EPFO Rule: ನಿಮ್ಮ EPF ಖಾತೆಯಿಂದ ಹಣ ಪಡೆಯಲು ಎಷ್ಟು ತೆರಿಗೆ ಕಟ್ಟಬೇಕು…? ಇಲ್ಲಿದೆ ಕಾನೂನು ನಿಯಮ

ನಿಮ್ಮ PF ಖಾತೆಯ ಹಣ ತಗೆಯಲು ಎಷ್ಟು ತೆರಿಗೆ ಕಟ್ಟಬೇಕು...?

EPFO Withdrawal Tax: ಹಣವನ್ನು ಉಳಿಸಲು EPF ನಲ್ಲಿನ ಹೂಡಿಕೆ ಉತ್ತಮವಾಗಿದೆ. ಉದ್ಯೋಗದಲ್ಲಿರುವವರು ತಮ್ಮ ಸಂಬಳ ಒಂದು ಭಾಗದಷ್ಟು ಹಣವನ್ನು PF ನಲ್ಲಿ ಉಳಿತಾಯಡಿ ಹೂಡಿಕೆ ಮಾಡಿದರೆ ಭವಿಷ್ಯದಲ್ಲಿ ಹೆಚ್ಚಿನ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ನಿಮ್ಮ ಠೇವಣಿಯ ಮೊತ್ತಕ್ಕೆ ಸರ್ಕಾರವು ವಾರ್ಷಿಕ ಬಡ್ಡಿಯನ್ನು ನೀಡುತ್ತದೆ. ಈ ಬಾರಿಯ ಹಣಕಾಸು ವರ್ಷಕ್ಕೆ ಸರ್ಕಾರ ಶೇ. 8.15 ರಷ್ಟು ಬಡ್ಡಿಯನ್ನು ನೀಡುತ್ತಿದೆ.

ಇನ್ನು ಹೂಡಿಕೆದಾರರು ತಮ್ಮ ಅಗತ್ಯವಿದ್ದ ಸಮಯದಲ್ಲಿ EPF ಖಾತೆಯಿಂದ ಹಣವನ್ನು ಹಿಂಪಡೆಯಬಹುದು. ಆದರೆ ಈ ಹಣವನ್ನು ಹಿಂಪಡೆಯುವ ಸಮಯದಲ್ಲಿ ನೀವು ತೆರಿಗೆಯನ್ನು ಪಾವತಿಸಬೇಕಾಗುತ್ತದೆ…! ಎನ್ನುವುದು ನಿಮಗೆ ತಿಳಿದಿದೆಯೇ..? ಇದೀಗ ನಾವು PF ಖಾತೆಯಿಂದ ಹಣವನ್ನು ಹಿಂಪಡೆಯುವ ಸಮಯದಲ್ಲಿ ಎಷ್ಟು ತೆರಿಗೆಯನ್ನು ಪಾವತಿಸಬೇಕಾಗುತ್ತದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

EPF Withdrawal Tax
Image Credit: Informalnewz

ನಿಮ್ಮ PF ಖಾತೆಯ ಹಣ ತಗೆಯಲು ಎಷ್ಟು ತೆರಿಗೆ ಕಟ್ಟಬೇಕು…?
EPFO ನಿಯಮಗಳ ಪ್ರಕಾರ, ನಿಮ್ಮ ಪಿಎಫ್ ಖಾತೆ ತೆರೆದು ಐದು ವರ್ಷಗಳಿಗಿಂತ ಹೆಚ್ಚು ಸಮಯ ಆಗಿದ್ದರೆ ಮತ್ತು ನಿಮ್ಮ ಠೇವಣಿಯಿಂದ ಸ್ವಲ್ಪ ಮೊತ್ತವನ್ನು ಹಿಂಪಡೆಯಲು ನೀವು ಬಯಸಿದರೆ ಅಂತಹ ಸಂದರ್ಭದಲ್ಲಿ ನೀವು ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. ಐದು ವರ್ಷಗಳಿಂದ ನಿಮ್ಮ ಖಾತೆಯನ್ನು ತೆರೆಯದಿದ್ದರೆ ನೀವು ಹಿಂತೆಗೆದುಕೊಂಡ ಮೊತ್ತದ ಮೇಲೆ ತೆರಿಗೆಯನ್ನು ಕಡಿತಗೊಳಿಸಲಾಗುತ್ತದೆ.

