ಕೆಜಿಎಫ್ ಚಿತ್ರದಲ್ಲಿ ಖಡಕ್ ಪಾತ್ರ ಮಾಡಿದ ಈ ನಟಿ ನಿಜಕ್ಕೂ ಯಾರು ಗೊತ್ತಾ, ಈಕೆಯ ಹಿನ್ನಲೆ ಏನು ನೋಡಿ.

ಕನ್ನಡ ಚಿತ್ರರಂಗಕ್ಕೆ ಬಹಳ ದೊಡ್ಡ ಹೆಸರನ್ನ ತಂದುಕೊಟ್ಟ ಸಿನಿಮಾ ಅಂದರೆ ಅದೂ ಕೆಜಿಎಫ್ ಚಿತ್ರವೆಂದು ಹೇಳಿದರೆ ತಪ್ಪಾಗಲ್ಲ. ಹೌದು ಕೆಜಿಎಫ್ ಮೊದಲ ಭಾಗಕ್ಕಿಂತ ಎರಡನೆಯ ಭಾಗ ಇಡೀ ವಿಶ್ವದಲ್ಲೇ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿತು ಎಂದು ಹೇಳಿದರೆ ತಪ್ಪಾಗಲ್ಲ. ಚಿತ್ರವನ್ನ ನೋಡಿದ ಸಿನಿ ಪ್ರಿಯರು ಚಿತ್ರವನ್ನ ಹಾಡಿ ಹೊಗಳಿದರು ಎಂದು ಹೇಳಬಹುದು. ಇನ್ನು ಚಿತ್ರದಲ್ಲಿ ಬಂದ ಪಾತ್ರದಾರಿಗಳು ತಮ್ಮ ಪಾತ್ರವನ್ನ ಬಹಳ ಅಚ್ಚುಕಟ್ಟಿಯಿಂದ ನಿಭಾಯಿಸಿದರು. ಇನ್ನು ಕೆಜಿಎಫ್ ಭಾಗ ಎರಡರಲ್ಲಿ ಹಲವು ಸ್ಟಾರ್ ನಟ ನಟಿಯರು ಕಾಣಿಸಿಕೊಂಡು ಚಿತ್ರದ ಯಶಸ್ಸಿಗೆ ಕೂಡ ಕಾರಣರಾದರು.

ಇನ್ನು ಅದೇ ರೀತಿಯಲ್ಲಿ ಕೆಜಿಎಫ್ ಚಿತ್ರದ ಯಶಸ್ಸಿನಲ್ಲಿ ಪ್ರಮುಖ ಪಾತ್ರವನ್ನ ವಹಿಸಿದ ಪಾತ್ರದಾರಿಗಳಲ್ಲಿ ನಟಿ ಈಶ್ವರಿ ರಾವ್ ಕೂಡ ಒಬ್ಬರು. ಹೌದು ಕೆಜಿಎಫ್ ಎರಡನೆಯ ಭಾಗದಲ್ಲಿ ನಟಿ ಈಶ್ವರಿ ರಾವ್ ಅವರು ಬಹಳ ಪ್ರಮುಖವಾದ ಪಾತ್ರದಲ್ಲಿ ಕಾಣಿಸಿಕೊಂಡರು ಎಂದು ಹೇಳಬಹುದು. ಹಾಗಾದರೆ ಈ ಶ್ವರಿ ರಾವ್ ಯಾರು ಮತ್ತು ಹಿಂದೆ ಯಾವ ಯಾವ ಚಿತ್ರದಲ್ಲಿ ಈ ನಟಿ ಕಾಣಿಸಿಕೊಂಡಿದ್ದರು ಅನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ. ಸ್ನೇಹಿತರೆ ಕೆಜಿಎಫ್ ಎರಡನೆಯ ಭಾಗದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ಈ ಈಶ್ವರಿ ರಾವ್ ಮೂಲತಃ ತಮಿಳು ನಟಿ ಮತ್ತು ತಮಿಳಿನ ಹಲವು ಸಿನೆಮಾಗಳಲ್ಲಿ ಈ ನಟಿ ಕಾಣಿಸಿಕೊಂಡಿದ್ದಾರೆ.

eshwari rao in KGF

ಸುಮಾರು 20 ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸವನ್ನ ಮಾಡುತ್ತಿರುವ ನಟಿ ಈಶ್ವರಿ ರಾವ್ ಅವರು ಹಲವು ಚಿತ್ರಗಳಲ್ಲಿ ನಟನೆಯನ್ನ ಮಾಡಿ ಸೈ ಎನಿಸಿಕೊಂಡವರು. ಈಶ್ವರಿ ರಾವ್ ಅವರು ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ನಟರಾದ ರಜನಿಕಾಂತ್, ಕಮಲ್ ಹಾಸನ್, ಎಂ ಜಿ ಆರ್ ಸೇರಿದಂತೆ ಹಲವು ನಾಯಕರ ಜೊತೆ ನಾಯಕಿಯಾಗಿ ನಟನೆಯನ್ನ ಮಾಡಿ ಚಿತ್ರರಂಗದಲ್ಲಿ ಬಹಳ ಒಳ್ಳೆಯ ಸಾಧನೆಯನ್ನ ಮಾಡಿದವರು ಆಗಿದ್ದಾರೆ.

ಕಳೆದ ವರ್ಷ ರಜನಿಕಾಂತ್ ಅವರ ‘ಕಾಲ’ ಚಿತ್ರದಲ್ಲಿ ರಜನಿಕಾಂತ್ ಅವರ ಪತ್ನಿಯ ಪಾತ್ರದಲ್ಲಿ ನಟನೆಯನ್ನ ಮಾಡಿದ ನಟಿ ಈಶ್ವರಿ ರಾವ್ ಅವರಿಗೆ ಕೆಜಿಎಫ್ ಚಿತ್ರದ ನಂತರ ಬೇಡಿಕೆ ಬಹಳ ಹೆಚ್ಚಾಗಿದೆ. ಈ ನಟಿ ಬಹಳ ಹಿರಿಯ ನಟಿಯಾದರು ಕೂಡ ಕೆಜಿಎಫ್ ನಲ್ಲಿ ಯಾವ ನಟಿಗೂ ಕಡಿಮೆ ಇಲ್ಲ ಅನ್ನುವ ಹಾಗೆ ನಟನೆಯನ್ನ ಮಾಡಿದ್ದಾರೆ. ಕೆಜಿಎಫ್ ಚಿತ್ರದ ಬಗ್ಗೆ ಮಾತನಾಡಿದ ನಟಿ ಈಶ್ವರಿ ರಾವ್ ಅವರು, ಕೆಜಿಎಫ್ ಚಿತ್ರ ನನ್ನ ಜೀವನದಲ್ಲಿ ದೊಡ್ಡ ತಿರುವು ತಂದುಕೊಟ್ಟಿದೆ, ಕೆಜಿಎಫ್ ಚಿತ್ರತಂಡಕ್ಕೆ ನಾನು ಯಾವಾಗಲು ಚಿರಋಣಿ ಎಂದು ಭಾವುಕದ ಮಾತುಗಳನ್ನ ಮಾಧ್ಯಮದವರ ಮುಂದೆ ಈಶ್ವರಿ ಅವರು ಹೇಳಿಕೊಂಡಿದ್ದರು.

Join Nadunudi News WhatsApp Group

eshwari rao in KGF

Join Nadunudi News WhatsApp Group