Labour Card: ಎಲ್ಲಾ ಕಾರ್ಮಿಕರಿಗೆ ಗುಡ್ ನ್ಯೂಸ್, ಇನ್ಮುಂದೆ ಈ ಸೇವೆಗಳು ನಿಮಗೆ ಉಚಿತವಾಗಿ ಸಿಗಲಿದೆ.

ಲೇಬರ್ ಕಾರ್ಡ್ ಇನ್ಮುಂದೆ ಈ ಸೇವೆಗಳು ಉಚಿತವಾಗಿ ಸಿಗಲಿದೆ

Facility for Labour Card Holders: ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರು ಕಾಲಕಾಲಕ್ಕೆ ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯಲು Labour Card ಅನ್ನು ಸರ್ಕಾರ ಪರಿಚಯಿಸಿದೆ. ಅಸಂಘಟಿತ ವಲಯದ ಕಾರ್ಮಿಕರಿಗೆ ಸರ್ಕಾರ ನೀಡುವ ಗುರುತಿನ ಚೀಟಿಯನ್ನು ಕಾರ್ಮಿಕ ಕಾರ್ಡ್ (Labour Card) ಎನ್ನಲಾಗುತ್ತದೆ.

ಆರೋಗ್ಯ, ವಿಮೆ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳಂತಹ ವಿವಿಧ ಪ್ರಯೋಜನಗಳು ಮತ್ತು ಯೋಜನೆಗಳನ್ನು ಪಡೆಯಲು ಈ Card ಸಹಾಯ ಮಾಡುತ್ತದೆ. Labour Card ನ ಮೂಲಕ ಅಸಂಘಟಿತ ವಲಯದ ಕಾರ್ಮಿಕರು ಹೆಚ್ಚಿನ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಸದ್ಯ ನಾವೀಗ ಈ ಲೇಖನದಲ್ಲಿ Labour Card ನ ಮೂಲಕ ಏನೆಲ್ಲಾ ಸೌಲಭ್ಯ ಸಿಗಲಿದೆ ಎನ್ನುವ ಬಗ್ಗೆ ಮಾಹಿತಿ ನೀಡಲಿದ್ದೇವೆ.

Karnataka Labour Card
Image Credit: PM Modi Yojana

ಲೇಬರ್ ಕಾರ್ಡ್ ಇನ್ಮುಂದೆ ಈ ಸೇವೆಗಳು ಉಚಿತವಾಗಿ ಸಿಗಲಿದೆ
ನೀವು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಸದಸ್ಯರಾಗಿದ್ದರೆ, ನೀವು ಕಾರ್ಮಿಕ ಕಾರ್ಡ್ ಹೊಂದಿದ್ದರೆ ಮಂಡಳಿಯು ನೀಡುವ ಸೌಲಭ್ಯಗಳನ್ನು ಪಡೆಯಬಹುದು. ನೀವು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಸದಸ್ಯರಾಗಿದ್ದರೆ ಈ ಕೆಳಗಿನ ಎಲ್ಲಾ ಸೌಲಭ್ಯಗಳನ್ನು ಪಡೆಯಬಹುದು.

•ಪಿಂಚಣಿ ಸೌಲಭ್ಯ

•ಕುಟುಂಬ ಪಿಂಚಣಿ ಸೌಲಭ್ಯ

Join Nadunudi News WhatsApp Group

•ಅಂಗವಿಕಲ ಪಿಂಚಣಿ

•ಟೂಲ್ ಕಿಟ್ ಸೌಲಭ್ಯ

•ಹೆರಿಗೆ ಸೌಲಭ್ಯ

•ಅಂತ್ಯಕ್ರಿಯೆಯ ವೆಚ್ಚಗಳು ಮತ್ತು ಗ್ರಾಚ್ಯುಟಿ ಭತ್ಯೆ

•ಶೈಕ್ಷಣಿಕ ನೆರವು

•ವೈದ್ಯಕೀಯ ನೆರವು

•ಅಪಘಾತ ಪರಿಹಾರ

•ಪ್ರಮುಖ ವೈದ್ಯಕೀಯ ವೆಚ್ಚ ಸಬ್ಸಿಡಿ

•ಮದುವೆ ಸಹಾಯಧನ

•ತಾಯಿ ಮಗು ಸಹಾಯ ಹಸ್ತ

Facility for Labour Card Holders
Image Credit: TV9 Telugu

Labour Card ಅನ್ನು ಪಡೆದುಕೊಳ್ಳಲು ಯಾರು ಅರ್ಹರು…?
•ಕಾರ್ಮಿಕ ವರ್ಗದವರು ಅಂದರೆ ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿಕೊಂಡವರು ಸರ್ಕಾರ ನೀಡುತ್ತಿರುವ Labour card ಅನ್ನು ಪಡೆಯಲು ಅರ್ಹರಾಗಿರುತ್ತಾರೆ.

•ಈ ಲೇಬರ್ ಕಾರ್ಡ್ ನಿಂದಾಗಿ ವಿಮ ಸೌಲಭ್ಯದಿಂದ ಹಿಡಿದು ಕಾರ್ಮಿಕ ಕುಟುಂಬಕ್ಕೆ ಅಗತ್ಯವಿರುವ ಹೆಚ್ಚಿನ ಸೌಲಭ್ಯವನ್ನು ಪಡೆದುಕೊಳ್ಳಬಹುದು.

•ಒಂದು ವರ್ಷದ ಕಟ್ಟಡ ನಿರ್ಮಾಣದಲ್ಲಿ ಕನಿಷ್ಠ 90 ದಿನಗಳು ಕೆಲಸ ಮಾಡಿದವರು ಈ ಲೇಬರ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದು.

•ಇನ್ನು 18 ರಿಂದ 50 ವರ್ಷದ ಒಳಗಿನ ಕಾರ್ಮಿಕರು ಲೇಬರ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಬಹುದು.

•ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯ ವಿವರ, ಮೊಬೈಲ್ ಸಂಖ್ಯೆಯನ್ನು ನೀಡಿ ಅರ್ಜಿ ಸಲ್ಲಿಸಬಹುದು.

labour card 2024
Image Credit: Housing

Join Nadunudi News WhatsApp Group