rampur whiskey: ಇದೆ ನೋಡಿ ಭಾರತದ ಅತೀ ದುಬಾರಿ ವಿಸ್ಕಿ, ಇದನ್ನ ಶ್ರೀಮಂತರು ಮಾತ್ರ ಕುಡಿಯುತ್ತಾರೆ

ಭಾರತದ ಒಂದೇ ಒಂದು ಅತ್ಯಂತ ದುಬಾರಿ ವಿಸ್ಕಿ ಬ್ರಾಂಡ್ ಯಾವುದು ಗೊತ್ತಾ...?

Expensive whiskey In India: ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದ್ದರೂ ಕೂಡ ಅದೆಷ್ಟೋ ಜನರು ಮದ್ಯಪಾನ ಸೇವನೆಯ ಅಭ್ಯಾಸ ಮಾಡಿಕೊಂಡಿದ್ದಾರೆ. ಆಲ್ಕೋಹಾಲ್ ನಲ್ಲಿ ಹಲವಾರು ಬ್ರಾಂಡ್ ಗಳಿರುತ್ತದೆ. ಕಡಿಮೆ ಬೆಲೆಯಿಂದ ಹಿಡಿದು ದುಬಾರಿ ಬೆಲೆಯ ಬ್ರಾಂಡ್ ನ ಆಲ್ಕೋಹಾಲ್ ಸಿಗುತ್ತಲೇ.

ಇನ್ನು ಕಾಸ್ಟ್ಲಿ ಬ್ರಾಂಡೆಡ್ ಆಲ್ಕೋಹಾಲ್ ನಲ್ಲಿ ವಿಸ್ಕಿ ಮೊದಲ ಸ್ಥಾನದಲ್ಲಿದೆ ಎನ್ನಬಹುದು. ವಿಸ್ಕಿಗಳಲ್ಲಿ ಚಿಪರ್ ವಿಸ್ಕಿ ಸಿಗುತ್ತದೆ. ಅದೇ ರೀತಿ ಲಕ್ಷ ವಿಸ್ಕಿಗಳು ಕೂಡ ಇವೆ. ನಿಮಗೆ ಗೊತ್ತೇ…? ಲಕ್ಷಾಂತರ ಬೆಲೆಗೆ ಸೇಲ್ ಆಗುವ ಭಾರತದ ಒಂದೇ ಒಂದು ದುಬಾರಿ ಬ್ರಾಂಡ್ ಇದೆ. ಅದರ ಬಗ್ಗೆ ನಾವೀಗ ಈ ಲೇಖನದಲ್ಲಿ ಮಾಹಿತಿ ನೀಡಲಿದ್ದೇವೆ.

Expensive whiskey In India
Image Credit: Ianslife

ಭಾರತದ ಒಂದೇ ಒಂದು ಅತ್ಯಂತ ದುಬಾರಿ ವಿಸ್ಕಿ ಬ್ರಾಂಡ್
ರಾಂಪುರ ಸಿಗ್ನೇಚರ್ ರಿಸರ್ವ್ ಸಿಂಗಲ್ ಮಾಲ್ಟ್ ವಿಸ್ಕಿ ಭಾರತದ ಅತ್ಯಂತ ದುಬಾರಿ ವಿಸ್ಕಿಯಾಗಿದ್ದು, ಪ್ರತಿ ಬಾಟಲಿಗೆ 5 ಲಕ್ಷ ರೂ. ಇದೆ. ಇದನ್ನು ರಾಂಪುರ್ ಡಿಸ್ಟಿಲರಿ ತಯಾರಿಸುತ್ತದೆ. ಪ್ರಸ್ತುತ ರಾಂಪುರ್ ಡಿಸ್ಟಿಲರಿಯು ರಾಡಿಕೋ ಖೈತಾನ್ ಇನ್ಸ್ಟಿಟ್ಯೂಟ್ ಆಗಿ ಬದಲಾಗಿದೆ. ಈ ಅಲ್ಟ್ರಾ ಐಷಾರಾಮಿ ರಾಂಪುರ್ ಸಿಗ್ನೇಚರ್ ರಿಸರ್ವ್ ವಿಸ್ಕಿಯನ್ನು ರಾಡಿಕೊ ಖೈತಾನ್ ಸಂಸ್ಥೆಯು ವಿವಿಧ ರೀತಿಯ ಪ್ರೀಮಿಯಂ ಸ್ಪಿರಿಟ್‌ ಗಳೊಂದಿಗೆ ತಯಾರಿಸಿದೆ ಹೈದರಾಬಾದ್ ಡ್ಯೂಟಿ ಪ್ರಿ (ಸಂಸ್ಥೆ) ನಲ್ಲಿ ಮಾರಾಟ ಮಾಡಲಾಗುತ್ತದೆ.

