Evolet Pony EV: 200 Km ಮೈಲೇಜ್ ಮತ್ತು ಬೆಲೆ ಕೇವಲ 40,000 ರೂ ಮಾತ್ರ, ಓಲಾಗೆ ಪೈಪೋಟಿ ಕೊಡಲು ಇನ್ನೊಂದು ಸ್ಕೂಟರ್ ಲಾಂಚ್

200 Km ಮೈಲೇಜ್ ನೀಡಲಿದೆ ಈ ಎಲೆಕ್ಟ್ರಿಕ್ ಸ್ಕೂಟರ್.

Evolet Pony Electric Scooter: ಸದ್ಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಿದೆ ಎನ್ನಬಹುದು. ವಿವಿಧ ವಾಹನ ತಯಾರಕ ಕಂಪನಿಗಳು ಹೊಸ ಹೊಸ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನೂ ಹೆಚ್ಚು ಹೆಚ್ಚು ಪರಿಚಯಿಸುತ್ತಿದೆ. ಇದೀಗ ಮಾರುಕಟ್ಟೆಯಲ್ಲಿ ಓಲಾ ಎಲೆಕ್ಟ್ರಿಕ್ (Ola Electricz) ಸ್ಕೂಟರ್ ಗೆ ಪೈಪೋಟಿ ನೀಡಲು ಭರ್ಜರಿಯಾಗಿ ಎವೊಲೆಟ್ ಪೋನಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಿದೆ. ಕಂಪನಿಯು ಬಜೆಟ್ ವಿಭಾಗದಲ್ಲಿ ಸ್ಕೂಟರ್ ಅನ್ನು ಪರಿಚಯಿಸಿದೆ.

Evolet Pony Electric Scooter
Image Credit: Original Source

Evolet Pony Electric Scooter
ಆಧುನಿಕ ವೈಶಿಷ್ಟ್ಯಗಳೊಂದಿಗೆ ಎವೊಲೆಟ್ ಪೋನಿ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಎಂಟ್ರಿ ಕೊಟ್ಟಿದೆ. ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ವಿಶಿಷ್ಟ ವಿನ್ಯಾಸ ಮತ್ತು ಶಕ್ತಿಯುತ ಬ್ಯಾಟರಿ ಪ್ಯಾಕ್‌ ನೊಂದಿಗೆ ಹೆಚ್ಚಿನ ಶ್ರೇಣಿಯನ್ನು ನೀಡುವಂತೆ ಮಾಡಿದೆ. ನೀವು ಕಡಿಮೆ ಬಜೆಟ್‌ ನಲ್ಲಿ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್‌ ಖರೀದಿಯ ಯೋಜನೆ ಹೂಡಿದ್ದರೆ ಎವೊಲೆಟ್ ಪೋನಿ ಎಲೆಕ್ಟ್ರಿಕ್ ಸ್ಕೂಟರ್‌ ಉತ್ತಮ ಆಯ್ಕೆಯಾಗಿದೆ. ನೀವೀಗ ಈ ಲೇಖನದಲ್ಲಿ ಎವೊಲೆಟ್ ಪೋನಿ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಮಾಹಿತಿಯನ್ನು ಪದಕ್ಕಿದುಕೊಳ್ಳಬಹುದು.

ಓಲಾಗೆ ಪೈಪೋಟಿ ಕೊಡಲು ಇನ್ನೊಂದು ಸ್ಕೂಟರ್ ಲಾಂಚ್
ಎಲೆಕ್ಟ್ರಿಕ್ ಸ್ಕೂಟರ್ ಎವೊಲೆಟ್ ಪೋನಿ ಸ್ಕೂಟರ್ ಶಕ್ತಿಯುತ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಮತ್ತು ಶಕ್ತಿಯುತ ಎಲೆಕ್ಟ್ರಿಕ್ ಮೋಟರ್‌ ನೊಂದಿಗೆ ಬರುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ ನಲ್ಲಿ ಅಳವಡಿಸಲಾಗಿರುವ ಬ್ಯಾಟರಿ ಪ್ಯಾಕ್ 100 ಪ್ರತಿಶತದಷ್ಟು ಚಾರ್ಜ್ ಮಾಡಲು 3 ರಿಂದ 4 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಇನ್ನು ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ ಈ ಎಲೆಕ್ಟ್ರಿಕ್ ಸ್ಕೂಟರ್ 200 ಕಿಲೋಮೀಟರ್ ವ್ಯಾಪ್ತಿ ನೀಡಲಿದೆ. ಕಂಪನಿಯ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ದೇಶದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ 40,000 ರೂ.ಗೆ ಪರಿಚಯಿಸಿದೆ.

Evolet Pony Electric Scooter Price
Image Credit: Bikewale

200 Km ಮೈಲೇಜ್ ಮತ್ತು ಬೆಲೆ ಕೇವಲ 40000 ರೂ ಮಾತ್ರ
•Evolet Pony Electric Scooter Feature
•Digital instrument console,
•Digital odometer,
•Digital Trip Meter,
•Digital Speedometer,
•USB charging port,
•Pass switch and low battery indicator

Join Nadunudi News WhatsApp Group

Join Nadunudi News WhatsApp Group