ಮನೆಯಲ್ಲಿ ಕರೆಂಟ್ ಬಳಸುವ ಎಲ್ಲರಿಗೂ ಶಾಕಿಂಗ್ ಸುದ್ದಿ, ಇನ್ನುಮುಂದೆ ಕಟ್ಟಬೇಕು ಹೆಚ್ಚಿನ ಹಣ, ದರದಲ್ಲಿ ಹೆಚ್ಚಳ ನೋಡಿ.

ಪ್ರಸ್ತುತ ದಿನಗಳಲ್ಲಿ ಮನೆಯಲ್ಲಿ ಕರೆಂಟ್ ಎಲ್ಲರೂ ಬಳಕೆ ಮಾಡೇ ಮಾಡುತ್ತಾರೆ ಮತ್ತು ಕರೆಂಟ್ ಬಳಸದ ಮನೆ ಇಲ್ಲ ಎಂದು ಹೇಳಬಹುದು. ಇನ್ನು ದೇಶದಲ್ಲಿ ಎಲ್ಲಾ ವಸ್ತುಗಳ ಬೆಲೆ ಏರಿಕೆ ಆಗಿದ್ದು ಇದು ನೇರವಾಗಿ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಹೇಳಬಹುದು. ಇನ್ನು ಇದರ ನಡುವೆ ಜನರು ಬಳಸುವ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆ ಆಗಿದ್ದು ಜನರು ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ ಎಂದು ಹೇಳಬಹುದು. ಪೆಟ್ರೋಲ್, ಡಿಸೇಲ್, ಅಡುಗೆ ಎಣ್ಣೆ ಬೆಲೆ ಏರಿಕೆಯ ಜೊತೆಗೆ ಈಗ ರಾಜ್ಯದಲ್ಲಿ ವಿದ್ಯುತ್ ದರವನ್ನ ಕೂಡ ಏರಿಕೆ ಮಾಡಲು ಸರ್ಕಾರ ತೀರ್ಮಾನವನ್ನ ಮಾಡಿದೆ.

ಹಾಗಾದರೆ ಹೊಸ ವಿದ್ಯುತ್ ದರದಲ್ಲಿ ಎಷ್ಟು ಏರಿಕೆ ಆಗಲಿದೆ ಮತ್ತು ಈ ಹೊಸ ಯಾವಾಗ ಜಾರಿಗೆ ಬರಲಿದೆ ಅನ್ನುವುದರ ಬಗೆಗ್ ತಿಳಿಯೋಣ ಬನ್ನಿ. ಹೌದು ರಾಜ್ಯದಲ್ಲಿ ಜುಲ ಮೊದಲ ವರವು ವಿದ್ಯುತ್ ಬೆಲೆಯಲ್ಲಿ ಭಾರಿ ಪ್ರಮಾಣದ ಏರಿಕೆ ಮಾಡಲು ರಾಜ್ಯ್ ಸರ್ಕಾರ ತೀರ್ಮಾನವನ್ನ ಮಾಡಿದ್ದು ಅದರ ಕುರಿತು ಆದೇಶವನ್ನ ಕೂಡ ಹೊರಡಿಸಿದೆ. ಹೌದು ರಾಜ್ಯ ಸರ್ಕಾರ ವಿದ್ಯುತ್ ಬೆಲೆಯಲ್ಲಿ 19 ರೂಪಾಯಿಯಿಂದ 31 ರೂಪಾಯಿಯ ತನಕ ಏರಿಕೆ ಮಾಡಲು ತೀರ್ಮಾನ ಮಾಡಿದ್ದು ಮುಂದಿನ ತಿಂಗಳಿಂದ ಜನರು ಹೆಚ್ಚಿನ ಹಣವನ್ನ ವಿದ್ಯುತ್ ದರದಲ್ಲಿ ಪಾವತಿ ಮಾಡಬೇಕು ಎಂದು ಹೇಳಬಹುದು.

