Egg Price: ಹೊಸ ವರ್ಷದ ಆರಂಭದಲ್ಲಿಯೇ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ, ಮೊಟ್ಟೆ ಬೆಲೆಯಲ್ಲಿ ದಿಢೀರ್ ಏರಿಕೆ

ರಾಜ್ಯದಲ್ಲಿ ಮೊಟ್ಟೆಯ ಬೆಲೆಯಲ್ಲಿ ಮತ್ತೆ ಏರಿಕೆ, ಹೊಸ ವರ್ಷಕ್ಕೆ ಮತ್ತೆ ಬೆಲೆ ಏರಿಕೆಯ ಬಿಸಿ

Egg Price Hike From January 1st: ನಾವೀಗ ಹೊಸ ವರ್ಷದ (New Year) ಆರಂಭದಲ್ಲಿದ್ದೇವೆ. ಹೊಸ ವರ್ಷದಲ್ಲಿ ಅನೇಕ ಬದಲಾವಣೆಗಳು ಆಗಲಿವೆ. ಹೊಸ ವರ್ಷದ ಜೊತೆಗೆ ಹೊಸ ಮಾಸ ಕೂಡ ಆರಂಭವಾಗಿರುವುದರಿಂದ ಅನೇಕ ಹೊಸ ಹೊಸ ನಿಯಮವಳಿಗಳು ರೂಪುಗೊಳ್ಳಲಿದೆ. ಇನ್ನು 2023 ರಲ್ಲಿ ದೇಶದಲ್ಲಿ ಹಣದುಬ್ಬರ ಹೆಚ್ಚಿರುವುದು ಎಲ್ಲರ ಗಮನಕ್ಕೂ ಬಂದಿದೆ.

ದಿನನಿತ್ಯ ಬಳಸುವಂತಹ ವಸ್ತುಗಳ ಬೆಲೆ ಬಾರಿ ಪ್ರಮಾಣದಲ್ಲಿ ಏರಿಕೆಯಾಗಿ ಜನರಿಗೆ ಆರ್ಥಿಕವಾಗಿ ನಷ್ಟವನ್ನು ಉಂಟುಮಾಡಿತ್ತು. ಜನರು ದಿನ ಬಳಕೆಯ ವಸ್ತುಗಳ ಖರೀದಿಗೆ ದುಪ್ಪಟ್ಟು ಹಣವನ್ನು ನೀಡುವ ಪರಿಸ್ಥಿತಿ ಬಂದೋದಾಗಿತ್ತು. ಸದ್ಯ ಹೊಸ ವರ್ಷದ ಆರಂಭದಲ್ಲಿಯೇ ಜನಸಾಮಾನ್ಯರಿಗೆ ಈಗ ಬೇಸರದ ಸಮಾಚಾರ ಹೊರಬಿದ್ದಿದೆ. ಹೌದು ಹೊಸ ವರ್ಷದ ಆರಂಭದಲ್ಲೇ ಮೊಟ್ಟೆಯ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.

egg price hike in karnataka
Image Credit: Original Source

ಹೊಸ ವರ್ಷದ ಆರಂಭದಲ್ಲಿಯೇ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ
ದಿನ ಬಳಕೆಯ ವಸ್ತುಗಳಾದ ಹಾಲು, ಮೊಸರು, ಅಡುಗೆ ಎಣ್ಣೆ, ಬೇಳೆಕಾಳುಗಳು, ತರಕಾರಿ, ಗ್ಯಾಸ್ ಸಿಲಿಂಡರ್ ಬೆಲೆ ಸೇರಿದಂತೆ ಅನೇಕ ವಸ್ತುಗಳ ಬೆಲೆ ಏರಿಕೆಯಾಗಿದೆ. ಆಹಾರ ಪದಾರ್ಥಗಳ ಖರೀದಿಗೆ ಜನರು ಹೆಚ್ಚಿನ ಹಣವನ್ನು ನೀಡಬೇಕಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಮೊಟ್ಟೆಗಳ (EGG) ದರದಲ್ಲಿ ಬಾರಿ ಬದಲಾವಣೆ ಕಂಡು ಬಂದಿದೆ. ಹೊಸ ವರ್ಷದ ಮೊದಲ ವಾರದಲ್ಲಿಯೇ ಮೊಟ್ಟೆ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ.

egg price hikes in karnataka 2024
Image Credit: Original Source

ಮೊಟ್ಟೆ ಪ್ರಿಯರಿಗೆ ಶಾಕ್, ಮೊಟ್ಟೆ ಬೆಲೆಯಲ್ಲಿ ದಿಢೀರ್ ಏರಿಕೆ
ಮೀನು, ಕೋಳಿ ಮಾಂಸಗಳನ್ನು ಇಷ್ಟಪದದವರು ಮೊಟ್ಟೆಗಳನ್ನು ತಿನ್ನಲು ಬಯಸುತ್ತಾರೆ. ಈ ಮೊದಲು ಮಾರುಕಟ್ಟೆಯಲ್ಲಿ ಮೊಟ್ಟೆಯ ಬೆಲೆ 5 ರಿಂದ 6 ರೂ. ಗಳಲ್ಲಿ ಲಭ್ಯವಾಗಿತ್ತು. ಸದ್ಯ ಮೊಟ್ಟೆಯ ಬೆಲೆ ಏಕಾಈಕಿ ಏರಿಕೆಯಾಗಿದೆ. ಪ್ರಸ್ತುತ ರಿಟಲ್ ಅಂಗಡಿಗಳಲ್ಲಿ ಮೊಟ್ಟೆಯ ಬೆಲೆ ದಿಡೀರ್ 7 ರೂ. ತಲುಪಿದೆ. ಹೋಲ್ ಸೇಲ್ ದರದಲ್ಲಿ ಮೊಟ್ಟೆಯ ಬೆಲೆ 6.50 ರೂ. ಆಗಿದೆ. ಮೊಟ್ಟೆ ಬೆಲೆಯ ಏರಿಕೆ ಜನರಲ್ಲಿ ಅಚ್ಚರಿ ಮೂಡಿಸಿದೆ. ಮೊಟ್ಟೆ ಖರೀದಿಸಲು ಹೋದರೆ ಜನರ ಜೇಬಿಗೆ ಕತ್ತರಿ ಬೀಳುವುದಂತೂ ನಿಜ.

Join Nadunudi News WhatsApp Group

Join Nadunudi News WhatsApp Group