Evtric Axis EV: ಐಫೋನ್ ಖರೀದಿಸುವ ಬೆಲೆಗೆ ಖರೀದಿಸಿ ಈ ಎರಡು ಸ್ಕೂಟರ್, ಕಡಿಮೆ ಬೆಲೆ ಆಕರ್ಷಕ ಮೈಲೇಜ್

ಒಂದೇ ಚಾರ್ಜ್ ನಲ್ಲಿ 75 ಕಿಲೋಮೀಟರ್ ರೇಂಜ್ ನೀಡುವ ಸಾಮರ್ಥ್ಯ ಹೊಂದಿದ Electric Scooter ಖರೀದಿಗೆ ಸಿದ್ದ

Evtric Axis Electric Scooter Price And Mileage: ದೇಶಿಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಗಳ ಬೆಲೆ ಹೆಚ್ಚಿನ ಏರುಗತಿಯಲ್ಲಿ ಸಾಗುತ್ತಿದೆ. ಈ ಕಾರಣಕ್ಕೆ ಆಟೋ ವಲಯದಲ್ಲಿ ಇಂಧನ ಚಾಲಿತ ವಾಹನಗಳ ಮೇಲಿನ ಬೇಡಿಕೆ ಕಡಿಮೆಯಾಗಿದೆ ಎನ್ನಬಹುದು. ಇನ್ನು ಗ್ರಾಹಕರು ತಮ್ಮ ಇಂಧನದ ಖರ್ಚನ್ನು ಉಳಿಸಲು ಎಲೆಕ್ಟ್ರಿಕ್ ವಾಹನಗಳನ್ನೇ ಹೆಚ್ಚಾಗಿ ಖರೀದಿಸುತ್ತಾರೆ.

ಸದ್ಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಹೆಚ್ಚಿನ ಆಯ್ಕೆಗಳು ಲಭ್ಯವಾಗುತ್ತದೆ. ಇದೀಗ ಐಫೋನ್ ಬೆಲೆಯಲ್ಲಿ ಲಭ್ಯವಾಗುವಂತಹ Electric scooter ಮಾರುಕಟ್ಟೆಯಲ್ಲಿ ಪರಿಚಯವಾಗಲಿದೆ. ನೀವು ಹೊಸ ವರ್ಷಕ್ಕೆ ಸ್ಕೂಟರ್ ಖರೀದಿಸುವ ಯೋಜನೆಯಲ್ಲಿದ್ದರೆ ಈ ಸ್ಕೂಟರ್ ನಿಮಗೆ ಕಡಿಮೆ ಬೆಲೆಯಲ್ಲಿ ಸಿಗಲಿದೆ ಎಂದು ಹೇಳಬಹುದು

Evtric Axis Electric Scooter Price
Image Credit: Evtricmotors

ಕಡಿಮೆ ಬೆಲೆಗೆ ಆಕರ್ಷಕ ಮೈಲೇಜ್ ನೀಡು EV ಲಾಂಚ್
ಸದ್ಯ ಮಾರುಕಟ್ಟೆಯಲ್ಲಿ ಗ್ರಾಹಕರ ಬಜೆಟ್ ಬೆಲೆಯಲ್ಲಿ Evtric Axis Electric Scooter ಪರಿಚಯವಾಗಿದೆ. Evtric Axis Electric Scooter ನಲ್ಲಿ ಕಂಪನಿಯು ಹೆಚ್ಚಿನ ವೈಶಿಷ್ಟ್ಯಗಳನ್ನು ಅಳವಡಿಸಿದೆ. ಉತ್ತಮ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿರುವ Evtric Axis Electric Scooter ಒಂದೇ ಚಾರ್ಜ್ ನಲ್ಲಿ 75 ಕಿಲೋಮೀಟರ್ ರೇಂಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ.

ಈ ಸ್ಕೂಟರ್ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಇದು ಕೇವಲ 3 ಗಂಟೆಗಳ ತ್ವರಿತ ಚಾರ್ಜಿಂಗ್ ಸಮಯವನ್ನು ಅನುಮತಿಸುತ್ತದೆ. ಸಾಮಾನ್ಯವಾಗಿ ಉಳಿದ ಎಲೆಕ್ಟ್ರಿಕ್ ಸ್ಕೂಟರ್ ಗಳು ಚಾರ್ಜ್ ಮಾಡಲು ಸುಮಾರು 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಇತರ ಎಲೆಕ್ಟ್ರಿಕ್ ಸ್ಕೂಟರ್‌ ಗಳಿಗೆ ಹೋಲಿಸಿದರೆ, ಈ ಸ್ಕೂಟರ್ ಸೂಪರ್-ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯನ್ನು ಹೊಂದಿದೆ. ಹೆಚ್ಚಿನ ಮೈಲೇಜ್ ಹಾಗೂ ಚಾರ್ಜಿಂಗ್ ನಲ್ಲಿ ಹೆಚ್ಚಿನ ಸೌಲಭ್ಯ ಇರುವುದರಿಂದ ಈ ಎಲೆಕ್ಟ್ರಿಕ್ ಮಾದರಿ ಖರೀದಿಗೆ ಉತ್ತಮ ಎನ್ನಬಹುದು.

Evtric Axis Electric Scooter Mileage
Image Credit: Zigwheels

ಐಫೋನ್ ಖರೀದಿಸುವ ಬೆಲೆಗೆ ಖರೀದಿಸಿ ಈ ಸ್ಕೂಟರ್
ಎವ್ಟ್ರಿಕ್ ಆಕ್ಸಿಸ್ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಡ್ಯುಯಲ್ ಡಿಸ್ಕ್ ಬ್ರೇಕ್ ಸಿಸ್ಟಮ್‌ ಆಯ್ಕೆಯನ್ನು ಹೊಂದಿದೆ. ಈ ಬ್ರೇಕಿಂಗ್ ವ್ಯವಸ್ಥೆಯು ಆರಾಮದಾಯಕ ಮತ್ತು ವಿಶ್ವಾಸಾರ್ಹ ಬ್ರೇಕಿಂಗ್ ಅನುಭವವನ್ನು ನೀಡುತ್ತದೆ. Evtric Axis ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ರೂ. 70,000 ಬೆಲೆಯಲ್ಲಿ ಲಭ್ಯವಿದೆ. ವಿವಿಧ EMI ಯೋಜನೆಗಳನ್ನು ಸಹ ನೀಡಲಾಗಿದ್ದು, ನೀವು ಬಜೆಟ್ ಬಗ್ಗೆ ಚಿಂತಿಸುವ ಅಗತ್ಯ ಇರುವುದಿಲ್ಲ.

Join Nadunudi News WhatsApp Group

Join Nadunudi News WhatsApp Group