Night Shift Work: ನೈಟ್ ಶಿಫ್ಟ್ ನಲ್ಲಿ ಕೆಲಸ ಮಾಡುತ್ತಿರುವವರಲ್ಲಿ ಕಾಡುತ್ತಿದೆ ಈ ಆರೋಗ್ಯ ಸಮಸ್ಯೆ, ವೈದ್ಯರ ಅಧ್ಯಯನ

ಅಧ್ಯಯನದ ಪ್ರಕಾರ, ನೈಟ್ ಶಿಫ್ಟ್ ಕೆಲಸ ಮಾಡುವವರಿಗೆ ಇಂತಹ ಆರೋಗ್ಯ ಸಮಸ್ಯೆ ಹೆಚ್ಚು ಕಾಡುತ್ತಿದೆ.

Effect Of Night Shift Work: ಸಾಮಾನ್ಯವಾಗಿ ಎಲ್ಲರು ಕೂಡ ತಮ್ಮ ಆರೋಗದತ್ತ ಹೆಚ್ಚಿನ ಗಮನ ಹರಿಸುತ್ತಾರೆ. ಆರೋಗ್ಯ ಒಂದು ಚೆನ್ನಾಗಿ ಇದ್ದರೆ ಜನರು ಯಾವುದೇ ಸಮಸ್ಯೆ ಇಲ್ಲದೆ ಜೀವನವನ್ನು ಕಳೆಯಬಹುದು.

ಆರೋಗ್ಯವೇ ಭಾಗ್ಯ ಎನ್ನುವಂತೆ ಸುಖಕರ ಜೀವನಕ್ಕೆ ಆರೋಗ್ಯ ಮುಖ್ಯವಾಗಿರುತ್ತದೆ. ಆರೋಗ್ಯದ ಸಮಸ್ಯೆ ಕಂಡು ಬಂದರೆ ತಕ್ಷಣವೇ ಚಿಕಿತ್ಸೆ ಪಡೆದು ಬೇಗ ಗುಣಮುಖರಾಗಬೇಕು. ಇಲ್ಲವಾದರೆ ಅನಾರೋಗ್ಯ ಮನುಷ್ಯನ ಪ್ರಾಣವನ್ನೇ ಕಸಿದುಕೊಳ್ಳುತ್ತದೆ. ಇನ್ನು ಜನರು ಹೆಚ್ಚಾಗಿ ಹಣ ಸಂಪಾದಿಸಲು ಕೆಲಸಕ್ಕೆ ಹೋಗುತ್ತಾರೆ. ಆದರೆ ತಮ್ಮ ಆರೋಗ್ಯದ ಕಡೆ ಗಮನ ಕೊಡದೆ ಆರೋಗ್ಯವನ್ನ ಹಾಲು ಮಾಡಿಕೊಳ್ಳುತ್ತಾರೆ ಎಂದು ಹೇಳಬಹುದು. 

Effect Of Night Shift Work
Image Credit: Nih

ನೈಟ್ ಶಿಫ್ಟ್ ಕೆಲಸ ಮಾಡುವವರಿಗೆ ಬಿಗ್ ನ್ಯೂಸ್
ಹೆಚ್ಚಿನ ಜನರು ತಮ್ಮ ಕೆಲಸದ ಕಾರಣ ಆರೋಗ್ಯ ಸಮಸ್ಯೆಯನ್ನು ಎದುರಿಸಿದ್ದುಂಟು. ಇನ್ನು ಹಗಲಿನಲ್ಲಿ ಎಷ್ಟು ಬೇಕಾದರೂ ಕೆಲಸ ಮಾಡಿ ರಾತ್ರಿಯ ವೇಳೆ ನಿದ್ರಿಸಿದರೆ ಅಂತವರಿಗೆ ಯಾವುದೇ ಆರೋಗ್ಯ ಸಮಸ್ಯೆ ಎದುರಾಗುವುದಿಲ್ಲ. ಪ್ರತೋಯೊಬ್ಬರಿಗೂ ಕೂಡ ನಿದ್ರೆ ಮುಖ್ಯವಾಗಿರುತ್ತದೆ. ಆದರೆ ಹಗಲಿನಲ್ಲಿ ಕೆಲಸ ಮಾಡದೆ ರಾತ್ರಿಯ ವೇಳೆ ಕೆಲಸ (Night Shift Work ) ಮಾಡುವ ಸಾಕಷ್ಟು ಜನರಿದ್ದಾರೆ. ಇಂತವರಿಗೆ ಆರೋಗ್ಯ ಸಮಸ್ಯೆ ಎದುರಾಗುವುದು ಸಹಜ. ಅಧ್ಯಯನದ ಪ್ರಕಾರ, ನೈಟ್ ಶಿಫ್ಟ್ ಕೆಲಸ ಮಾಡುವವರಿಗೆ ಇಂತಹ ಆರೋಗ್ಯ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತದಂತೆ.

