FASTag KYC Update: ರಾತ್ರೋರಾತ್ರಿ ಕೇಂದ್ರದ ಇನ್ನೊಂದು ಘೋಷಣೆ, ವಾಹನ ಇದ್ದವರಿಗೆ ಬಿಗ್ ರಿಲೀಫ್ ನೀಡಿದ ಸರ್ಕಾರ.

ಫಾಸ್ಟ್ KYC ಪೂರ್ಣಗೊಳಿಸಿಕೊಳ್ಳಲು ಇನ್ನಷ್ಟು ಸಮಯಾವಕಾಶ

FASTag KYC Date Extended: ಸದ್ಯ NHAI ನಿಂದ FASTag ಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಯಾಗಿದೆ. ಫಾಸ್ಟ್ ಟ್ಯಾಗ್ ಬಳಸುವ ಪ್ರತಿಯೊಬ್ಬರೂ ಕೂಡ ಈ ನಿಯಮವನ್ನು ಅನುಸರಿಸುವುದು ಅಗತ್ಯವಾಗಿದೆ. NHAI ಈವರೆಗೆ ಫ್ಸ್ಟ್ ಟ್ಯಾಗ್ ಗೆ ನಿಗದಿಪಡಿಸಿದ್ದ ಗಡವು ಇದೀಗ ಮುಕ್ತಾಯಗೊಂಡಿದೆ. ಸದ್ಯ ಫಾಸ್ಟ್ ಟ್ಯಾಗ್ ಬಗ್ಗೆ ಚಿಂತೆ ಮಾಡುತ್ತಿರುವವರಿಗೆ NHAI ನಿಂದ ಗುಡ್ ನ್ಯೂಸ್ ಹೊರಬಿದ್ದಿದೆ.

Fastag kyc Mandatory
Image Credit: Gizbot

ವಾಹನ ಇದ್ದವರಿಗೆ ಬಿಗ್ ರಿಲೀಫ್ ನೀಡಿದ ಸರ್ಕಾರ
ಈವರೆಗೆ ಪಾಸ್ಟ್ ಟ್ಯಾಗ್ ಗೆ KYC ಪೂರ್ಣಗೊಳಿಸಲು ಜನವರಿ 31 2024 ಕೊನೆಯ ದಿನಾಂಕವಾಗಿದೆ. ಈ ದಿನಾಂಕದೊಳಗೆ KYC ಮಾಡುವುದು ಕಡ್ಡಾಯವಾಗಿತ್ತು. ಇನ್ನು ನಿಗದಿತ ದಿನಾಂಕದೊಳಗೆ KYC ಪೂರ್ಣಗೊಳಿಸದ ಫಾಸ್ಟ್ ಟ್ಯಾಗ್ ಅನ್ನು ಜನವರಿ 31 ರ ನಂತರ ನಿಷ್ಕ್ರಿಯಗೊಳಿಸಲಾಗುವುದು ಎಂದು ಭಾರತೀಯ ರಾಷ್ಟ್ರೀಯ ಪ್ರಾಧಿಕಾರ ಸೂಚನೆ ನೀಡಿತ್ತು.

ಆದರೆ ರಾತ್ರೋರಾತ್ರಿ NHAI ವಾಹನ ಮಾಲೀಕರಿಗೆ ಬಿಗ್ ರಿಲೀಫ್ ನೀಡಿದೆ. ಹೌದು, ಫಾಸ್ಟ್ KYC ಪೂರ್ಣಗೊಳಿಸಿಕೊಳ್ಳಲು ಇನ್ನಷ್ಟು ಸಮಯಾವಕಾಶವನ್ನು ನೀಡಿದೆ.

FASTag KYC Date Extended
Image Credit: Hindustantimes

ರಾತ್ರೋರಾತ್ರಿ ಕೇಂದ್ರದ ಇನ್ನೊಂದು ಘೋಷಣೆ
ಫಾಸ್ಟ್ ಟ್ಯಾಗ್ ಬಳಕೆದಾರರು ಒಂದು ವಾಹನಕ್ಕೆ ಒಂದೇ ಫಾಸ್ಟ್ ಟ್ಯಾಗ್ ಅನ್ನು ಅನುಸರಿಸಬೇಕು ಮತ್ತು ಈ ಹಿಂದೆ ನೀಡಲಾದ ಎಲ್ಲ ಫಾಸ್ಟ್ ಟ್ಯಾಗ್ ಗಳನ್ನೂ ಆಯಾ ಬ್ಯಾಂಕ್ ಗಳ ಮೂಲಕ ತ್ಯಜಿಸಬೇಕು.

ಒಂದು ವಾಹನ ಒಂದು ಫಾಸ್ಟ್‌ ಟ್ಯಾಗ್ ಅಭಿಯಾನದಡಿಯಲ್ಲಿ ಫಾಸ್ಟ್ಯಾಗ್‌ ನ ಉತ್ತಮ ಅನುಭವವನ್ನು ಉತ್ತೇಜಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಹಿತಿ ತಿಳಿಸಿದೆ. ಜನವರಿ 31 2024 ರೊಳಗೆ ನಿಮ್ಮ ಫಾಸ್ಟ್ ಟ್ಯಾಗ್ KYC ಪೂರ್ಣಗೊಳ್ಳದಿದ್ದರೆ, ನಿಮಗೆ NHAI ಇನ್ನು ಒಂದು ತಿಂಗಳು ಸಮಯಾವಕಾಶವನ್ನು ನೀಡಿದೆ. NHAI ಫಾಸ್ಟ್ ಟ್ಯಾಗ್ KYC ಗಾಗಿ February 29 2024 ರವರೆಗೆ ಅವಕಾಶವನ್ನು ನೀಡಿದೆ.

Join Nadunudi News WhatsApp Group

Join Nadunudi News WhatsApp Group