KYC Deadline: Fast tag ಬಳಸುವವರಿಗೆ ಕೇಂದ್ರದಿಂದ ಗುಡ್ ನ್ಯೂಸ್, ರಾತ್ರೋರಾತ್ರಿ ಕೇಂದ್ರದ ಇನ್ನೊಂದು ಘೋಷಣೆ

Fastag ಕುರಿತಂತೆ ಇನ್ನೊಂದು ಘೋಷಣೆ ಮಾಡಿದ ಕೇಂದ್ರ ಸರ್ಕಾರ

FASTag KYC Deadline Extended: ಸದ್ಯ ದೇಶದಲ್ಲಿ ಹೊಸ ಹೊಸ ಬದಲಾವಣೆಯ ಜೊತೆಗೆ ವಾಹನಗಳಿಗೆ ಸಂಬಂಧಿಸಿದಂತೆ ಅನೇಕ ನಿಯಮಗಳು ಬದಲಾಗುತ್ತಿವೆ. ವಾಹನ ಸವಾರರು ಬದಲಾಗುತ್ತಿರುವ ಪ್ರತಿ ನಿಯಮಗಳ ಬಗ್ಗೆ ಮಾಹಿತಿ ತಿಳಿಯುವುದು ಅಗತ್ಯವಾಗಿದೆ. ಕೇಂದ್ರ ಸರ್ಕಾರ ವಾಹನಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಇನ್ನು ಸಾಮಾನ್ಯವಾಗಿ ಟೋಲ್ ಸಂಗ್ರಹಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು FASTAg ಅನ್ನು ಬಲಸುತ್ತಾರೆ.

ಈ ಫಾಸ್ಟ್ ಟ್ಯಾಗ್ ಮೂಲಕ ಟೋಲ್ ಸಂಗ್ರಹಣೆಯು ಬಹಳ ಸುಲಭವಾಗಲಿದೆ. ಸದ್ಯ NHAI ನಿಂದ FASTag ಗೆ ಸಂಬಂಧಿಸಿದಂತೆ KYC ನಿಯಮ ಜಾರಿಯಾಗಿದೆ. ಫಾಸ್ಟ್ ಟ್ಯಾಗ್ ಬಳಸುವ ಪ್ರತಿಯೊಬ್ಬರೂ ಕೂಡ KYC ಮಾಡುವುದು ಅಗತ್ಯವಾಗಿದೆ. NHAI ಈವರೆಗೆ ಫಾಸ್ಟ್ ಟ್ಯಾಗ್ ಗೆ ನಿಗದಿಪಡಿಸಿದ್ದ ಗಡವು ಇದೀಗ ಮುಕ್ತಾಯಗೊಂಡಿದೆ. ಸದ್ಯ ಫಾಸ್ಟ್ ಟ್ಯಾಗ್ ಬಗ್ಗೆ ಚಿಂತೆ ಮಾಡುತ್ತಿರುವವರಿಗೆ NHAI ನಿಂದ ಗುಡ್ ನ್ಯೂಸ್ ಹೊರಬಿದ್ದಿದೆ.

