Employees Gratuity: ಇಂತಹ ಸರ್ಕಾರೀ ನೌಕರರಿಗೂ ಕೂಡ ಸಿಗಲಿದೆ ಗ್ರಾಚ್ಯುಟಿ, ಸರ್ಕಾರದಿಂದ ಹೊಸ ನಿಯಮ

ನೌಕರರು ಇಷ್ಟು ವರ್ಷಗಳ ಕಾಲ ಕೆಲಸ ಮಾಡಿದರೆ ಅವರು ಗ್ರಾಚ್ಯುಟಿ ಪಡೆಯಲು ಅರ್ಹರಾಗಿರುತ್ತಾರೆ

Govt Employees Gratuity Rule: ಯಾವುದೇ ಸರ್ಕಾರೀ ಉದ್ಯೋಗಿಯೂ ಐದು ಅಥವಾ ಅದಕ್ಕಿಂತಲೂ ಹೆಚ್ಚು ವರ್ಷಗಳ ಕಾಲ ಒಂದೇ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದರೇ ಅಂತಹ ಉದ್ಯೋಗಿಗಳಿಗೆ ಸರ್ಕಾರವು ಗೌರವಧನದ ರೂಪದಲ್ಲಿ ಗ್ರಾಚ್ಯುಟಿಯನ್ನು ನೀಡುತ್ತದೆ ಎನ್ನುವುದು ಎಲ್ಲರಿಗೆ ತಿಳಿದಿರುವ ವಿಚಾರ. ಸರ್ಕಾರೀ ಕೆಲಸದಲ್ಲಿರುವ ಪ್ರತಿಯೊಬ್ಬರೂ ಕೂಡ ಗ್ರಾಚ್ಯುಟಿಯನ್ನು ಪಡೆಯಲು ಅರ್ಹರಾಗಿರುತ್ತಾರೆ. ಆದರೆ ಗ್ರಾಚ್ಯುಟಿಯನ್ನು ಪಡೆಯಲು ಸರ್ಕಾರದ ನಿಯಮ ಅನ್ವಯವಾಗಲಿದೆ.

government employees gratuity update
Image Credit: byefellcob

ಇಂತಹ ಸರ್ಕಾರೀ ನೌಕರರಿಗೂ ಕೂಡ ಸಿಗಲಿದೆ ಗ್ರಾಚ್ಯುಟಿ
ಐದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ನೌಕರರು ಕಾರ್ಯನಿರ್ವಹಿಸದಿದ್ದರೆ ಅಂತವರು ಗ್ರಾಚ್ಯುಟಿಯನ್ನು ಪಡೆಯಲು ಅರ್ಹರಾಗಿರುತ್ತಾರೆಯೇ..? ಎನ್ನುವ ಪ್ರಶ್ನೆ ಹಲವರಲ್ಲಿ ಮೂಡಿರಬಹುದು. ಇನ್ನು ಖಾಸಗಿ ಕೆಲಸದಲ್ಲಿದ್ದು, 5 ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಕೆಲಸ ಮಾಡಿದರೆ ಕೂಡ ಗ್ರಾಚ್ಯುಟಿಯನ್ನು ಪಡೆಯುವ ಅವಕ್ಷವಿರುತ್ತದೆ. ಆದರೆ ಈ ಗ್ರಾಚ್ಯುಟಿಯನ್ನು ಪಡೆಯಲು ಸರ್ಕಾರದ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಖಾಸಗಿ ಉದ್ಯೋಗಿಗಳಿಗೆ ಗ್ರಾಚ್ಯುಟಿ ಅನ್ವಯವಾಗಲಿದೆಯೇ..?
ಪಾವತಿ ಮತ್ತು ಗ್ರಾಚ್ಯುಟಿ ಕಾಯ್ದೆಯು ದೇಶದ ಎಲ್ಲಾ ಕಾರ್ಖಾನೆಗಳು, ಗಣಿಗಳು, ತೈಲ ಕ್ಷೇತ್ರಗಳು, ಬಂದರುಗಳು ಮತ್ತು ರೈಲ್ವೆಗಳಿಗೆ ಅನ್ವಯಿಸುತ್ತದೆ. ಇದರೊಂದಿಗೆ, 10 ಕ್ಕಿಂತ ಹೆಚ್ಚು ಜನರು ಕೆಲಸ ಮಾಡುವ ಅಂಗಡಿಗಳು ಮತ್ತು ಕಂಪನಿಗಳ ಉದ್ಯೋಗಿಗಳು ಸಹ ಗ್ರಾಚ್ಯುಟಿಯ ಪ್ರಯೋಜನವನ್ನು ಪಡೆಯುತ್ತಾರೆ.

