Energizer: ಒಮ್ಮೆ ಚಾರ್ಜ್ ಮಾಡಿದರೆ 94 ದಿನ ಬ್ಯಾಟರಿ ಬ್ಯಾಕ್ ಅಪ್, 28000 mAh ಬ್ಯಾಟರಿ ಮೊಬೈಲ್ ಲಾಂಚ್.

ಒಮ್ಮೆ ಚಾರ್ಜ್ ಮಾಡಿದರೆ 94 ದಿನ ಬ್ಯಾಟರಿ ಬ್ಯಾಕ್ ಅಪ್ ನೀಡುವ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದ Energizer Brand

Energizer Hard Case P28K Phone: ಸದ್ಯ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಫೋನ್ ಗಳಿಗೆ ಎಷ್ಟು ಬೇಡಿಕೆ ಇದೆ ಎನ್ನುವ ಬಗ್ಗೆ ಎಲ್ಲರಿಗು ತಿಳಿದಿರಬಹುದು. ಮಾರುಕಟ್ಟೆಯಲ್ಲಿ ಸ್ಮಾರ್ಟ್ ಫೋನ್ ಗಳು ಹೆಚ್ಚು ಮಾರಾಟವಾಗುತ್ತಿವೆ.

ವಿವಿದ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳು ವಿವಿಧ ಮಾದರಿಯ ಸ್ಮಾರ್ಟ್ ಫೋನ್ ಗಳನ್ನೂ ಲಾಂಚ್ ಮಾಡುತ್ತಿವೆ. ಸದ್ಯ Energizer Brand ನ ಸ್ಮಾರ್ಟ್ ಫೋನ್ ಒಂದು ಮಾರುಕಟ್ಟೆಯಲ್ಲಿ ಬಾರಿ ಸಂಚಲನ ಮೂಡಿಸುತ್ತಿದೆ. ಈ ಮೊಬೈಲ್ ಬ್ಯಾಟರಿ ಸಾಮರ್ಥ್ಯ ಕಂಡು ಜನರು ಮೊಬೈಲ್ ಖರೀದಿ ಮಾಡಲು ಮುಂದಾಗುತ್ತಿದ್ದಾರೆ ಎಂದು ಹೇಳಬಹುದು.

Energizer Hard Case P28K Phone
Image Credit: Mobiili

ಮಾರುಕಟ್ಟೆಯಲ್ಲಿ ಹೊಸ ಸ್ಮಾರ್ಟ್ ಫೋನ್ ಲಾಂಚ್
ಮಾರುಕಟ್ಟೆಯಲ್ಲಿ ಈಗಾಗಲೇ ವಿವಿದ Smartphone ತಯಾಕಾರಕ ಕಂಪನಿಗಳು ಫಾಸ್ಟ್ ಚಾರ್ಜಿಂಗ್ ಫೀಚರ್ ನ Smartphone ಅನ್ನು ಪರಿಚಯಿಸಿವೆ. ಆದರೆ ಹೆಚ್ಚಿನ ಬ್ಯಾಟರಿ ಬ್ಯಾಕಪ್ ಇರುವ Smartphone ಲಭ್ಯವಿರಲಿಲ್ಲ. ಸದ್ಯ ಮಾರುಕಟ್ಟೆಯಲ್ಲಿ Energizer Brand ಇದೀಗ ವಿಶೇಷವಾಗಿ 90 ದಿನಗಳ ಬ್ಯಾಟರಿ ಬ್ಯಾಕಪ್ ಇರುವ Smartphone ಅನ್ನು ಲಾಂಚ್ ಮಾಡಿದೆ. ಈ ಫೋನ್ ಇದ್ದರೆ ನೀವು ಪವರ್ ಬ್ಯಾಂಕ್ ಅನ್ನು ಉಪಯೋಗಿಸುವ ಅವಶ್ಯಕತೆ ಇರುವುದಿಲ್ಲ.