FASTag KYC Deadline Extended
Image Credit: Informalnewz

ನಿಮ್ಮ ವಾಹನದ ಫಾಸ್ಟ್ ಟ್ಯಾಗ್ KYC ಪೂರ್ಣಗೊಂಡಿದ್ಯಾ..?
ಈವರೆಗೆ ಪಾಸ್ಟ್ ಟ್ಯಾಗ್ ಗೆ KYC ಪೂರ್ಣಗೊಳಿಸಲು NHAI ಜನವರಿ 31 2024 ಕೊನೆಯ ದಿಣ್ಣಕವನ್ನು ನಿಗದಿಪಡಿಸಿತ್ತು. ಈ ದಿನಾಂಕದೊಳಗೆ KYC ಮಾಡುವುದು ಕಡ್ಡಾಯವಾಗಿತ್ತು. ಇನ್ನು ನಿಗದಿತ ದಿನಾಂಕದೊಳಗೆ KYC ಪೂರ್ಣಗೊಳಿಸದ ಫಾಸ್ಟ್ ಟ್ಯಾಗ್ ಅನ್ನು ಜನವರಿ 31 ರ ನಂತರ ನಿಷ್ಕ್ರಿಯಗೊಳಿಸಲಾಗುವುದು ಎಂದು ಭಾರತೀಯ ರಾಷ್ಟ್ರೀಯ ಪ್ರಾಧಿಕಾರ ಸೂಚನೆ ನೀಡಿತ್ತು. ಆದರೆ ರಾತ್ರೋರಾತ್ರಿ NHAI ವಾಹನ ಮಾಲೀಕರಿಗೆ ಬಿಗ್ ರಿಲೀಫ್ ನೀಡಿದೆ.

ಫಾಸ್ಟ್ ಟ್ಯಾಗ್ KYC ಡೆಡ್ ಲೈನ್ ವಿಸ್ತರಣೆ ಮಾಡಿದ ಕೇಂದ್ರ
ಫಾಸ್ಟ್ ಟ್ಯಾಗ್ ಬಳಕೆದಾರರು ಒಂದು ವಾಹನಕ್ಕೆ ಒಂದೇ ಫಾಸ್ಟ್ ಟ್ಯಾಗ್ ಅನ್ನು ಅನುಸರಿಸಬೇಕು ಮತ್ತು ಈ ಹಿಂದೆ ನೀಡಲಾದ ಎಲ್ಲ ಫಾಸ್ಟ್ ಟ್ಯಾಗ್ ಗಳನ್ನೂ ಆಯಾ ಬ್ಯಾಂಕ್ ಗಳ ಮೂಲಕ ತ್ಯಜಿಸಬೇಕು. ಒಂದು ವಾಹನ ಒಂದು ಫಾಸ್ಟ್‌ ಟ್ಯಾಗ್ ಅಭಿಯಾನದಡಿಯಲ್ಲಿ ಫಾಸ್ಟ್ಯಾಗ್‌ ನ ಉತ್ತಮ ಅನುಭವವನ್ನು ಉತ್ತೇಜಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಹಿತಿ ತಿಳಿಸಿದೆ.

FASTag KYC Deadline Updates
Image Credit: India Today

ಜನವರಿ 31 2024 ರೊಳಗೆ ನಿಮ್ಮ ಫಾಸ್ಟ್ ಟ್ಯಾಗ್ KYC ಪೂರ್ಣಗೊಳ್ಳದಿದ್ದರೆ, ನಿಮಗೆ NHAI ಇನ್ನು ಒಂದು ತಿಂಗಳು ಸಮಯಾವಕಾಶವನ್ನು ನೀಡಿದೆ. NHAI ಫಾಸ್ಟ್ ಟ್ಯಾಗ್ KYC ಗಾಗಿ February 29 2024 ರವರೆಗೆ ಅವಕಾಶವನ್ನು ನೀಡಿದೆ. ಹೌದು, ಫಾಸ್ಟ್ KYC ಪೂರ್ಣಗೊಳಿಸಿಕೊಳ್ಳಲು ಇನ್ನಷ್ಟು ಸಮಯಾವಕಾಶವನ್ನು ನೀಡುವ ಮೂಲಕ ವಾಹನ ಸವಾರರಿಗೆ ತಮ್ಮ ಫಾಸ್ಟ್ ಟ್ಯಾಗ್ ಅನ್ನು ಉಳಿಸಿಕೊಳ್ಳಲು ಇನ್ನಷ್ಟು ಸಮಯಾವಕಾಶವನ್ನು ನೀಡಿದೆ.

Join Nadunudi News WhatsApp Group

Join Nadunudi News WhatsApp Group