Emergency Vehicle Service: ಮನೆಯಲ್ಲಿ ಪ್ರಾಣಿ ಸಾಕುವವರಿಗೆ ಗುಡ್ ನ್ಯೂಸ್, ಇನ್ಮುಂದೆ ಈ ಸಂಖ್ಯೆಗೆ ಕರೆ ಮಾಡಿದರೆ ಮನೆ ಬಾಗಿಲಿಗೆ ವೈದ್ಯರು.

ಇನ್ಮುಂದೆ ಈ ಸಂಖ್ಯೆಗೆ ಕರೆ ಮಾಡಿದರೆ ಮನೆ ಬಾಗಿಲಿಗೆ ವೈದ್ಯರು

Emergency Vehicle Service For Pets: ಸದ್ಯ ರಾಜ್ಯ ಸರ್ಕಾರ ಅನೇಕ ಹೊಸ ಹೊಸ ನಿಯಮವನ್ನು ಪರಿಚಯಿಸುತ್ತಿದೆ. ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಅನೇಕ ಸೌಲಭ್ಯ್ಯವನ್ನು ಸರ್ಕಾರ ನೀಡುತ್ತಿದೆ. ಸದ್ಯ ರಾಜ್ಯ ಸರ್ಕಾರ ಪ್ರಾಣಿ ಸಾಕಾಣಿಕೆ ಮಾಡುವವರಿಗೆ ವಿಶೇಷ ಸೌಲಭ್ಯವನ್ನು ನೀಡಲು ಮುಂದಾಗಿದೆ.

ಪ್ರಾಣಿಗಳ ಆರೋಗ್ಯ ರಕ್ಷಣೆಯ ಕಾಳಜಿಯಿಂದ ರಾಜ್ಯ ಸರ್ಕಾರ ಈ ಹೊಸ ಸೇವೆಯನ್ನು ನೀಡಲು ಮುಂದಾಗಿದೆ. ರಾಜ್ಯ ಸರ್ಕಾರದ ಈ ಹೊಸ ಯೋಜನೆಯು ಪ್ರಾಣಿ ಸಾಕಾಣಿಕೆ ಮಾಡುವವರಿಗೆ ಸಾಕಷ್ಟು ಉಪಯೋಗಕಾರಿ ಆಗಲಿದೆ.

Emergency Vehicle Service For Pets
Image Credit: My Pet Ambulance

ಮನೆಯಲ್ಲಿ ಪ್ರಾಣಿ ಸಾಕುವವರಿಗೆ ಗುಡ್ ನ್ಯೂಸ್
ಜಿಲ್ಲೆಯ ರೈತರ ಜಾನುವಾರುಗಳ ತುರ್ತು ಚಿಕಿತ್ಸೆಗಾಗಿ ರಾಜ್ಯ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು “ತುರ್ತು ವಾಹನ ಸೇವೆ” (ಆಂಬುಲೆನ್ಸ್) ಪ್ರಾರಂಭಿಸಿದೆ. ಪಶು ಚಿಕಿತ್ಸಾಲಯ ಇಲ್ಲದ ಗ್ರಾಮಗಳ ರೈತರು ಜಾನುವಾರುಗಳ ತುರ್ತು ಚಿಕಿತ್ಸೆಗಾಗಿ ಸಹಾಯವಾಣಿ ಸಂಖ್ಯೆ 1962ಕ್ಕೆ ಕರೆ ಮಾಡಬೇಕೆಂದು ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತುರ್ತು ಚಿಕಿತ್ಸೆಗಾಗಿ ಸಹಾಯವಾಣಿ ಸಂಖ್ಯೆ 1962ಕ್ಕೆ ಕರೆ ಮಾಡಿ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು. ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮದಡಿ ರೈತರ ಮನೆ ಬಾಗಿಲಿಗೆ ತುರ್ತು ಪಶುವೈದ್ಯಕೀಯ ಸೇವೆಗಳನ್ನು ಒದಗಿಸಲು 290 ಸುಸಜ್ಜಿತ ಸಂಚಾರಿ ಪಶುವೈದ್ಯಕೀಯ ವಾಹನಗಳನ್ನು ಒದಗಿಸಲಾಗಿದೆ. ಈ ಮೂಲಕ ಪ್ರಾಣಿ ಸಾಕಾಣಿಕೆ ಮಾಡುವವರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ.

Emergency Vehicle Service For Pets New Update
Image Credit: nbcsandiego

ಇನ್ಮುಂದೆ ಈ ಸಂಖ್ಯೆಗೆ ಕರೆ ಮಾಡಿದರೆ ಮನೆ ಬಾಗಿಲಿಗೆ ವೈದ್ಯರು
ಸುಸಜ್ಜಿತ ಆಂಬ್ಯುಲೆನ್ಸ್ ವಾಹನ, ಶಸ್ತ್ರಚಿಕಿತ್ಸಾ ಘಟಕ, ಪ್ರಯೋಗಾಲಯ, ಸ್ಕ್ಯಾನಿಂಗ್ ಉಪಕರಣಗಳಂತಹ ಆಧುನಿಕ ಪಶು ವೈದ್ಯಕೀಯ ಸೇವೆಗಳನ್ನು ಅಳವಡಿಸಲಾಗಿದೆ. ಪ್ರಸೂತಿ ಮತ್ತು ಶಸ್ತ್ರಚಿಕಿತ್ಸಾ ಸಲಕರಣೆಗಳ ಕಿಟ್, ಮರಣೋತ್ತರ ಪರಿಕರಗಳ ಕಿಟ್, ವಾಶ್ ಬೇಸಿನ್, ಆಮ್ಲಜನಕ ಬೆಂಬಲ ವ್ಯವಸ್ಥೆ ಒಳಗೊಂಡಿದ್ದು, ಪ್ರತಿ ಪಾಲಿಕ್ಲಿನಿಕ್‌ ನಲ್ಲಿ ಒಬ್ಬ ಶಸ್ತ್ರಚಿಕಿತ್ಸಕ ಮತ್ತು ಸಹಾಯಕರನ್ನು ನೇಮಿಸಲಾಗಿದೆ.

Join Nadunudi News WhatsApp Group

ಪಶು ಪಾಲಕರ ಸಹಾಯವಾಣಿ ಸಂಖ್ಯೆ-1962ಕ್ಕೆ ಕರೆ ಮಾಡಿದರೆ ರೋಗಪೀಡಿತ ಜಾನುವಾರುಗಳ ಸ್ಥಳಕ್ಕೆ ವಾಹನ ತೆರಳಿ ವೈದ್ಯಕೀಯ ಸೇವೆ ಒದಗಿಸಲಾಗುವುದು. ವಾಹನದಲ್ಲಿ ಜಾನುವಾರುಗಳನ್ನು ಕರೆದುಕೊಂಡು ಹೋಗಿ ವಿಷಪ್ರಾಶನ, ಹೆರಿಗೆ ಸಮಸ್ಯೆ, ಹೊಟ್ಟೆನೋವು, ಉಸಿರುಗಟ್ಟುವಿಕೆ, ಅಪಘಾತ, ಮೂಳೆ ಮುರಿತ ಮುಂತಾದ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುವ ಮೂಲಕ ಸಮಸ್ಯೆಗಳು ನಿವಾರಿಸಿಕೊಳ್ಳಬಹುದು.

Emergency Vehicle Service
Image Credit: Bangaloremirror

Join Nadunudi News WhatsApp Group