Ethanol Vehicle: ಇನ್ನುಮುಂದೆ ಪೆಟ್ರೋಲ್ ಡೀಸೆಲ್ ಅಗತ್ಯವಿಲ್ಲ, ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಎಥನಾಲ್ ಚಾಲಿತ ಕಾರ್, ಬೈಕ್.

ಎಥನಾಲ್ ನ ಮೂಲಕ ವಾಹನ ಚಲಾಯಿಸುವ ಕುರಿತು ಮಹತ್ವದ ಆದೇಶವನ್ನು ಹೊರಡಿಸಿದ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ.

Ethanol Car And Bike: ದೇಶದಲ್ಲಿ ಇತ್ತೀಚಿಗೆ ಹೊಸ ಹೊಸ ಸಂಚಾರ ನಿಯಮಗಳು ಜಾರಿಯಾಗುತ್ತಿವೆ. ಇನ್ನು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಸಂಚಾರ ನಿಯಮದಲ್ಲಿ ಸಾಕಷ್ಟು ಬದಲಾವಣೆಯನ್ನು ತಂದಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ಮಾಡುವವರನ್ನು ಪತ್ತೆ ಹಚ್ಚಲು ಈಗಾಗಲೇ ಸಾಕಷ್ಟು ರೀತಿಯ ತಂತ್ರಜ್ಞಾನಗಳನ್ನು ಕಂಡುಹಿಡಿಯಲಾಗಿದೆ. 

ಇನ್ನು ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಚಾಲಿತ ವಾಹನಗಳು ಸಾಕಷ್ಟಿವೆ. ಇವುಗಳ ಬಳಕೆಯಿಂದಾಗಿ ದೇಶದಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿದೆ. ಇನ್ನು ದಿನಕಳೆಯುತ್ತಿದ್ದಂತೆ ಪೆಟ್ರೋಲ್, ಡೀಸೆಲ್, ಸಿಎನ್ ಜಿ ಗಳ ಬೆಲೆ ಏರಿಕೆಯಾಗುತ್ತಿದೆ. ಇದೀಗ ಎಥನಾಲ್ (Ethanol) ನ ಮೂಲಕ ವಾಹನ ಚಲಾಯಿಸುವ ಕುರಿತು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ. 

Ethanol powered car, bike will enter the market
Image Credit: Hindustantimes

ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಎಥನಾಲ್ ಚಾಲಿತ ಕಾರ್, ಬೈಕ್
ಇನ್ನು ಮುಂದೆ ಪೆಟ್ರೋಲ್, ಡೀಸೆಲ್, ಸಿಎನ್ ಜಿ ಗಳಂತಹ ಇಂಧನದ ಅಗತ್ಯ ಇರುವುದಿಲ್ಲ. ಇದರ ಬದಲಾಗಿ ಎಥನಾಲ್ ಚಾಲಿತ ಕಾರ್, ಬೈಕ್ ಮಾರುಕಟ್ಟೆಗೆ ಬರಲಿದೆ ಎಂದು ನಿತಿನ್ ಗಡ್ಕರಿ ಅವರು ಮಹತ್ವದ ಆದೇಶ ಹೊರಡಿಸಿದ್ದಾರೆ.

ಮೋದಿ @9 ಅಭಿನಯದ ಅಡಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸಚಿವರು ಈ ಮಾಹಿತಿಯನ್ನು ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ನಿತಿನ್ ಗಡ್ಕರಿ ಅವರು ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಆಗಸ್ಟ್ ನಲ್ಲಿ ಎಥೆನಾಲ್ ಚಾಲಿತ ವಾಹನಗಳು ಮಾರುಕಟ್ಟೆಗೆ ಬರಲಿದೆ
ಆಗಸ್ಟ್ ನಲ್ಲಿ ಕಾರುಗಳು ಹಾಗೂ ಬೈಕ್ ಗಳು ಎಥೆನಾಲ್ ನ ಮೂಲಕ ಚಲಿಸುತ್ತದೆ. ಎಥೆನಾಲ್ ಚಾಲಿತ ವಾಹನಗಳು ಮಾರುಕಟ್ಟೆಗೆ ಆಗಸ್ಟ್ ನಲ್ಲಿ ಬರಲಿದೆ ಎಂದು ಮಾಹಿತಿ ನೀಡಿದ್ದಾರೆ.

Join Nadunudi News WhatsApp Group

Ethanol powered car, bike will enter the market
Image Credit: Swarajyamag

ಟೊಯಾಟಾ ಕಂಪನಿಯು ಎಥೆನಾಲ್ ಚಾಲಿತ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಎಥೆನಾಲ್ ಚಾಲಿತ ವಾಹನಗಳು 100 ಪ್ರತಿಶತ ಜೈವಿಕ ಎಥೆನಾಲ್ ನಲ್ಲಿ ಚಲಿಸುತ್ತದೆ ಮತ್ತು ಎಥೆನಾಲ್ ಇಂಧನವು ಪೆಟ್ರೋಲ್ ಗಿಂತ ಅಗ್ಗವಾಗಿದ್ದು ಮಾಲಿನ್ಯ ಸಮಸ್ಯೆಯನ್ನು ನಿವಾರಿಸುತ್ತದೆ ಎಂದಿದ್ದಾರೆ.

Join Nadunudi News WhatsApp Group