Govt Employees Gratuity Rule
Image Credit: Krishijagran

ಗ್ರಾಚ್ಯುಟಿ ಎಷ್ಟು ವರ್ಷಗಳ ಕೆಲಸದ ನಂತರ ಸಿಗಲಿದೆ..?
ಯಾವುದೇ ಸಂಸ್ಥೆಯಲ್ಲಿ 5 ವರ್ಷಗಳ ಕಾಲ ನಿರಂತರವಾಗಿ ಕೆಲಸ ಮಾಡುವ ಉದ್ಯೋಗಿಗಳು ಗ್ರಾಚ್ಯುಟಿಗೆ ಅರ್ಹರಾಗುತ್ತಾರೆ. ಆದರೆ ಕೆಲವು ಸಂದರ್ಭಗಳಲ್ಲಿ ಗ್ರಾಚ್ಯುಟಿಯ ಪ್ರಯೋಜನವು 5 ವರ್ಷಗಳಿಗಿಂತ ಕಡಿಮೆ ಸೇವೆಗೆ ಸಹ ಲಭ್ಯವಿದೆ. ನಿರಂತರ ಕೆಲಸವನ್ನು ಗ್ರಾಚ್ಯುಟಿ ಕಾಯಿದೆಯ ಸೆಕ್ಷನ್ 2A ಯಲ್ಲಿ ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದೆ. ಇದರ ಪ್ರಕಾರ ಅನೇಕ ಉದ್ಯೋಗಿಗಳು ಪೂರ್ಣ 5 ವರ್ಷಗಳ ಕಾಲ ಕೆಲಸ ಮಾಡದಿದ್ದರೂ ಸಹ ಗ್ರಾಚ್ಯುಟಿಯ ಪ್ರಯೋಜನವನ್ನು ಪಡೆಯಬಹುದು.

5 ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಸೇವೆ ಸಲ್ಲಿಸಿದವರಿಗೆ ಗ್ರಾಚ್ಯುಟಿ ಸಿಗಲಿದೆಯೇ..?
ಗ್ರಾಚ್ಯುಟಿ ಕಾಯ್ದೆಯ ಸೆಕ್ಷನ್ 2A ಪ್ರಕಾರ, ಭೂಗತ ಗಣಿಗಳಲ್ಲಿ ಕೆಲಸ ಮಾಡುವ ನೌಕರರು ತಮ್ಮ ಉದ್ಯೋಗದಾತರೊಂದಿಗೆ ನಿರಂತರ 4 ವರ್ಷಗಳು ಮತ್ತು 190 ದಿನಗಳನ್ನು ಪೂರ್ಣಗೊಳಿಸಿದರೆ, ಅವರು ಗ್ರಾಚ್ಯುಟಿಯ ಪ್ರಯೋಜನವನ್ನು ಪಡೆಯುತ್ತಾರೆ. ಆದರೆ ಇತರ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು 4 ವರ್ಷ 240 ದಿನಗಳು ಕೆಲಸ ಮಾಡಿದ ನಂತರ ಗ್ರಾಚ್ಯುಟಿಗೆ ಅರ್ಹರಾಗುತ್ತಾರೆ.

Join Nadunudi News WhatsApp Group

ಗ್ರಾಚ್ಯುಟಿಯನ್ನು ಹೇಗೆ ಲೆಕ್ಕಾಚಾರ ಮಾಡಲಾಗುತ್ತದೆ..?
Total gratuity amount = (final salary) x (15/26) x (number of years worked in the company) ನ ಪ್ರಕಾರ ಗ್ರಾಚ್ಯುಟಿಯ ಮೊತ್ತವನ್ನು ಲೆಕ್ಕಾಚಾರ ಮಾಡಲಾಗುತ್ತದೆ.

Join Nadunudi News WhatsApp Group