Election Allowance: ಚುನಾವಣಾ ಕಾರ್ಯಕರ್ತರಿಗೆ ಸಿಹಿ ಸುದ್ದಿ, ಸಂಬಳದಲ್ಲಿ ಹೆಚ್ಚಳ.

ಚುನಾವಣೆಗೆ ಕೆಲಸ ಮಾಡುವ ಎಲ್ಲಾ ನೌಕರರ ಭತ್ಯೆಯನ್ನ ಹೆಚ್ಚಳ ಮಾಡಲಾಗಿದೆ.

Assembly Election Allowance: ರಾಜ್ಯ ವಿಧಾನಸಭಾ ಚುನಾವಣೆ (Assembly Election) ಹತ್ತಿರವಾಗುತ್ತಿದೆ. ಚುನಾವಣೆ ಹತ್ತಿರಾವಾಗುತ್ತಿದ್ದಂತೆ ಚುನಾವಣಾ ನೀತಿ ಸಂಹಿತೆ ಕೂಡ ಜಾರಿಗೆ ಬಂದಿದೆ. ಇನ್ನು ಚುನಾವಣೆಯ ಕಾರಣ ಸಾಕಷ್ಟು ನಿಯಮಗಳು ಕೂಡ ಜಾರಿಗೆ ಬಂದಿವೆ. ಚುನಾವಣೆಯಲ್ಲಿ ಕಾರ್ಯನಿವಹಿಸುವವರಿಗೆ ರಾಜ್ಯ ಸರ್ಕಾರ ಇದೀಗ ಸಿಹಿ ಸುದ್ದಿ ನೀಡಿದೆ.

Allowance of all employees working for election has been increased.
Image Credit: livemint

ಚುನಾವಣಾ ಕಾರ್ಯನಿರ್ವಹಣೆ ಮಾಡುವವರಿಗೆ ಸಿಹಿ ಸುದ್ದಿ
ಕರ್ನಾಟಕ ವಿಧಾನಸಭಾ ಚುನಾವಣೆ ದಿನಾಂಕ ನಿಗದಿಯಾಗಿದೆ. ಮೇ 10 ರಂದು ಚುನಾವಣೆ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟಿಸಲಾಗುತ್ತದೆ. ಚುನಾವಣೆ ಹತ್ತಿರವಾಗುತ್ತಿದಂತೆ ರಾಜಕೀಯ ಮುಖಂಡರು ತಮ್ಮ ತಮ್ಮ ಪಕ್ಷದ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ.

ಇದೀಗ ಚುನಾವಣೆಯ ಸಮಯದಲ್ಲಿ ಕಾರ್ಯನಿರ್ವಹಿಸುವವರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಚುನಾವಣೆಯ ಸಮಯದಲ್ಲಿ ಕಾರ್ಯ ನಿರ್ವಹಿಸುವವರಿಗೆ ವಿಶೇಷ ಭತ್ಯೆ ನೀಡುವುದಾಗಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

The government has issued an order to give more election allowance to the employees engaged in election work
Image Credit: hindustantimes

ಪೊಲೀಸ್ ಅಧಿಕಾರಿಗಳು ಹಾಗು ಇನ್ನಿತರ ಸಿಬ್ಬಂದಿಗೆ ವಿಶೇಷ ಭತ್ಯೆ ಘೋಷಣೆ
ವಿಧಾನಸಭಾ ಚುನಾವಣೆಗೆ ಆಯ್ಕೆ ಆದ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಭತ್ಯೆ ನೀಡುವುದಾಗಿ ರಾಜ್ಯ ಸರ್ಕಾರ ಘೋಷಣೆ ಹೊರಡಿಸಿದೆ. ಜಿಲ್ಲಾ ಪರಿಷ್ಠಾಧಿಕಾರಿ ಹಾಗೂ ಅದಕ್ಕಿಂತ ಮೇಲ್ಪಟ್ಟವರಿಗೆ 7000 ರೂ. ನೀಡುವುದಾಗಿ ಘೋಷಣೆ ಮಾಡಿದೆ.

ಚುನಾವಣಾ ಭತ್ಯೆ ಪರಿಷ್ಕರಣೆ (Election Allowance) 
ಪೊಲೀಸ್ ಇನ್ಸ್ ಪೆಕ್ಟರ್ ಗಳಿಗೆ ಪ್ರತಿದಿನ 500 ರಿಂದ 700 ರೂ, ಪೊಲೀಸ್ ಸಬ್ ಇನ್ಸ್ ಪೆಕ್ಟರ್, ಈಸ್ ಐ, ಹೆಡ್ ಕಾನ್ಸ್ಟೇಬಲ್, ಕಾನ್ಸ್ಟೇಬಲ್ ಗಳಿಗೆ 350 ರಿಂದ 500 ರೂ. ಭತ್ಯೆ ನೀಡುವುದಾಗಿ ಹೇಳಿದೆ. ಹಾಗೆಯೆ ಹೋಂ ಗಾರ್ಡ್, ಪ್ರೀಸ್ಟ್ ಗಾರ್ಡ್ ಹಾಗೂ ಇನಿತರ ಸಿಬ್ಬಂದಿಗಳಿಗೆ 150 ರಿಂದ 250 ರೂ. ಚುನಾವಣಾ ಭತ್ಯೆ ಪರಿಷ್ಕರಣೆಯನ್ನು ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

Join Nadunudi News WhatsApp Group

Join Nadunudi News WhatsApp Group