Electric Cars Offer: ಎಲೆಕ್ಟ್ರಿಕ್ ಕಾರ್ ಖರೀದಿಸುವವರಿಗೆ ವರ್ಷಾಂತ್ಯದ ಆಫರ್, ಈ ಕಾರುಗಳ ಮೇಲೆ 4 ಲಕ್ಷ ಡಿಸ್ಕೌಂಟ್

ಈ ತಿಂಗಳಲ್ಲಿ ಕಾರು ಖರೀದಿ ಮಾಡುವ ಪ್ಲಾನ್ ಇದ್ದವರಿಗೆ ಇಲ್ಲಿದೆ ಶುಭ ಸುದ್ದಿ, ಈ ಎಲೆಕ್ಟ್ರಿಕ್ ಕಾರುಗಳ ಬೆಲೆಯಲ್ಲಿ ಭರ್ಜರಿ ಡಿಸ್ಕೌಂಟ್, ಇಂದೇ ಖರೀದಿಸಿ

Electric Cars Offer: ದೇಶದಲ್ಲಿ ಈಗ ಎಲ್ಲಾ ಕಡೆ ಎಲೆಕ್ಟ್ರಿಕ್ ವಾಹನಗಳದ್ದೇ ಕಾರುಬಾರು. ಡೀಸೆಲ್ ಹಾಗು ಪೆಟ್ರೋಲ್(Petrol) ಬೆಲೆ ಗಗನಕ್ಕೆ ಏರಿರುವುದರಿಂದ ವಾಹನ ಖರೀದಿ ಮಾಡುವವರು ಎಲೆಕ್ಟ್ರಿಕ್ ವಾಹನಗಳ ಕಡೆ ಗಮನ ಹರಿಸುತ್ತಿದ್ದಾರೆ.

ಅದರಲ್ಲೂ ಎಲೆಕ್ಟ್ರಿಕ್ ಕಾರು ಖರೀದಿಯಲ್ಲಿ ಗ್ರಾಹಕರು ಮುಗಿಬಿದ್ದಿದ್ದು, ಅಂತವರಿಗೆ ಇಲ್ಲಿದೆ ಬಂಪರ್ ಡಿಸ್ಕೌಂಟ್ ಆಫರ್. ಇದು ವರ್ಷದ ಕೊನೆಯ ತಿಂಗಳಾಗಿದ್ದು, ಕಾರು ಕಂಪನಿಗಳು ಹಳೆಯ ಸ್ಟಾಕ್ ಅನ್ನು ಮಾರಾಟ ಮಾಡಲು ಕಾರುಗಳ ಬೆಲೆಯಲ್ಲಿ ಹೆಚ್ಚು ಡಿಸ್ಕೌಂಟ್‌ಗಳನ್ನು ನೀಡಲು ಮುಂದಾಗಿದ್ದಾರೆ . ಸದ್ಯ ವಿವಿಧ ಕಾರು ಕಂಪನಿಗಳ ಎಲೆಕ್ಟ್ರಿಕ್ ಮಾದರಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಲಾಗಿದೆ.

ಈ ಆಫರ್‌ಗಳು ಡಿಸೆಂಬರ್ ತಿಂಗಳಾಂತ್ಯದವರೆಗೆ ಮಾತ್ರ ಇರುತ್ತವೆ. ಹಾಗೆಯೇ ಪ್ರಾಂತ್ಯವಾರು ಆಫರ್‌ಗಳಲ್ಲಿ ವ್ಯತ್ಯಾಸ ಇರುವುದರಿಂದ ಸ್ಥಳೀಯ ಡೀಲರ್‌ಗಳನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.

MG ZS EV
Image Credit: team Bhp

MG ZS EVಎಲೆಕ್ಟ್ರಿಕ್ ಕಾರು ರಿಯಾಯಿತಿಯಲ್ಲಿ ಲಭ್ಯವಿದೆ

ಉತ್ತಮ ಎಲೆಕ್ಟ್ರಿಕ್ ಕಾರುಗಳಲ್ಲಿ ಒಂದಾದ MG ZS EV ಕಾರಿನ ಬೆಲೆಗಳನ್ನು ಕೆಲ ತಿಂಗಳ ಹಿಂದೆಯಷ್ಟೆ 2.2 ಲಕ್ಷ ರೂ. ಕಡಿಮೆ ಮಾಡಲಾಗಿದೆ. ಇದೀಗ ವರ್ಷಾಂತ್ಯದ ಡಿಸ್ಕೌಂಡ್ ಕೂಡ ಘೋಷಿಸಿದ್ದಾರೆ. MG ZS EV ರೂ.50,000 ವರೆಗಿನ ನಗದು ರಿಯಾಯಿತಿಯೊಂದಿಗೆ ಲಭ್ಯವಿದೆ. ರೂ.50,000 ವಿನಿಮಯ ಬೋನಸ್ ಜೊತೆಗೆ ಕಾರ್ಪೊರೇಟ್ ಮತ್ತು ಲಾಯಲ್ಟಿ ಬೋನಸ್‌ಗಳು ಕೂಡ ಒಳಗೊಂಡಿವೆ.