ಹಾಗೆಯೆ ಈ ತೆರಿಗೆಯನ್ನು TDS ನಂತೆ ಕಡಿತಗೊಳಿಸಲಾಗುತ್ತದೆ. ಇಪಿಎಫ್‌ಒ ಈ ಕಡಿತಕ್ಕೂ ನಿಯಮಗಳನ್ನು ನಿಗದಿಪಡಿಸಿದೆ. ಇದರ ಪ್ರಕಾರ, ಪಿಎಫ್ ಚಂದಾದಾರರ ಪ್ಯಾನ್ ಕಾರ್ಡ್ ಅನ್ನು ಅವನ ಖಾತೆಗೆ ಲಿಂಕ್ ಮಾಡಿದರೆ, ನಂತರ 10 ಪ್ರತಿಶತ ಟಿಡಿಎಸ್ ಕಡಿತಗೊಳ್ಳುತ್ತದೆ, ಆದರೆ ಅದನ್ನು ಲಿಂಕ್ ಮಾಡದಿದ್ದರೆ ಶೇಕಡಾ 20 ಟಿಡಿಎಸ್ ಕಡಿತಗೊಳ್ಳುತ್ತದೆ.

EPF Withdrawal Rules
Image Credit: Jagran

ಈ ಸಂದರ್ಭದಲ್ಲಿ ತೆರಿಗೆ ಪಾವತಿಸುವ ಅಗತ್ಯವಿಲ್ಲ
•ಉದ್ಯೋಗಿ ಅನಾರೋಗ್ಯದ ಕಾರಣದಿಂದ ಈ ನಿಗದಿತ ಅವಧಿಯ ಮೊದಲು ಕೆಲಸವನ್ನು ತೊರೆದರೆ ಮತ್ತು ಅವರ ಪಿಎಫ್ ಹಣವನ್ನು ಹಿಂಪಡೆದರೆ, ಅಂತಹ ಸಂದರ್ಭದಲ್ಲಿ ಅವರು ತೆರಿಗೆ ಪಾವತಿಸಬೇಕಾಗಿಲ್ಲ.

Join Nadunudi News WhatsApp Group

•ಕಂಪನಿಯು ಮುಚ್ಚಲ್ಪಟ್ಟರೆ ಅದರ ಉದ್ಯೋಗಿಗಳು ಪಿಎಫ್‌ ನಿಂದ ಹಣವನ್ನು ಹಿಂಪಡೆಯಲು ತೆರಿಗೆ ಪಾವತಿಸಬೇಕಾಗಿಲ್ಲ.

•ನೀವು ಐದು ವರ್ಷಗಳು ಪೂರ್ಣಗೊಳ್ಳುವ ಮೊದಲು ನಿಮ್ಮ ಕೆಲಸವನ್ನು ಬದಲಾಯಿಸಿದ್ದರೆ ಮತ್ತು ಆ PF ಖಾತೆಯನ್ನು ಹೊಸ ಕಂಪನಿಯ PF ಖಾತೆಯೊಂದಿಗೆ ವಿಲೀನಗೊಳಿಸುತ್ತಿದ್ದರೆ ತೆರಿಗೆ ಪಾವತಿಸುವ ಅಗತ್ಯ ಇರುವುದಿಲ್ಲ.

EPFO Latest Update
Image Credit: Kalingatv

Join Nadunudi News WhatsApp Group