Electric Bike: ಎಣ್ಣೆ ಕುಡಿದು ಬೈಕ್ ಹತ್ತಿದರೆ ಈ ಬೈಕ್ ಸ್ಟಾರ್ಟ್ ಆಗಲ್ಲ, ಬಂತು ಹೊಸ ಆವಿಷ್ಕಾರದ ಬೈಕ್

ಸವಾರ ಮದ್ಯಪಾನ ಮಾಡಿದ್ರೆ ಸ್ಟಾರ್ಟ್ ಆಗಲ್ಲ ಈ ಬೈಕ್, ನೂತನ ಆವಿಷ್ಕಾರ.

Electric Bike With Alcohol detection System: ಪ್ರಸ್ತುತ ದೇಶದಲ್ಲಿ ತಂತ್ರಜ್ಞಾನಗಳ ಬಳಕೆಯಿಂದಾಗಿ ಹೊಸ ಹೊಸ ಆವಿಷ್ಕಾರಗಳು ಬೆಳಕಿಗೆ ಬಂದಿದೆ. ಈಗಾಗಲೇ ಟೆಕ್ ವಲಯವೇ ಬೆಚ್ಚಿಬೀಳುವಂತ ಅನೇಕ ಆವಿಷ್ಕಾರಗಳು ಪರಿಚಯವಾಗಿದೆ. ಸದ್ಯ ತಂತ್ರಜ್ಞಾನದ ಬಳಕೆಯಿಂದಾಗಿ ಎಲ್ಲರು ಬಾಯಿಯ ಮೇಲೆ ಬೆರಳಿಟ್ಟುಕೊಳ್ಳುವಂತೆ ಇದೀಗ ವಿದ್ಯಾರ್ಥಿಗಳು ವಿಶೇಷ ವಾಹನವೊಂದನ್ನು ತಯಾರಿಸಿದ್ದಾರೆ.

ಇನ್ನು ರಸ್ತೆಗಳಲ್ಲಿ ವಾಹನ ಅಪಘಾತಗಳನ್ನು ತಪ್ಪಿಸಲು ಅನೇಕ ನಿಯಮಾವಳಿಗಳನ್ನು ರೂಪಿಸಲಾಗುತ್ತದೆ. ರಸ್ತೆ ನಿಯಮದಲ್ಲಿ ಮುಖ್ಯ ನಿಯಮವೆಂದರೆ ಕುಡಿದು ವಾಹನ ಚಲಸುವುದಾಗಿದೆ. ಯಾರಾದರೂ ಕುಡಿದು ವಾಹನ ಚಲಾಯಿಸಿ, ಪೋಲೀಸರ ಬಳಿ ಸಿಕ್ಕಿಬಿದ್ದರೆ ಅಂತವರಿಗೆ ದಂಡ ವಿಧಿಸಲಾಗುತ್ತದೆ ಹಾಗೆಯೆ ಕೆಲವೊಮ್ಮೆ ವಾಹನವನ್ನು ಸೀಜ್ ಮಾಡುವ ಸಾಧ್ಯತೆ ಕೂಡ ಇರುತ್ತದೆ. ಸದ್ಯ ಈ ನೂತನ ಆವಿಷ್ಕಾರವು ಕುಡಿದು ವಾಹನ ಚಲಾಯಿಸುವವರ ಸಂಖ್ಯೆಯನ್ನು ಕಡಿಮೆ ಮಾಡಲಿದೆ. 

Electric Bike With Alcohol detection System
Image Credit: Navbharattimes

ಸವಾರ ಮದ್ಯಪಾನ ಮಾಡಿದ್ರೆ ಸ್ಟಾರ್ಟ್ ಆಗಲ್ಲ ಈ ಬೈಕ್
Society Of Automotive Engineers ಕ್ಲಬ್‌ನ ಸಹಯೋಗದೊಂದಿಗೆ ಅಲಹಾಬಾದ್‌ ನ Motilal Nehru National Institute of Technology – Prayagraj National Institute Of Technology ವಿದ್ಯಾರ್ಥಿಗಳು ಈ ಆವಿಷ್ಕಾರವನ್ನು ಮಾಡಿದ್ದಾರೆ. ಇ-ಬೈಕ್, ಸವಾರರು ಬಂದು ಮದ್ಯ ಸೇವಿಸಿ ಚಾಲನೆ ಮಾಡಿದರೆ ಮುಂದಕ್ಕೆ ಚಲಿಸದೆ ನಿಲ್ಲುತ್ತದೆ ಎಂದು ವರದಿಯಾಗಿದೆ. ಅಂದರೆ ಮದ್ಯಪಾನ ಮಾಡಿ ವ್ಯಕ್ತಿ ಬೈಕ್ ಹತ್ತಿದರೆ ಬೈಕ್ ಸ್ಟಾರ್ಟ್ ಆಗುವುದಿಲ್ಲ.

ಈ ಹೊಸ ಎಲೆಕ್ಟ್ರಿಕ್ ಬೈಕ್ ನಾಲ್ಕು ಗಂಟೆಗಳ ಚಾರ್ಜ್‌ ನಲ್ಲಿ 60 km Mileage ನೀಡುವ ಸಾಮರ್ಥ್ಯ ಹೊಂದಿದೆ. ಇದರ ಗರಿಷ್ಠ ವೇಗ ಗಂಟೆಗೆ 70 ಕಿಲೋಮೀಟರ್ ಆಗಿದೆ. ಈ ನೂತನ EV ಸುರಕ್ಷತೆಗಾಗಿ ಹೊಗೆ ಸಂವೇದಕಗಳು, ಕಳ್ಳತನ ಪತ್ತೆ ಹಚ್ಚುವ ಅಲಾರಮ್‌ ಗಳು ಮತ್ತು ಆಲ್ಕೋಹಾಲ್ ಪತ್ತೆ ವ್ಯವಸ್ಥೆಗಳಂತಹ ಸುಧಾರಿತ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಇನ್ನು ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಕಾನೂನು ಬಾಹಿರ ಎನ್ನುವುದು ಎಲ್ಲರಿಗು ತಿಳಿದೇ ಇದೆ. ಆಲ್ಕೋಹಾಲ್ ಪತ್ತೆ ಮಾಡುವ ವ್ಯವಸ್ಥೆಯಿರುವ ವಾಹನ ಮಾರುಕಟ್ಟೆಗೆ ಬಂದರೆ ರಸ್ತೆ ಅಪಘಾತಗಳು ಕಡಿಮೆ ಆಗುವ ಸಂಭವನೀಯತೆ ಇದೆ ಎನ್ನಬಹುದು.

Join Nadunudi News WhatsApp Group

Join Nadunudi News WhatsApp Group