Maruti Hybrid: ಕೇವಲ 8 ಲಕ್ಷಕ್ಕೆ ಹೈಬ್ರಿಡ್ 7 ಸೀಟರ್ ಫ್ಯಾಮಿಲಿ ಕಾರ್ ಲಾಂಚ್ ಮಾಡಿದ ಮಾರುತಿ, 19 Km ಮೈಲೇಜ್.

ಕೇವಲ 8 ಲಕ್ಷಕ್ಕೆ ಹೈಬ್ರಿಡ್ ಕಾರ್ ಲಾಂಚ್ ಮಾಡಿದ ಮಾರುತಿ ಸುಜುಕಿ

Maruti Suzuki Ertiga Cruise Hybrid  2024: ಸದ್ಯ ಭಾರತೀಯ ಆಟೋ ವಲಯದಲ್ಲಿ ಸಾಕಷ್ಟು ಮಾದರಿಯ ಕಾರ್ ಗಳು ಲಾಂಚ್ ಆಗುತ್ತಿದೆ. ದೇಶದ ವಿವಿಧ ಕಾರ್ ತಯಾರಕ ಕಂಪನಿಗಳು ಹತ್ತು ಹಲವು ಮಾದರಿಯ ಕಾರ್ ಗನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿವೆ. ಸದ್ಯ ದೇಶದ ಜನಪ್ರಿಯ ಕಾರ್ ತಯಾರಕ ಕಂಪನಿಯಾದ Maruti Suzuki ಇದೀಗ ಹೊಸ ಮಾದರಿಯ ಕಾರ್ ಅನ್ನು ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ.

maruti suzuki ertiga hybrid
Image Credit: original Source

Maruti Suzuki Ertiga Cruise Hybrid 2024
ಸದ್ಯ ಟಾಪ್ ವೇರಿಂಯೆಂಟ್ Maruti Suzuki Ertiga Cruise Hybrid ಇದೀಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಾಂಚ್ ಆಗಿದೆ. ಸದ್ಯದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಕೂಡ ಲಾಂಚ್ ಆಗಲಿದೆ. ಭಾರತೀಯರು Maruti Suzuki Ertiga Cruise Hybrid ಖರೀದಿಗಾಗಿ ಸ್ವಲ್ಪ ಸಮಯ ಕಾಯಬೇಕಿದೆ.

ಮಾರುತಿ ಸುಜುಕಿಯ ಕಳೆದ ಬಾರಿಯ ಎರ್ಟಿಗಾಗೆ ಹೋಲಿಸಿದರೆ ಈ ಹೊಸ ಕ್ರೂಸ್ ಹೈಬ್ರಿಡ್ ಹೆಚ್ಚು ಆಕರ್ಷಕವಾಗಿರುವುದಲ್ಲದೆ ಹೆಚ್ಚಿನ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇಂಡೋನೇಷ್ಯಾ ಇಂಟರ್‌ ನ್ಯಾಶನಲ್ ಮೋಟಾರು ಶೋದಲ್ಲಿ ಸುಜುಕಿ ಬಿಡುಗಡೆ ಮಾಡಿದ ಈ ಕಾರು ಹಿಂದಿನ ಎರ್ಟಿಗಾಕ್ಕಿಂತ ಪ್ರಮುಖವಾದ ನವೀಕರಣವನ್ನು ಹೊಂದಿದೆ.

maruti suzuki ertiga new 2024
Image Credit: Original Source

ಕೇವಲ 8 ಲಕ್ಷಕ್ಕೆ ಹೈಬ್ರಿಡ್ 7 ಸೀಟರ್ ಫ್ಯಾಮಿಲಿ ಕಾರ್ ಲಾಂಚ್ ಮಾಡಿದ ಮಾರುತಿ
ಎರ್ಟಿಗಾ ಕ್ರೂಸ್ ಹೈಬ್ರಿಡ್ ಈ ಬಾರಿ K15B ಸ್ಮಾರ್ಟ್ ಹೈಬ್ರಿಡ್ ಎಂಜಿನ್ ಜೊತೆಗೆ ದೊಡ್ಡ 10ah ಬ್ಯಾಟರಿಯನ್ನು ಹೊಂದಿದೆ. ಇದರಿಂದಾಗಿ ಈ ಕಾರಿನಿಂದಲೂ ಉತ್ತಮ ಮೈಲೇಜ್ ನಿರೀಕ್ಷಿಸಬಹುದು ಎನ್ನಲಾಗಿದೆ. 1.5 ಲೀಟರ್ ಪೆಟ್ರೋಲ್ ಎಂಜಿನ್‌ ನೊಂದಿಗೆ ಬರುತ್ತಿರುವ ಈ ಕಾರು 104 PS Power ಮತ್ತು 138 Nm Tark ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಶಕ್ತಿಶಾಲಿ ಎಂಜಿನ್ ಅನ್ನು ಹೊಂದಿರುವ Maruti Suzuki Ertiga Cruise Hybrid ಪ್ರತಿ ಲೀಟರ್ ಗೆ 17-19km ಮೈಲೇಜ್ ನೀಡಬಹುದು.

ಮಾರುತಿ ಎರ್ಟಿಗಾ ರೂಪಾಂತರವು ಈಗ ರೂ. 8.69 ಲಕ್ಷದಿಂದ ರೂ. 13.03 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಾಂಚ್ ಆಗಲಿದೆ. ಮಾರುತಿ ಸುಜುಕಿ ಎರ್ಟಿಗಾ ಮಾದರಿಯು LXi(O), VXi(O), ZXi(O), ಮತ್ತು ZXi Plus ರೂಪಾಂತರಗಳಲ್ಲಿ ಲಭ್ಯವಿದೆ. ಹೆಚ್ಚಿನ ಮೈಲೇಜ್ ಹಗೂ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಈ ನೂತನ ಮಾದರಿ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

Join Nadunudi News WhatsApp Group

Join Nadunudi News WhatsApp Group