Evtric Axis: ಗೇಮ್ ಚೇಂಜ್ ಮಾಡಲು ಬಂತು 85 Km ಮೈಲೇಜ್ ಕೊಡುವ ಎಲೆಕ್ಟ್ರಿಕ್ ಸ್ಕೂಟರ್, ಕಡಿಮೆ ಬೆಲೆಗೆ

ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್ ಪೈಪೋಟಿ ಕೊಡಲು ಬಂತು ಇನ್ನೊಂದು ಎಲೆಕ್ಟ್ರಿಕ್ ಸ್ಕೂಟರ್

Evtric Axis Electric Scooter: ದೇಶಿಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಗಳ ಬೆಲೆ ಹೆಚ್ಚಿನ ಏರುಗತಿಯಲ್ಲಿ ಸಾಗುತ್ತಿದೆ. ಈ ಕಾರಣಕ್ಕೆ ಆಟೋ ವಲಯದಲ್ಲಿ ಇಂಧನ ಚಾಲಿತ ವಾಹನಗಳ ಮೇಲಿನ ಬೇಡಿಕೆ ಕಡಿಮೆಯಾಗಿದೆ ಎನ್ನಬಹುದು. ಇನ್ನು ಗ್ರಾಹಕರು ತಮ್ಮ ಇಂಧನದ ಖರ್ಚನ್ನು ಉಳಿಸಲು ಎಲೆಕ್ಟ್ರಿಕ್ ವಾಹನಗಳನ್ನೇ ಹೆಚ್ಚಾಗಿ ಖರೀದಿಸುತ್ತಾರೆ.

ಸದ್ಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಹೆಚ್ಚಿನ ಆಯ್ಕೆಗಳು ಲಭ್ಯವಾಗುತ್ತದೆ. ಇದೀಗ ಗ್ರಾಹಕರ ಬಜೆಟ್ ಬೆಲೆಗೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಒಂದು ಬಿಡುಗಡೆಯಾಗಿದೆ. ಹಾಗಾದರೆ ನಾವೀಗ ಈ ಎಲೆಕ್ಟ್ರಿಕ್ ಸ್ಕೂಟರ್ ನ ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ತಿಳಿಯೋಣ.

Evtric Axis Electric Scooter Price And Feature
Image Credit: Zigwheels

ಗೇಮ್ ಚೇಂಜ್ ಮಾಡಲು ಬಂತು 85 Km ಮೈಲೇಜ್ ಕೊಡುವ ಎಲೆಕ್ಟ್ರಿಕ್ ಸ್ಕೂಟರ್
ಸದ್ಯ ಮಾರುಕಟ್ಟೆಯಲ್ಲಿ ಗ್ರಾಹಕರ ಬಜೆಟ್ ಬೆಲೆಯಲ್ಲಿ Evtric Axis Electric Scooter ಪರಿಚಯವಾಗಿದೆ. Evtric Axis Electric Scooter ನಲ್ಲಿ ಕಂಪನಿಯು ಹೆಚ್ಚಿನ ವೈಶಿಷ್ಟ್ಯಗಳನ್ನು ಅಳವಡಿಸಿದೆ. ಉತ್ತಮ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿರುವ Evtric Axis Electric Scooter ಒಂದೇ ಚಾರ್ಜ್ ನಲ್ಲಿ 85 ಕಿಲೋಮೀಟರ್ ರೇಂಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ.

ಈ ಸ್ಕೂಟರ್ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಇದು ಕೇವಲ 3.5 ಗಂಟೆಗಳಲ್ಲಿ 0 ಯಿಂದ 80% ವರೆಗೆ ಚಾರ್ಜ್ ಮಾಡಬಹುದಾಗಿದೆ. ಇತರ ಎಲೆಕ್ಟ್ರಿಕ್ ಸ್ಕೂಟರ್‌ ಗಳಿಗೆ ಹೋಲಿಸಿದರೆ, ಈ ಸ್ಕೂಟರ್ ಸೂಪರ್-ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯನ್ನು ಹೊಂದಿದೆ. ಹೆಚ್ಚಿನ ಮೈಲೇಜ್ ಹಾಗೂ ಚಾರ್ಜಿಂಗ್ ನಲ್ಲಿ ಹೆಚ್ಚಿನ ಸೌಲಭ್ಯ ಇರುವುದರಿಂದ ಈ ಎಲೆಕ್ಟ್ರಿಕ್ ಮಾದರಿ ಖರೀದಿಗೆ ಉತ್ತಮ ಎನ್ನಬಹುದು.

Evtric Axis Electric Scooter Price
Evtric Axis Electric Scooter ನಲ್ಲಿ ಡ್ಯುಯಲ್ ಡಿಸ್ಕ್ ಬ್ರೇಕ್ ಸಿಸ್ಟಮ್‌ ಆಯ್ಕೆಯನ್ನು ಹೊಂದಿದೆ. ಈ ಬ್ರೇಕಿಂಗ್ ವ್ಯವಸ್ಥೆಯು ಆರಾಮದಾಯಕ ಮತ್ತು ವಿಶ್ವಾಸಾರ್ಹ ಬ್ರೇಕಿಂಗ್ ಅನುಭವವನ್ನು ನೀಡುತ್ತದೆ. Evtric Axis Electric Scooter ನ ಆರಂಭಿಕ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ 75,482 ರೂ ಆಗಿದೆ. ಅಲ್ಲದೆ ಈ ಎಲೆಕ್ಟ್ರಿಕ್ ಸ್ಕೂಟರ್ ಕೆಂಪು, ಬೂದು, ಬಿಳಿ, ಮತ್ತು ಹಳದಿ ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ.

Join Nadunudi News WhatsApp Group

Evtric Axis Electric Scooter
Image Credit: Zigwheels

Join Nadunudi News WhatsApp Group