electricity supply india

ಮನೆಯಲ್ಲಿ ಪ್ರತಿ ತಿಂಗಳು 100 ಯೂನಿಟ್ ಕರೆಂಟ್ ಬಳಸುವ ಗ್ರಾಹಕರು ಇನ್ನುಮುಂದೆ 19 ರೂಪಾಯಿಯಿಂದ 31 ರೂಪಾಯಿಯ ವರೆಗೆ ಹೆಚ್ಚಿನ ಹಣವನ್ನ ಪಾವತಿ ಮಾಡಬೇಕು ಎಂದು ರಾಜ್ಯ ಸರ್ಕಾರ ಮಾಹಿತಿಯಲ್ಲಿ ಹೇಳಿದೆ. ವಿದ್ಯುತ್ ಬಳಕೆಗೆ ಬೇಕಾಗಿರುವ ಕಲ್ಲಿದ್ದಲಿನ ದರ ಕಳೆದ ಎರಡು ವರ್ಷಗಳಿಂದ ಬಹಳ ಏರಿಕೆ ಆಗಿರುವ ಹಿನ್ನಲೆಯಲ್ಲಿ ಸರ್ಕಾರ ನಷ್ಟವನ್ನ ಅನುಭವಿಸುತ್ತಿದ್ದು ಈ ಕಾರಣಗಳಿಂದ ಜುಲೈ ಮೊದಲ ವಾರದಿಂದಲೇ ವಿದ್ಯುತ್ ಬೆಲೆಯಲ್ಲಿ ಬಾರಿ ಪ್ರಮಾಣದ ಏರಿಕೆ ಮಾಡಲು ಸರ್ಕಾರ ನಿರ್ಧಾರವನ್ನ ಮಾಡಲಿದೆ ಎಂದು ಹೇಳಲಾಗುತ್ತಿದೆ.

ಕಳೆದ ಎರಡು ವರ್ಷಗಳಲ್ಲಿ ಕಲ್ಲಿದ್ದಲಿನ ದರದಲ್ಲಿ ಭಾರಿ ಪ್ರಮಾಣದ ಏರಿಕೆಯಾದ ಹಿನ್ನಲೆಯಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಬೆಸ್ಕಾಂ, ಮೆಸ್ಕಾಂ, ಹೆಸ್ಕಾಂ, ಗೆಸ್ಕಾಂ ಪ್ರಸ್ತಾವನೆಯನ್ನ ಸಲ್ಲಿಸಲಾಗಿತ್ತು, ಈ ಕಾರಣಗಳಿಂದ ದರವನ್ನ ಹೆಚ್ಚಳ ಮಾಡಲಾಗಿದೆ. ಇನ್ನು ಬೆಲೆಯಲ್ಲಿ ಏರಿಕೆ ಮಾಡಲು ಪ್ರಮುಖ ಕಾರಣಗಳು ಏನು ಅಂದರೆ, ಶಾಖೋತ್ಪನ್ನ ವಿದ್ಯುತ್ ಘಟಕಗಳಲ್ಲಿ ಉತ್ಪಾದನೆಯ ವೆಚ್ಚ ಹೆಚ್ಚಳ, ಕಲ್ಲಿದ್ದಲಿನ ಅಭಾವ ಮತ್ತು ದರದಲ್ಲಿ ಹೆಚ್ಚಳ ಹಾಗು ಆರ್ಥಿಕವಾಗಿ ನಷ್ಟದಲ್ಲಿರುವ ಎಸ್ಕಾಂಗಳು. ಈ ಎಲ್ಲಾ ಕಾರಣಗಳಿಂದ ದರವನ್ನ ಹೆಚ್ಚಳ ಮಾಡಲಿದೆ ಎಂದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಹೇಳಿದೆ.

Join Nadunudi News WhatsApp Group

electricity supply india

Join Nadunudi News WhatsApp Group