Property Tax: ಸ್ವಂತ ಆಸ್ತಿ ಹೊಂದಿರುವ ಎಲ್ಲರಿಗೂ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್, ವಿನಾಯಿತಿ ಘೋಷಣೆ.

ಸ್ವಂತ ಆಸ್ತಿ ಹೊಂದಿರುವ ಎಲ್ಲರಿಗೂ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್

Exception For Property Tax: ಸಾಮಾನ್ಯವಾಗಿ ಜನರು ಹೆಚ್ಚಾಗಿ ಮನೆ ಅಥವಾ ಭೂಮಿಯನ್ನು ಖರೀದಿಸಲು ಇಷ್ಟಪಡುತ್ತಾರೆ. ಆಸ್ತಿ ಖರೀದಿಯು ಭವಿಷ್ಯಕ್ಕೆ ಆರ್ಥಿಕ ಸುರಕ್ಷತೆಯನ್ನು ನೀಡುತ್ತದೆ. ಇನ್ನು ಭೂಮಿ ಅಥವಾ ಮನೆ ಖರೀದಿ ಮಾಡಿದರೆ ನೀವು ಅದಕ್ಕೆ ಸಂಬಂಧಿಸಿದ ಎಲ್ಲ ನಿಯಮಗಳನ್ನು ತಿಳಿಯುವುದು ಅಗತ್ಯ.

ಏಕೆಂದರೆ ಭೂಮಿ ಖರೀದಿ, ಮನೆ ಖರೀದಿಗೆ ಪ್ರತ್ಯೇಕ ತೆರಿಗೆ ನಿಯಮಗಳಿವೆ ಎನ್ನುವ ವಿಚಾರ ನಿಮಗೆ ತಿಳಿದಿರಲಿ. ಭೂಮಿ ಖರೀದಿ ಅಥವಾ ಮಾರಾಟವನ್ನು ಮಾಡಬೇಕಿದ್ದರೆ ತೆರಿಗೆ ನಿಯಮವನ್ನು ಅನುಸರಿಸಬೇಕಾಗುತ್ತದೆ.

Exception For Property Tax
Image Credit: emamirealty

ಸ್ವಂತ ಆಸ್ತಿ ಹೊಂದಿರುವ ಎಲ್ಲರಿಗೂ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್
ದೊಡ್ಡ ಮೊತ್ತದ ವ್ಯವಹಾರಕ್ಕೆ ತೆರಿಗೆ ನಿಯಮಗಳು ಅನ್ವಯವಾಗುತ್ತದೆ. ತೆರಿಗೆ ಇಲಾಖೆಯ ನಿಯಮವನ್ನು ಹೇಳುವುದಾದರೆ, ನೀವು ಮನೆಯನ್ನು ಮಾರಾಟ ಮಾಡುವಾಗ ಪಡೆಯುವ ಮೊತ್ತಕ್ಕೂ ತೆರಿಗೆ ವಿಧಿಸಲಾಗುತ್ತದೆ. ಆಸ್ತಿ ಮಾರಾಟದಲ್ಲಿ ಲಾಭ ಅಥವಾ ನಷ್ಟವಾಗಲಿ ಆಸ್ತಿಯ ಮಾಲೀಕರು ಮೊತ್ತದ ಮೇಲೆ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಆದಾಯ ತೆರಿಗೆ ನಿಯಮಗಳು ಹೇಳುತ್ತವೆ. ಇದೀಗ ರಾಜ್ಯ ಸರ್ಕಾರದಿಂದ ಆಸ್ತಿ ತೆರಿಗೆಗೆ ಸಂಬಂಧಿಸಿದಂತೆ ಗುಡ್ ನ್ಯೂಸ್ ಹೊರಬಿದ್ದಿದೆ.

ಆಸ್ತಿ ತೆರಿಗೆ ಪಾವತಿಗೆ ವಿನಾಯಿತಿ ಘೋಷಣೆ
ಸದ್ಯ ರಾಜ್ಯ ಸರ್ಕಾರ ಆಸ್ತಿ ತೆರಿಗೆ ಪಾವತಿಯಲಿ ವಿನಾಯಿತಿಯನ್ನು ಘೋಷಿಸಿದೆ. ರಾಜ್ಯ ಸರಕಾರದಿಂದ ನಿಗದಿತ ಕಾಲಮಿತಿಯೊಳಗೆ ಗ್ರಾಮ ಪಂಚಾಯಿತಿ ಆಸ್ತಿ ತೆರಿಗೆ ಪಾವತಿಸಿದರೆ ಶೇ.5 ರಷ್ಟು ರಿಯಾಯಿತಿ ನೀಡುವುದಾಗಿ ಘೋಷಿಸಲಾಗಿದೆ. ಈ ಮೂಲಕ ಜನತೆಗೆ ಶುಭ ಸುದ್ದಿ ನೀಡಿದ್ದಾರೆ. ಹೌದು, ಈ ರಿಯಾಯಿತಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಘೋಷಿಸಿದೆ.

Join Nadunudi News WhatsApp Group

ಒಂದೇ ಬಾರಿಗೆ ಆಸ್ತಿ ತೆರಿಗೆ ಪಾವತಿಸಿ ಶೇ.5ರಷ್ಟು ರಿಯಾಯಿತಿ ಪಡೆಯಲು ಗ್ರಾಮ ಪಂಚಾಯಿತಿ ತಿಳಿಸಿದೆ. ಹಣಕಾಸು ವರ್ಷದ ಆರಂಭದ ಮೂರು ತಿಂಗಳೊಳಗೆ ಅಂದರೆ ಏಪ್ರಿಲ್‌ ನಿಂದ ಜೂನ್ ಅಂತ್ಯದವರೆಗೆ ಅಂದರೆ 30-06-2024 ರೊಳಗೆ ತೆರಿಗೆಯನ್ನು ಪಾವತಿಸಿ ಮತ್ತು 5% ರಿಯಾಯಿತಿ ಪಡೆಯಬಹುದು.

Property Tax Latest News
Image Credit: Tataaia

Join Nadunudi News WhatsApp Group