಾದಾಗ ಜನರು ತಮ್ಮನ್ನು ತಮ್ಮ ಕುಟುಂಬದವರನ್ನು ಕಾಪಾಡಲು ಪ್ರಯತ್ನಿಸುತ್ತಾರೆ.

ಇನ್ನು ಭೂಕಪ್ನದ ಬಗ್ಗೆ ಮೊದಲು ಜನರಿಗೆ ಮಾಹಿತಿ ಲಭ್ಯವಾಗುವಂತಿದ್ದರೆ ಮೊದಲೇ ಭೂಕಪದಿಂದ ದೂರ ಉಳಿಯಲು ಪ್ರಯತ್ನಿಸಬಹುದು ಎಂದು ಸಾಕಷ್ಟು ಜನರು ಅಂದುಕೊಂಡಿರುತ್ತಾರೆ. ಸದ್ಯ Google ಭೂಕಂಪದ ಬಗ್ಗೆ ಸೂಚಕ ನೀಡಲು ಹೊಸ ವ್ಯವಸ್ಥೆಯನ್ನು ಕಂಡುಹಿಡಿದಿದೆ.

google earthquake alert system
Image Credit: Utoday

ಭೂಕಂಪ ಎಚ್ಚರಿಕೆ ವ್ಯವಸ್ಥೆ ಆರಂಭಿಸಿದ Google
ಸದ್ಯ National Disaster Management Authority (NDMA) ಮತ್ತು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NSC ) ಯೊಂದಿಗೆ ಸಮಾಲೋಚಿಸಿ ಭೂಕಂಪವನ್ನು ಪತ್ತೆಹಚ್ಚಲು ಹೊಸ ವ್ಯವಸ್ಥೆಯನ್ನು ಪರಿಚಯಿಸಿದೆ. ಭಾರತದಲ್ಲಿ Google ಭೂಕಂಪ ಎಚ್ಚರಿಕೆ ವ್ಯವಸ್ಥೆಯನ್ನು ಪ್ರಾರಂಭಿಸಿದೆ.

Join Nadunudi News WhatsApp Group

ಭೂಕಂಪಗಳನ್ನು ಪತ್ತೆಹಚ್ಚಲು ಆಂಡ್ರಾಯ್ಡ್ ಫೋನ್ ಗಳಲ್ಲಿ ಸಂವೇದಕಗಳನ್ನು ಬಳಸಲಾಗುತ್ತದೆ. ಪ್ರತಿ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಸಣ್ಣ ಅಕ್ಸೆಲೆರೋಮೀಟರ್ ಗಳನ್ನೂ ಹೊಂದಿದ್ದು, ಅದು ಮಿನಿ ಭೂಕಂಪ ಮಾಪಕಗಳಾಗಿ ಕಾರ್ಯನಿರ್ವಹಿಸುತ್ತದೆ. ಇನ್ನು Phone ಅನ್ನು ಪ್ಲಗ್ ಇನ್ ಮಾಡಿದಾಗ ಮತ್ತು ಚಾರ್ಜ್ ಮಾಡಿದಾಗ ಮೊಬೈಲ್ ನಲ್ಲಿನ ಸಂವೇದಕಗಳು ಭೂಕಂಪಗಳ ಪ್ರಾರಂಭವನ್ನು ಕಂಡುಹಿಡಿಯುತ್ತದೆ.

earthquake alert
Image Credit: Indiatodayne

Google ಎರಡು ರೀತಿಯಲ್ಲಿ ಎಚ್ಚರಿಕೆಯನ್ನು ನೀಡಲಿದೆ
*ಇನ್ನು 4 .5 ಅಥವಾ ಅದಕ್ಕಿಂತ ಹೆಚ್ಚಿನ ತೀವ್ರತೆಯ ಭೂಕಂಪದ ಸಮಯದಲ್ಲಿ ಅಂದರೆ ಭೂಮಿ ಅಲುಗಾಡುವ ಸಮಯದಲ್ಲಿ ಬಳಕೆದಾರರಿಗೆ “ಜಾಗರೂಕರಾಗಿರಿ” ಎನ್ನುವ ಎಚ್ಚರಿಕೆಯ ಸಂದೇಶವನ್ನು Google ಕಳುಹಿಸುತ್ತದೆ. ಈ ಸಂದೇಶವು ಮೊಬೈಲ್ ಡಿಸ್ಪ್ಲೇ ಮೇಲೆ ಕಾಣಿಸುತ್ತದೆ.

*ಇನ್ನು ಭೂಕಂಪದ ತೀವ್ರತೆ 4 .5 ಇದ್ದ ಸಮಯದಲ್ಲಿ MMI 5 + ನಡುಕವನ್ನು ಅನುಭವಿಸುವ ಬಳಕೆದಾರರಿಗೆ ಎಚ್ಚರಿಕೆಗಳನ್ನು ಕಳುಹಿಸುತ್ತದೆ. ಈ ಎಚ್ಚರಿಕೆಯೂ Do Not Disturb ಸೇರಿದಂತೆ ಸಿಸ್ಟಮ್ ನ ಅಧಿಸೂಚನೆ ಸೆಟ್ಟಿಂಗ್ ಗಳೊಂದಿಗೆ ದೊಡ್ಡ ದ್ವನಿಯಲ್ಲಿ ಬರುತ್ತದೆ.

Join Nadunudi News WhatsApp Group