Ethanol Price: ಇನ್ನುಮುಂದೆ ಪೆಟ್ರೋಲ್ ಡಿಸೇಲ್ ಬೇಕಾಗಿಲ್ಲ, ಲೀಟರ್ ಗೆ 15 ರೂ ನಲ್ಲಿ ಸಿಗುವ ಈ ಇಂಧನದ ಮೂಲಕ ವಾಹನ ಚಲಾಯಿಸಿ.

ಎಥನಾಲ್ ನ ಮೂಲಕ ಚಲಿಸುವ ವಾಹನಗಳ ಬಿಡುಗಡೆ ಕುರಿತು ಮಾಹಿತಿ ನೀಡಿದ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ.

Ethanol Price Per Litre: ಸಂಚಾರ ನಿಯಮದ ಬಗ್ಗೆ ಇತ್ತೀಚಿಗೆ ನಿತಿನ್ ಗಡ್ಕರಿ (Nitin Gadkari) ಹೊಸ ಹೊಸ ಬದಲಾವಣೆಗಳನ್ನು ತಂದಿದ್ದಾರೆ. ದೇಶದಲ್ಲಿ ಪೆಟ್ರೋಲ್ ಹಾಗು ಡೀಸೆಲ್ ಚಾಲಿತ ವಾಹನಗಳು ಹೆಚ್ಚಾಗಿ ಇವೆ. ಇಂತಹ ವಾಹಗಳ ಬಳಕೆಯಿಂದಾಗಿ ವಾಯುಮಾಲಿನ್ಯ ಸಹ ಹೆಚ್ಚಾಗುತ್ತದೆ.

ಇನ್ನು ದಿನಕಳೆಯುತ್ತಿದ್ದಂತೆ ಪೆಟ್ರೋಲ್, ಡೀಸೆಲ್, ಸಿಎನ್ ಜಿ ಗಳ ದರ ಹೆಚ್ಚಾಗುತ್ತಿದೆ. ಇದೀಗ ಎಥನಾಲ್ (Ethanol) ನ ಮೂಲಕ ಚಲಿಸುವ ವಾಹನ ಬಿಡುಗಡೆ ಕುರಿತು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಮಾಹಿತಿ ನೀಡಿದ್ದಾರೆ.

Ethanol powered vehicles are coming to the market
Image Credit: Chinimandi

ಮಾರುಕಟ್ಟೆಗೆ ಬರಲಿವೆ ಎಥನಾಲ್ ಚಾಲಿತ ವಾಹನಗಳು
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಇತ್ತೀಚಿಗೆ ಎಥನಾಲ್ ಇಂಧನದಿಂದ ಚಲಿಸುವ ವಾಹನವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ನಾಗಪುರದಲ್ಲಿ ಮರ್ಸಿಡೆಸ್ ಬೆಂಚ್ ಕಂಪನಿಯ ಎಲೆಕ್ಟ್ರಿಕ್ ವಾಹನ ಬಿಡುಗಡೆ ಮಾಡುವ ಕಾರ್ಯಕ್ರಮದಲ್ಲಿ ಈ ಮಾತನ್ನು ಹೇಳಿದ್ದಾರೆ.

ಎಥನಾಲ್ ಇಂಧನದ ಬೆಲೆ
ಪ್ರತಿ ಲೀಟರ್ ಗೆ ಎಥನಾಲ್ 60 ರೂಪಾಯಿ ಆಗಿದೆ. ಅದೇ ಪೆಟ್ರೋಲ್ ನ ಬೆಲೆ 100 ರೂಪಾಯಿ ದಾಟಿದೆ. ಎಥನಾಲ್ 40 ಶೇಕಡಾದಷ್ಟು ವಿದ್ಯುತ್ ಉತ್ಪಾದನೆ ಮಾಡುವುದರಿಂದ ಪ್ರತಿ ಲೀಟರ್ ಸರಾಸರಿ ದರ 15 ರೂಪಾಯಿ ಆಗಲಿದೆ ಎಂದು ತಿಳಿಸಿದ್ದಾರೆ.

ಸಂಪೂರ್ಣವಾಗಿ ಎಥನಾಲ್ ನಿಂದ ಚಲಿಸುವ ವಾಹನವನ್ನು ಹೀರೊ ಸ್ಕೂಟರ್, ಟಿವಿಎಸ್, ಬಜಾಜ್ ಕಂಪನಿಗಳು ತಯಾರಿಸಲಿದ್ದು ಶೀಘ್ರವೇ ಮಾರುಕಟ್ಟೆಗೆ ಬರಲಿವೆ ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.

Join Nadunudi News WhatsApp Group

Ethanol powered vehicles are coming to the market
Image Credit: Electricvehiclenewsindia

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಿಂದ ಕಂಗಾಲಾಗಿರುವ ಜನರಿಗೆ ಕಡಿಮೆ ಬೆಲೆಯ ಎಥನಾಲ್ ನಿಂದ ಚಲಿಸುವ ವಾಹನಗಳು ಬಿಡುಗಡೆಯಾದರೆ ಆ ವಾಹನ ಸೇಲ್ ಆಗುವ ಸಂಖ್ಯೆ ಹೆಚ್ಚಾಗಬಹುದು. ಹೇಳುವುದಾದರೆ ಜನರು ಹೆಚ್ಚಾಗಿ ಈ ವಾಹನಗಳಿಗೆ ಸೀಮಿತರಾಗಬಹುದು.

Join Nadunudi News WhatsApp Group