400 ಬಾಟಲಿಗಳಿಗೆ ಸೀಮಿತವಾಗಿದ್ದು, ಈ ಐಷಾರಾಮಿ ಬ್ರಾಂಡ್ ವಿಸ್ಕಿಯ ಎರಡು ಬಾಟಲಿಗಳು ಮಾತ್ರ ಈಗ ಮಾರಾಟಕ್ಕೆ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ. 400-ಬಾಟಲ್ ರಾಂಪುರ ಸಿಗ್ನೇಚರ್ ರಿಸರ್ವ್‌ ನ ಕೊನೆಯ ಎರಡು ಬಾಟಲಿಗಳು ಈಗ ಹೈದರಾಬಾದ್ ಡ್ಯೂಟಿ ಪ್ರಿ ವೆಬ್‌ ಸೈಟ್‌ ನಲ್ಲಿ ಲಭ್ಯವಿದೆ. ಇದು ಕೇವಲ ವಿಸ್ಕಿಯನ್ನು ಪ್ರತಿನಿಧಿಸುವುದಿಲ್ಲ, ಇದು ಭಾರತೀಯ ಕರಕುಶಲತೆ ಮತ್ತು ಪರಂಪರೆಯನ್ನು ಪ್ರತಿನಿಧಿಸುತ್ತದೆ. ರಾಡಿಕೊ ಖೈತಾನ್‌ ನ ಬ್ರಾಂಡ್‌ ಗಳ ಅತ್ಯುನ್ನತ ಗುಣಮಟ್ಟವನ್ನು ಅನುಭವಿಸಲು ಉತ್ಸಾಹಿಗಳು, ಸಂಗ್ರಹಕಾರರು ಮತ್ತು ಪ್ರಯಾಣಿಕರನ್ನು ಆಹ್ವಾನಿಸುತ್ತದೆ ಎಂದು ರಾಡಿಕೊ ಖೈತಾನ್‌ ನ ವ್ಯವಸ್ಥಾಪಕ ನಿರ್ದೇಶಕ ಅಭಿಷೇಕ್ ಖೇತಾನ್ ಹೇಳಿದ್ದಾರೆ.

ಈ ಅತ್ಯಂತ ಐಷಾರಾಮಿ ರಾಂಪುರ್ ಸಿಗ್ನೇಚರ್ ರಿಸರ್ವ್ ಜೊತೆಗೆ, Radico ಖೈತಾನ್ ಹೈದರಾಬಾದ್ ಡ್ಯೂಟಿ-ಫ್ರೀ ವೆಬ್‌ ಸೈಟ್‌ ನಲ್ಲಿ ವ್ಯಾಪಕ ಶ್ರೇಣಿಯ ಪ್ರೀಮಿಯಂ ಸ್ಪಿರಿಟ್‌ ಗಳನ್ನು ಹೊಂದಿದೆ. ಇದರಲ್ಲಿ ವಿಶಿಷ್ಟವಾದ ರಾಂಪುರ್ ಅಸಾವಾ ಇಂಡಿಯನ್ ಸಿಂಗಲ್ ಮಾಲ್ಟ್ ವಿಸ್ಕಿ, ಶ್ರೀಮಂತ ಮತ್ತು ಸಂಕೀರ್ಣವಾದ ರಾಂಪುರ ಡಬಲ್ ಕ್ಯಾಸ್ಕ್ ಇಂಡಿಯನ್ ಸಿಂಗಲ್ ಮಾಲ್ಟ್ ವಿಸ್ಕಿ, ಜೈಸಲ್ಮೇರ್ ಇಂಡಿಯನ್ ಕ್ರಾಫ್ಟ್ ಜಿನ್ ಮತ್ತು ಗೋಲ್ಡ್ ಎಡಿಷನ್ ಮತ್ತು ರೀಗಲ್ ರಾಯಲ್ ರಣಥಂಬೋರ್ ಹೆರಿಟೇಜ್ ಕಲೆಕ್ಷನ್ ವಿಸ್ಕಿಯನ್ನು ಒಳಗೊಂಡಿದೆ.

Join Nadunudi News WhatsApp Group

Rampura Signature Reserve Single Malt
Image Credit: GQindia

Join Nadunudi News WhatsApp Group