Join Nadunudi News WhatsApp Group

Tata Tigor EV ಕಾರಿನ ಬೆಲೆಯಲ್ಲಿ ಬಾರಿ ರಿಯಾಯಿತಿ

Tata Tigor EV ಅನ್ನು ಸ್ಟಾಕ್ ಲಭ್ಯತೆ ಮತ್ತು ಸ್ಥಳವನ್ನು ಆಧರಿಸಿ ಆಯ್ದ ಟ್ರಿಮ್‌ಗಳಲ್ಲಿ ಡೀಲರ್-ಎಂಡ್ ಡಿಸ್ಕೌಂಟ್‌ಗಳನ್ನು ನೀಡಲಾಗುತ್ತಿದೆ. ಹಾಗೆಯೇ ಕೆಲವೇ ತಿಂಗಳುಗಳ ಹಿಂದೆ ಬಿಡುಗಡೆಯಾಗಿದ್ದ MG ಕಾಮೆಟ್ EV ಅನ್ನು ಈ ತಿಂಗಳು ಲಾಯಲ್ಟಿ ಬೋನಸ್‌ನೊಂದಿಗೆ ಖರೀದಿಸುವ ಅವಕಾಶ ಕಲ್ಪಿಸಲಾಗಿದೆ. ರೂ.20,000 ಲಾಯಲ್ಟಿ ಬೋನಸ್ ಮತ್ತು ಮೊದಲ ವರ್ಷ ವಿಮೆ ಜೊತೆಗೆ 5,000 ರೂ. ಕಾರ್ಪೊರೇಟ್ ರಿಯಾಯಿತಿ ನೀಡಲಾಗುತ್ತಿದೆ.

Tata Tigor EV
Image Credit: Hindustantimes

ಈ ಎಲ್ಲಾ ಎಲೆಕ್ಟ್ರಿಕ್ ಕಾರುಗಳ ಬೆಲೆಯಲ್ಲಿ ಡಿಸ್ಕೌಂಟ್

Tata Tigo EV ಗಾಗಿ ಯಾವುದೇ ಕೊಡುಗೆಗಳಿಲ್ಲದಿದ್ದರೂ, Kia EV6 ಫ್ಲ್ಯಾಗ್‌ಶಿಪ್ ಎಲೆಕ್ಟ್ರಿಕ್ ಕ್ರಾಸ್‌ಒವರ್ ಉತ್ತಮ ಡೀಲರ್-ಮಟ್ಟದ ಪ್ರಯೋಜನಗಳನ್ನು ಹೊಂದಬಹುದು ಎಂದು ಹೇಳಲಾಗುತ್ತಿದೆ. ಟಾಟಾ ಮೋಟಾರ್ಸ್ ಇತ್ತೀಚೆಗೆ ಫೇಸ್‌ಲಿಫ್ಟೆಡ್ ನೆಕ್ಸಾನ್ EV ಅನ್ನು ಪರಿಚಯಿಸಿತು. ಇದು ಈ ತಿಂಗಳು ಗಮನಾರ್ಹ ರಿಯಾಯಿತಿಗಳನ್ನು ಪಡೆದಿಲ್ಲವಾದರೂ, ಹಳೆ-ಫೇಸ್‌ಲಿಫ್ಟೆಡ್ ಮಾಡೆಲ್‌ ಕಂಡುಬಂದರೆ, ಉತ್ತಮ ಕೊಡುಗೆಗಳನ್ನು ವಿತರಕರೊಂದಿಗೆ ಮಾತುಕತೆ ನಡೆಸಬಹುದು.

ಹ್ಯುಂಡೈ Ioniq 5 ಸೇರಿದಂತೆ ಇನ್ನೂ ಹಲವು ಮಾದರಿಗಳಿಗೆ ವರ್ಷಾಂತ್ಯದಲ್ಲಿ ಯಾವುದೇ ಗಮನಾರ್ಹ ಕೊಡುಗೆಗಳನ್ನು ನೀಡಿಲ್ಲ. ಉಳಿದಂತೆ ಮೇಲೆ ತಿಳಿಸಿರುವ ಮಾದರಿಗಳು ತಿಂಗಳಾಂತ್ಯದವರೆಗೆ ಮಾತ್ರ ಆಫರ್‌ನಲ್ಲಿ ಇರುತ್ತವೆ. ಹಾಗೆಯೇ ನಾವು ಇಲ್ಲಿ ಹೇಳಲಾಗಿರುವ ಎಲ್ಲಾ ರಿಯಾಯಿತಿ ಡೀಲ್‌ಗಳು ಸ್ಟಾಕ್, ಡೀಲರ್ ಮತ್ತು ಸ್ಥಳದ ಲಭ್ಯತೆಗೆ ಒಳಪಟ್ಟಿರುತ್ತವೆ.

Join Nadunudi News WhatsApp Group