ಒಮ್ಮೆ ಚಾರ್ಜ್ ಮಾಡಿದರೆ 94 ದಿನ ಬ್ಯಾಟರಿ ಬ್ಯಾಕ್ ಅಪ್
Energizer Brand ಹೊಸ Energizer Hard Case P28K Phone ಅನ್ನು ಬಿಡುಗಡೆ ಮಾಡಿದೆ. ಫೋನ್ 28,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ, ಇದು ಸುಮಾರು 2252 ಗಂಟೆಗಳ ಸ್ಟ್ಯಾಂಡ್‌ ಬೈ ಟೈಮ್ ಹೊಂದಿದೆ ಎಂದು ವರದಿಯಾಗಿದೆ. ಅಲ್ಲದೆ, ಈ ಫೋನ್ 33W ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಪಡೆದುಕೊಂಡಿದೆ. ಒಮ್ಮೆ ಚಾರ್ಜ್ ಮಾಡಿದರೆ 94 ದಿನ ಬ್ಯಾಟರಿ ಬ್ಯಾಕ್ ಅಪ್ ಅನ್ನು ನೀಡಲಿದೆ.

ಈ ಫೋನ್ 8GB RAM +256GB ಸ್ಟೋರೇಜ್ ರೂಪಾಂತರದ ಆಯ್ಕೆಯೊಂದಿಗೆ ಬರುತ್ತದೆ ಮತ್ತು 64 ಮೆಗಾ ಪಿಕ್ಸೆಲ್ ಸಂವೇದಕದ ಪ್ರಾಥಮಿಕ ಕ್ಯಾಮೆರಾ ಸೆಟಪ್ ಅನ್ನು ಪಡೆಯುತ್ತದೆ. ಇದರೊಂದಿಗೆ, ಈ ಫೋನ್ IP69 ರೇಟಿಂಗ್ ಸೌಲಭ್ಯವನ್ನು ಒಳಗೊಂಡಿದೆ ಮತ್ತು MediaTek MT6789 ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸುತ್ತದೆ.

Join Nadunudi News WhatsApp Group

Energizer Hard Case P28K Phone Price
Image Credit: Stuff

28000 mAh ಬ್ಯಾಟರಿ ಮೊಬೈಲ್ ಲಾಂಚ್
ಎನರ್ಜೈಸರ್ ಹಾರ್ಡ್ ಕೇಸ್ P28K ಫೋನ್ ದೈತ್ಯ 28000mAh ಬ್ಯಾಟರಿಯಿಂದ ಬ್ಯಾಕಪ್ ಮಾಡಲ್ಪಟ್ಟಿದೆ, ಇದು ಸಂಪೂರ್ಣವಾಗಿ ಚಾರ್ಜ್ ಮಾಡಲು ಕೇವಲ 1 ಗಂಟೆ 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಹೆಚ್ಚಿನ ಬ್ಯಾಟರಿ ಬ್ಯಾಕಪ್ ಹೊಂದಿರುವ ಈ ಸ್ಮಾರ್ಟ್ ಅನ್ನು ಖರೀದಿಸಲು ಬಯಸುವವರು ರೂ. 22000 ನೀಡಬೇಕಾಗುತ್ತದೆ. ಅಕ್ಟೊಬರ್ 2024 ರಿಂದ ಈ ನೂತನ ಮಾದರಿಯ ಗ್ರಾಹಕರ ಕೈಸೇರಲಿದೆ. ಈ ಫೋನ್ ಅನ್ನು ನೀವು ಖರೀದಿಸಿದೆ ಒಮ್ಮೆ ಚಾರ್ಜ್ ಮಾಡಿಕೊಂಡರೆ ಮತ್ತೆ ಮತ್ತೆ ಚಾರ್ಜ್ ಮಾಡಿಕೊಳ್ಳಲು ಯೋಚಿಸಬೇಕಾಗಿಲ್ಲ.

Join Nadunudi News WhatsApp Group