Electricity Bill: ಫ್ರೀ ಕರೆಂಟ್ ಕೊಟ್ಟು ಮತ್ತೆ ಆಘಾತ ಕೊಡಲು ಮುಂದಾದ ಸರ್ಕಾರ, ಮತ್ತೆ ವಿದ್ಯುತ್ ಬೆಲೆ ಇಷ್ಟು ಹೆಚ್ಚಾಗಲಿದೆ.

ಫ್ರೀ ಕರೆಂಟ್ ಕೊಟ್ಟು ಮತ್ತೆ ವಿದ್ಯುತ್ ಬೆಲೆ ಹೆಚ್ಚಳ ಮಾಡಲು ಮುಂದಾದ ಸರ್ಕಾರ

Electricity Bill Hike 2024: ರಾಜ್ಯ ಸರ್ಕಾರ ಗೃಹ ಜ್ಯೋತಿ ಯೋಜನೆಯಡಿ 200 ಯುನಿಟ್ ಕ್ಕಿಂತ ಕಡಿಮೆ ವಿದ್ಯುತ್ ಬಳಸುವ ಪ್ರತಿ ಕುಟುಂಬಗಳಿಗೆ ಉಚಿತ ವಿದ್ಯುತ್ ನೀಡುತ್ತಿದೆ. ತಿಂಗಳ ಸರಾಸರಿ ಲೆಕ್ಕಾಚಾರದ ಮೇಲೆ ಅರ್ಹ ಫಲಾನುಭವಿಗಳು ಉಚಿತ ವಿದ್ಯುತ್ ಅನ್ನು ಪಡೆಯುತ್ತಿದ್ದಾರೆ. ರಾಜ್ಯದ ಜನತೆಗೆ ಉಚಿತ ವಿದ್ಯುತ್ ನ ಖುಷಿಯಲ್ಲಿದ್ದಾರೆ ಎನ್ನಬಹುದು.

ಸದ್ಯ ರಾಜ್ಯ ಸರ್ಕಾರ ಉಚಿತ ವಿದ್ಯುತ್ ನೀಡಿದ ಬೆನ್ನಲ್ಲೇ ಮತ್ತೊಮ್ಮೆ ವಿದ್ಯುತ್ ದರದ ಪರಿಷ್ಕರಣೆಗೆ ಮುಂದಾಗಿದೆ. ಗೃಹಜ್ಯೋತಿ ಯೋಜನೆಯಡಿಯಲ್ಲಿ ಜನ ಸಾಮಾನ್ಯರಿಗೆ ಉಚಿತ ವಿದ್ಯುತ್ ನೀಡುತ್ತಿದ್ದು, ಈ ಯೋಜನೆಯು ವಿದ್ಯುತ್ ಬಿಲ್ ಕಟ್ಟುವವರ ಮೇಲೆ ಪರಿಣಾಮ ಬೀರುತ್ತಿದೆ ಎನ್ನಬಹುದು.

Electricity Bill Hike
Image Credit: Bijlibachao

ಫ್ರೀ ಕರೆಂಟ್ ಕೊಟ್ಟು ಮತ್ತೆ ಆಘಾತ ಕೊಡಲು ಮುಂದಾದ ಸರ್ಕಾರ
ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆಯಾ ಕಾರಣವನ್ನು ಇಟ್ಟುಕೊಂಡು ಸರ್ಕಾರ ವಿದ್ಯುತ್ ದರ ಪರಿಷ್ಕರಣೆಗೆ ಮುಂದಾಗಿದೆ. ಕಳೆದ ಜೂನ್ ತಿಂಗಳಲ್ಲಿ ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಅನ್ವಯವಾಗುವಂತೆ ಪ್ರತಿ ಯೂನಿಟ್ ಗೆ 50 ಪೈಸೆ ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ ಶುಲ್ಕ ಹೆಚ್ಚಳ ಮಾಡಲಾಗಿತ್ತು.

November ತಿಂಗಳಿಗೆ ಸೀಮಿತವಾಗಿ ಮತ್ತೆ 35 ಪೈಸೆ ಹೆಚ್ಚುವರಿ ಶುಲ್ಕ ವಿಧಿಸಲಾಗಿದೆ. ನವೆಂಬರ್ ತಿಂಗಳಲ್ಲಿ ಪ್ರತಿ ಯೂನಿಟ್ ಗೆ 85 ಪೈಸೆ ಹೆಚ್ಚುವರಿ ಶುಲ್ಕ ಪಾವತಿಸಬೇಕು. ಇನ್ನು October ತಿಂಗಳಿನಲ್ಲಿ 1.10 ರೂ. ಹೆಚ್ಚುವರಿ ಶುಲ್ಕ ವಿಧಿಸಲಾಗಿತ್ತು. ಪ್ರತಿ ಬಾರಿಯಂತೆ ಈ ವರ್ಷವೂ ವಿದ್ಯುತ್ ದರವನ್ನು 40 ಪೈಸೆಯಿಂದ 60 ಪೈಸೆಗೆ ಹೆಚ್ಚಿಸುವಂತೆ ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳಾದ ಬೆಸ್ಕಾಂ, ಮೆಕ್ಕಮ್, ಚೆಕ್ಕಮ್ ಮತ್ತು ಇತರ ಕಂಪನಿಗಳು ಸರ್ಕಾರಕ್ಕೆ ಮನವಿ ಮಾಡಿವೆ.

Join Nadunudi News WhatsApp Group

Join Nadunudi News WhatsApp Group