Entrepreneurship: ಸ್ವಂತ ಬಿಸಿನೆಸ್ ಮಾಡುವ ಆಸೆ ಇರುವ ಮಹಿಳೆಯರಿಗೆ ಇನ್ನೊಂದು ಯೋಜನೆ, ಇಂದೇ ಅರ್ಜಿ ಸಲ್ಲಿಸಿ

ರಾಜ್ಯದ ಮಹಿಳೆಯರಿಗೆ ಭರ್ಜರಿ ನ್ಯೂಸ್, ಮಹಿಳೆಯರ ಸ್ವಂತ ಉದ್ಯಮ ಆರಂಭಕ್ಕಾಗಿ ಉದ್ಯಮಶೀಲತಾ ತರಬೇತಿ ಅರ್ಜಿ ಆಹ್ವಾನ.

Entrepreneurship Training For Women’s: ಸದ್ಯ ರಾಜ್ಯದಲ್ಲಿ ಮಹಿಳಾ ಸಬಲೀಕರಣದ ಉದ್ದೇಶದಿಂದ ಸಾಕಷ್ಟು ಹೊಸ ಹೊಸ ಯೋಜನೆಗಳನ್ನು ಸರ್ಕಾರ ರೂಪಿಸುತ್ತಿದೆ. ರಾಜ್ಯದಲ್ಲಿ ಶಕ್ತಿ ಯೋಜನೆ ಹಾಗೂ ಗೃಹ ಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಿ ಮಹಿಳೆಯರಿಗೆ ಸರ್ಕಾರ ಆರ್ಥಿಕವಾಗಿ ಬೆಂಗಾವಲಾಗಿದೆ. ರಾಜ್ಯದ ಮಹಿಳೆಯರು ಸರ್ಕಾರ ಎಲ್ಲ ಯೋಜನೆಗಳ ಲಾಭವನ್ನು ಪಡೆಯುತ್ತಿದ್ದಾರೆ.

business training for indian ladies
Image Credit: Original Source

ರಾಜ್ಯದ ಮಹಿಳೆಯರಿಗೆ ಭರ್ಜರಿ ನ್ಯೂಸ್
ಮಹಿಳೆಯರು ಸ್ವಾವಲಂಬಿ ಜೀವನವನ್ನು ನಡೆಸಬೇಕು ಎನ್ನುವ ಉದ್ದೇಶದಿಂದ ಸರ್ಕಾರ ವಿವಿಧ ಯೋಜನೆಯನ್ನು ವಿಶೇಷವಾಗಿ ಮಹಿಳೆಯರಿಗೆ ಪರಿಚಯಿಸುತ್ತಿದೆ. ಈಗಾಗಲೇ ಮಹಿಳೆಯಯರ ಸ್ವಂತ ಉದ್ಯೋಗದ ಕನಸನ್ನು ನನಸು ಮಾಡಿಕೊಳ್ಳಲು ಸರ್ಕಾರ ವಿವಿಧ ಸೌಲಭ್ಯವನ್ನು ಒದಗಿಸುತ್ತಿದೆ. ಸದ್ಯ ಮಹಿಳೆಯರ ಉದ್ಯೋಗದ ಬೆಳವಣಿಗಾಗಿ ಸರ್ಕಾರ ಹೊಸ ಯೋಜನೆಯನ್ನು ಪರಿಚಯಿಸಲು ನಿರ್ಧರಿಸಿದೆ. ಮಹಿಳೆಯರು ಸ್ವಂತ ಉದ್ಯೋಗವನ್ನು ಆರಂಭಿಸಲು IIM ಬೆಂಗಳೂರು ಸಂಸ್ಥೆ ಹೊಸ ಯೋಜನೆಯನ್ನು ರೂಪಿಸಿದೆ.

ರಾಜ್ಯ ಸರ್ಕಾರದಿಂದ ಮಹಿಳೆಯರಿಗಾಗಿ ಇನ್ನೊಂದು ಯೋಜನೆ
ಪರಿಶಿಷ್ಟ ಜಾತಿಯ ಮಹಿಳಾ ಪದವೀಧರರು ಸ್ವಂತ ಉದ್ಯೋಗವನ್ನು ಆರಂಭಿಸಲು ಸಹಕಾರಿಯಾಗುವಂತೆ IIM ಬೆಂಗಳೂರು ಸಂಸ್ಥೆ ಉದ್ಯಮಶೀಲತಾ ತರಬೇತಿಯನ್ನು ಆರಂಭಿಸಿದೆ. ಈ ತರಬೇತಿಯಲ್ಲಿ ಪದವೀಧರ ಮಹಿಳೆಯರು ತಮ್ಮ ಸ್ವಂತ ಉದ್ಯೋಗಕ್ಕೆ ಬೇಕಾಗುವ ತರಬೇತಿಯನ್ನು ಪಡೆದುಕೊಳ್ಳಬಹುದು. ಉದ್ಯಮಶೀಲತಾ ತರಬೇತಿಯನ್ನು ಪಡೆದ ನಂತರ ಮಹಿಳೆಯರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 31 ಆಗಿದೆ.

business training for karnataka womens
Image Credit: Original Source

ಮಹಿಳೆಯರ ಸ್ವಂತ ಉದ್ಯಮ ಆರಂಭಕ್ಕಾಗಿ ಉದ್ಯಮಶೀಲತಾ ತರಬೇತಿ ಅರ್ಜಿ ಆಹ್ವಾನ
ಪದವೀಧರ ಮಹಿಳೆಯರು ಸ್ವಂತ ಉದ್ಯೋಗವನ್ನು ಆರಂಭಿಸಲು IIM ಬೆಂಗಳೂರು ಸಂಸ್ಥೆ ಅರ್ಜಿ ಆಹ್ವಾನ ಮಾಡಿದೆ. ಆಸಕ್ತ ಪರಿಶಿಷ್ಟ ಜಾತಿ ಮಹಿಳೆಯರು ಜನವರಿ 31 ರೊಳಗಾಗಿ ಅರ್ಜಿ ಸಲ್ಲಿಸಬಹುದು. https://swdservices.karnataka.gov.in/ ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು 21 ರಿಂದ 45 ವರ್ಷದ ಪರಿಶಿತಾ ಜಾತಿ ಮಹಿಳೆಯರು ಅರ್ಹರಾಗಿರುತ್ತಾರೆ. ಆಯ್ಕೆಯಾದ ಅಭ್ಯರ್ಥಿಗಳುಗೆ 5 ರಿಂದ 6 ತಿಂಗಳುಗಳ ಕಾಲ ತರಬೇತಿ ನೀಡಲಾಗುತ್ತದೆ.

Join Nadunudi News WhatsApp Group

Join Nadunudi News WhatsApp Group