ನೈಟ್ ಶಿಫ್ಟ್ ನಲ್ಲಿ ಕೆಲಸ ಮಾಡುತ್ತಿರುವವರಲ್ಲಿ ಕಾಡುತ್ತಿದೆ ಈ ಆರೋಗ್ಯ ಸಮಸ್ಯೆ
ನೈಟ್ ಶಿಫ್ಟ್ ಕೆಲಸ ಮಾಡುವವರು ನಿದ್ರಾಹೀನತೆ ಸಮಸ್ಯೆಯ ಜೊತೆಗೆ ಇನ್ನಿತರ ಖಾಯಿಲೆಗೆ ಒಳಗಾಗುತ್ತಾರೆ ಎಂದು ಇತ್ತೀಚಿನ ಅಧ್ಯಯನ ತಿಳಿಸಿದೆ. ಫ್ರಾಂಟಿಯರ್ಸ್ ಇನ್ ಸೈಕಿಯಾಟ್ರಿಯಲ್ಲಿ ಡಿಸೆಂಬರ್ 7 ರಂದು ಪ್ರಕಟವಾದ ಅಧ್ಯಯನದಲ್ಲಿ, ನೆದರ್ಲ್ಯಾಂಡ್ಸ್ ಮತ್ತು ಬೆಲ್ಜಿಯಂನ ಸಂಶೋಧಕರು 37,662 ವ್ಯಕ್ತಿಗಳಿಂದ ಕೆಲಸ ಮತ್ತು ನಿದ್ರೆಯ ಡೇಟಾವನ್ನು ಸಂಗ್ರಹಿಸಿದ್ದಾರೆ.

Night Shift Work
Image Credit: Energyperformancelighting

ಅಧ್ಯಯನದಲ್ಲಿ ಏನಿದೆ..?
“ಈ ಅಡ್ಡ-ವಿಭಾಗದ ಅಧ್ಯಯನದಲ್ಲಿ, ಸಣ್ಣ ನಿದ್ರೆ (≤6 h), ದೀರ್ಘ ನಿದ್ರೆ (≥9 h) ಮತ್ತು ನಿದ್ರಾ ಅಸ್ವಸ್ಥತೆಗಳು (ಹಾಲೆಂಡ್ ಸ್ಲೀಪ್ ಡಿಸಾರ್ಡರ್ಸ್ ಪ್ರಶ್ನಾವಳಿಯೊಂದಿಗೆ ನಿರ್ಣಯಿಸಿದಂತೆ) ಮತ್ತು ಈ ನಿದ್ರೆಯ ಅಸ್ಥಿರಗಳು ಮತ್ತು ಸಾಮಾಜಿಕ-ಜನಸಂಖ್ಯಾಶಾಸ್ತ್ರದ ನಡುವಿನ ಸಂಬಂಧಗಳು (ವಯಸ್ಸು, ಲಿಂಗ, ಶಿಕ್ಷಣ, ಜೀವಂತ ಒಡನಾಡಿ) ದ್ವಿನಾಮದ ಲಾಜಿಸ್ಟಿಕ್ ರಿಗ್ರೆಷನ್ ವಿಶ್ಲೇಷಣೆಗಳನ್ನು ಬಳಸಿಕೊಂಡು ವಿಶ್ಲೇಷಿಸಲಾಗಿದೆ,” ಎಂದು ಅಧ್ಯಯನವು ಹೇಳಿದೆ.

Join Nadunudi News WhatsApp Group

“ಶಿಫ್ಟ್ ಕೆಲಸವು ನಿದ್ರಾಹೀನತೆ, ನಿದ್ರೆ-ಸಂಬಂಧಿತ ಉಸಿರಾಟದ ಅಸ್ವಸ್ಥತೆಗಳು ಮತ್ತು ನಿದ್ರೆ-ಸಂಬಂಧಿತ ಚಲನೆಯ ಅಸ್ವಸ್ಥತೆಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ನಿದ್ರೆಯ ಅಸ್ವಸ್ಥತೆಗಳೊಂದಿಗೆ ಮಾತ್ರ ಸಂಬಂಧಿಸಿದೆ” ಎಂದು ಅಧ್ಯಯನ ತಿಳಿಸಿದೆ. ಇನ್ನು ಈ ಅಧ್ಯಯನದಿಂದ ರಾತ್ರಿಯ ಸಮಯದಲ್ಲಿ ಕೆಲಸವನ್ನ ಮಾಡುವವರು ನಿದ್ರಾ ಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದು ನೈಟ್ ಶಿಫ್ಟ್ ಅನ್ನುವುದು ಅವರ ಆರೋಗ್ಯದ ಮೇಲೆ ಪರಿಣಾಮವನ್ನ ಬೀರುತ್ತಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

Join Nadunudi News WhatsApp Group