Election Ink Make: ಮತ ಹಾಕುವಾಗ ನಮ್ಮ ಬೆರಳಿಗೆ ಹಾಕುವ ಕಪ್ಪು ಶಾಯಿ ಯಾವುದರಿಂದ ಮಾಡುತ್ತಾರೆ ಗೊತ್ತಾ…?

ಮತ ಹಾಕುವವರ ಬೆರಳಿಗೆ ಹಾಕುವ ಕಪ್ಪು ಶಾಯಿ ಯಾವುದರಿಂದ ಮಾಡುತ್ತಾರೆ..? ಇಲ್ಲಿದೆ ಡೀಟೇಲ್ಸ್

Election Ink Information: ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರವನ್ನು ಪಡೆಯಲು ವಿವಿಧ ಪಕ್ಷಗಳ ನಡುವೆ ಚುನಾವಣೆ ನಡೆಯುತ್ತದೆ. ಈ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಅತಿ ಹೆಚ್ಚು ಮತ ಬರುತ್ತದೆಯೋ ಆ ಪಕ್ಷ ಅಧಿಕಾರವನ್ನು ಕಂಡುಕೊಳ್ಳುತ್ತದೆ. ಇನ್ನು ಮತವನ್ನು ಹಾಕಲು ಜನಸಾಮಾನ್ಯರಿಗೆ ಹಕ್ಕುಗಳಿರುತ್ತದೆ. ಜನರು ತಮ್ಮ ಮತವನ್ನು ಚಲಾಯಿಸಲು ಸಾಕಷ್ಟು ನಿಯಮಗಳಿವೆ.

ದೇಶದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಮತವನ್ನು ಚಲಾಯಿಸುವ ಹಕ್ಕು ಇರುತ್ತದೆ. ಇನ್ನು ಮತ ಚಲಾಯಿಸುವಾಗ ಕೈಬೆರಳಿಗೆ ಶಾಯಿ (Ink) ಹಾಕುವ ಬಗ್ಗೆ ಎಲ್ಲರಿಗು ತಿಳಿದಿರುತ್ತದೆ. ಇದೀಗ ನಾವು ಮತ ಹಾಕುವವರ ಬೆರಳಿಗೆ ಹಾಕುವ ಕಪ್ಪು ಶಾಯಿ ಯಾವುದರಿಂದ ಮಾಡುತ್ತಾರೆ ಅನ್ನುವ ಬಗ್ಗೆ ತಿಳಿಯೋಣ.

Election Ink Information
Image Credit: The Hindu

ಚುನಾವಣೆಯ ಸಮಯದಲ್ಲಿ ನಮ್ಮ ಬೆರಳಿಗೆ ಹಾಕುವ ಕಪ್ಪು ಶಾಯಿ ಯಾವುದರಿಂದ ಮಾಡುತ್ತಾರೆ ಗೊತ್ತಾ…?
ಸಾಮಾನ್ಯವಾಗಿ 18 ವರ್ಷ ಮೇಲ್ಪಟ್ಟವರು ಮತವನ್ನು ಹಾಕಲು ಹಕ್ಕನ್ನು ಪಡೆದುಕೊಂಡಿರುತ್ತಾರೆ. ಇನ್ನ ಚುನಾವಣಾ ಸಮಯ ಬಂದಾಗ ನಮಗೆ ಮತ ಹಾಕುವ ಅವಕಾಶ ಬರುತ್ತದೆ. ಮತ ಚಲಾಯಿಸುವ ವೇಳೆ ನಮ್ಮ ಕೈಬೆರಳುಗಳಿಗೆ ಕಪ್ಪು ಬಣ್ಣದ ಶಾಯಿಯನ್ನು ಹಾಕುತ್ತಾರೆ. ಮತದಾನದ ನಕಲು ತಡೆಯಲು ಭಾರತ ಮತ್ತು ವಿದೇಶಗಳಲ್ಲಿನ ಚುನಾವಣೆಗಳ ಸಂದರ್ಭದಲ್ಲಿ ಅಳಿಸಲಾಗದ ಚುನಾವಣಾ ಶಾಯಿಯನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ, ಇದನ್ನು ಎಡ ತೋರು ಬೆರಳಿನ ಉಗುರು ಮತ್ತು ಹೊರಪೊರೆ ಮೇಲೆ ಬಳಸಲಾಗುತ್ತದೆ.

ಎಲೆಕ್ಟೋರಲ್ ಇಂಕ್ , ಅಳಿಸಲಾಗದ ಶಾಯಿ , ಎಲೆಕ್ಟೋರಲ್ ಸ್ಟೇನ್ ಅಥವಾ ಫಾಸ್ಪರಿಕ್ ಇಂಕ್ ಎಂಬುದು ಅರೆ-ಶಾಶ್ವತ ಶಾಯಿ ಅಥವಾ ಡೈ ಆಗಿದ್ದು, ಎರಡು ಮತದಾನದಂತಹ ಚುನಾವಣಾ ವಂಚನೆಯನ್ನು ತಡೆಗಟ್ಟುವ ಸಲುವಾಗಿ ಚುನಾವಣೆಯ ಸಮಯದಲ್ಲಿ ಮತದಾರರ ತೋರುಬೆರಳಿಗೆ ಅನ್ವಯಿಸಲಾಗುತ್ತದೆ. ನಾಗರಿಕರಿಗೆ ಗುರುತಿನ ದಾಖಲೆಗಳನ್ನು ಯಾವಾಗಲೂ ಪ್ರಮಾಣೀಕರಿಸದ ಅಥವಾ ಸಾಂಸ್ಥಿಕಗೊಳಿಸದ ದೇಶಗಳಿಗೆ ಇದು ಪರಿಣಾಮಕಾರಿ ವಿಧಾನವಾಗಿದೆ.

Election Ink Latest Update
Image Credit: The hindu

ಹೆಚ್ಚು ಸಾಮಾನ್ಯವಾದ ಚುನಾವಣಾ ಶಾಯಿ ಸಂಯೋಜನೆಯು ಸಿಲ್ವರ್ ನೈಟ್ರೇಟ್ ಅನ್ನು ಆಧರಿಸಿದೆ. ಇದು ಹಲವಾರು ವಾರಗಳ ಕಾಲ ಸ್ಟೇನ್ ಅನ್ನು ಉಂಟುಮಾಡಬಹುದು. ದೇಶದ ಎಲ್ಲ ರಾಜ್ಯಗಳ ಚುನಾವಣೆಗೆ ಪ್ರಸಿದ್ಧ ಮೈಸೂರು ಶಾಯಿಯನ್ನು ಬಳಸಲಾಗುತ್ತದೆ. ಇದು ಅಳಿಸಲಾಗದ ಶಾಯಿ ಆಗಿದೆ. ಪ್ರತಿ ಬಾಟಲಿಯು 10 ML ಹೊಂದಿರುತ್ತದೆ. ಇದರ ಜೀವಿತ ಅವಧಿಯು ಆರು ತಿಂಗಳುಗಳಾಗಿರುತ್ತದೆ ಮತ್ತು ಪ್ರತಿ 10 ML ಬಾಟಲಿಯು ಸುಮಾರು 700 ರಿಂದ 800 ಮಂದಿಗೆ ಗುರುತನ್ನು ಹಾಕಲಾಗಿತ್ತದೆ.

Join Nadunudi News WhatsApp Group

Join Nadunudi News WhatsApp Group