Working Hours: ರಾಜ್ಯದ ಕಾರ್ಮಿಕರಿಗೆ ಭರ್ಜರಿ ಗುಡ್ ನ್ಯೂಸ್, ಇನ್ಮುಂದೆ ಇದಕ್ಕಿಂತ ಹೆಚ್ಚು ಸಮಯ ಕೆಲಸ ಮಾಡುವಂತಿಲ್ಲ

ಕಾರ್ಮಿಕರ ಸಹಾಯಕ್ಕಾಗಿ ಹೊಸ ನಿಯಮ ಜಾರಿಗೆ ತಂದ ರಾಜ್ಯ ಸರ್ಕಾರ, ಇನ್ನುಮುಂದೆ ಕಾರ್ಮಿಕರ ಕೆಲಸದ ಅವಧಿ ಇಳಿಕೆ ಆಗಲಿದೆ

Factory Workers Work Time Reduce In Karnataka: ರಾಜ್ಯದಲ್ಲಿ ಸರ್ಕಾರ ಕಾರ್ಮಿಕರಿಗಾಗಿ ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ, ಈ ನಿಯಮ ಕಾರ್ಮಿಕರಿಗೆ ಬಹಳ ಖುಷಿ ಕೊಡಲಿದೆ, ಅಷ್ಟೇ ಅಲ್ಲದೆ ಇದು ಎಲ್ಲಾ ಕಾರ್ಖಾನೆ ಕಾರ್ಮಿಕರಿಗೆ ಅನ್ವಯಿಸಲಿದೆ. ಕೆಲಸದ ಅವಧಿಗೆ ಸಂಬಂಧಿಸಿದಂತೆ ಹಲವು ಒತ್ತಡಗಳಿದ್ದು, ಇದಕ್ಕೆ ರಾಜ್ಯ ಸರ್ಕಾರ ಹೊಸದಾದ ಹೇಳಿಕೆಯನ್ನು ನೀಡಿದ್ದು ಇನ್ನುಮುಂದೆ ಕಾರ್ಖಾನೆ ಕಾರ್ಮಿಕರ ಕೆಲಸದ ಅವಧಿ 12 ರಿಂದ 8 ಗಂಟೆಗೆ ಇಳಿಕೆ ಮಾಡಲು ಸರ್ಕಾರ ನಿರ್ಧರಿಸಿದೆ.

C M Siddaramaiah Latest News
Image Credit: Freepressjournal

ಕಾರ್ಖಾನೆ ಕಾರ್ಮಿಕರಿಗಾಗಿ ಹೊಸ ನಿಯಮ ಜಾರಿ

ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರ ಕೆಲಸದ ಅವಧಿ ಅಧಿಕ ಇದ್ದು, ಇದರಿಂದ ಕಾರ್ಮಿಕರಿಗೆ ಬಹಳ ತೊಂದರೆ ಆಗುತ್ತಿತ್ತು ಹಾಗಾಗಿ ಈ ಕುರಿತು ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ನೀರಾವರಿ ಹೋರಾಟಗಾರರು, ಭೂ ಹೀನರ ಹೋರಾಟ ಸಮಿತಿ, ಕಟ್ಟಡ ಕಾರ್ಮಿಕರ ಹೋರಾಟ ಸಮಿತಿ ಹಾಗೂ ಮಹಿಳಾ ಸಂಘಟನೆಗಳು ಹಾಗೂ ಟ್ರೇಡ್ ಯೂನಿಯನ್ ಸಂಘಟನೆಗಳ ಸಮನ್ವಯ ಸಮಿತಿಯ ನಾಯಕರುಗಳು, ಪದಾಧಿಕಾರಿಗಳ ಜೊತೆ ಇಂದು ಸಿಎಂ ಸಭೆ ನಡೆಸಿದರು. ಈ ಸಭೆಯಲ್ಲಿ ಸಿದ್ದರಾಮಯ್ಯ (Siddaramaiah) ಅವರು ಕಾರ್ಮಿಕ ಮುಖಂಡರಿಗೆ ಕೆಲಸದ ಅವಧಿ ಕಡಿಮೆ ಮಾಡುವ ಕುರಿತು ಭರವಸೆ ನೀಡಿದರು.

Factory Workers Work Time Reduce In Karnataka
Image Credit: Diypi

ಕಾರ್ಮಿಕರ ಕೆಲಸದ ಅವಧಿ ಇಳಿಕೆಗೆ ನಿರ್ಧಾರ

ಈ ಹಿಂದೆ ಕಾರ್ಮಿಕರ ಸಮಸ್ಯೆಗಳನ್ನು ಕಾನೂನಾತ್ಮಕವಾಗಿ ಪರಿಶೀಲಿಸಿ, ಬಿಜೆಪಿ ಅವಧಿಯಲ್ಲಿ 8 ಗಂಟೆ ಅವಧಿಯನ್ನ 12 ಗಂಟೆಗೆ ಹೆಚ್ಚಳ ಮಾಡಲಾಗಿತ್ತು. ಈಗ ಮತ್ತೆ 12 ಗಂಟೆಯಿಂದ 8 ಗಂಟೆಗೆ ಕೆಲಸದ ಅವಧಿ ಇಳಿಕೆಗೆ ಸರ್ಕಾರ ನಿರ್ಧಾರ ಮಾಡಿದ್ದು, ಈ ಬಗ್ಗೆ ಶೀಘ್ರವೇ ನಿರ್ಧಾರ ಪ್ರಕಟಿಸುವುದಾಗಿ ಸಿಎಂ ಭರವಸೆ ನೀಡಿದರು. ಸರ್ಕಾರದ ಈ ನಿರ್ಧಾರ ಕಾರ್ಖಾನೆಯ ಕಾರ್ಮಿಕರಿಗೆ ಬಹಳ ಸಹಾಯಕ ಆಗಲಿದೆ ಎನ್ನಲಾಗಿದೆ.

Join Nadunudi News WhatsApp Group

Join Nadunudi News WhatsApp Group