FASTag KYC : ಜನವರಿ 31 ರ ನಂತರ ಈ ವಾಹನಗಳ Fastag ಬಂದ್ ಆಗಲಿದೆ, ಕೇಂದ್ರದಿಂದ ಇನ್ನೊಂದು ಕಠಿಣ ನಿರ್ಧಾರ.

FASTag Will Get Deactivated After January 31st: ದೇಶದಲ್ಲಿ Toll Plaza ಗಳಲ್ಲಿ ಟೋಲ್ (Toll) ಸಂಗ್ರಹಣೆಗಾಗಿ ಎಷ್ಟೇ ತಂತ್ರಜ್ಞಾನಗಳನ್ನು ಬಳಸಿದರು ಕೂಡ ವಾಹನ ಸವಾರರಿಗೆ ಟೋಲ್ ಪ್ಲಾಜಾದಲ್ಲಿ ಎದುರಾಗುವ ಸಮಸ್ಯೆ ನಿವಾರಣೆ ಆಗುತ್ತಿಲ್ಲ ಎನ್ನಬಹುದು. ಈಗಾಗಲೇ Toll ಪ್ಲಾಜಾದಲ್ಲಿ FASTag ಅನ್ನು ಅಳವಡಿಸಲಾಗಿದೆ.

ಈ FASTag ನ ಸಹಾಯದಿಂದ ಆದಷ್ಟು ವೇಗವಾಗಿ ಟೋಲ್ ಗಳನ್ನೂ ಸಂಗ್ರಹಿಸಲಾಗುತ್ತಿದೆ. ಮುಖ್ಯವಾಗಿ ಟೋಲ್ ಸಂಗ್ರಹಣೆಗಾಗಿ FASTag ಅನ್ನು ಬಳಸಲಾಗುತ್ತಿದೆ. ಈ ಫಾಸ್ಟ್ ಟ್ಯಾಗ್ ನ ಮೂಲಕ ಅತ್ಯಂತ ಸರಳ ವಿಧಾನದ ಮೂಲಕ ಟೋಲ್ ಸಂಗ್ರಹಣೆ ನಡೆಸಲಾಗುತ್ತಿದೆ. ಸದ್ಯ NHAI ನಿಂದ ಫಾಸ್ಟ್ ಟ್ಯಾಗ್ ಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಯಾಗಿದೆ.

FASTag Will Get Deactivated After January 31st
mage Credit: Punenow

ಜನವರಿ 31 ರ ನಂತರ ಈ ವಾಹನಗಳ Fastag ಬಂದ್ ಆಗಲಿದೆ
ಟೋಲ್ ಪಾವತಿಸಲು ಫಾಸ್ಟ್ಯಾಗ್ ಬಳಸುವ ಜನರಿಗೆ ಮಹತ್ವದ ಮಾಹಿತಿಯೊಬದು ಹೊರಬಿದ್ದಿದೆ. ಪಾಸ್ಟ್ ಟ್ಯಾಗ್ ಗೆ KYC ಪೂರ್ಣಗೊಳಿಸಲು ಜನವರಿ 31 2024 ಕೊನೆಯ ದಿನಾಂಕವಾಗಿದೆ. ಈ ದಿನಾಂಕದೊಳಗೆ KYC ಮಾಡುವುದು ಕಡ್ಡಾಯವಾಗಿದೆ. ನಿಗದಿತ ದಿನಾಂಕದೊಳಗೆ KYC ಪೂರ್ಣಗೊಳಿಸದ ಫಾಸ್ಟ್ ಟ್ಯಾಗ್ ಅನ್ನು ಜನವರಿ 31 ರ ನಂತರ ನಿಷ್ಕ್ರಿಯಗೊಳಿಸಲಾಗುವುದು ಎಂದು ಭಾರತೀಯ ರಾಷ್ಟ್ರೀಯ ಪ್ರಾಧಿಕಾರ ಸೂಚನೆ ನೀಡಿದೆ.

ಫಾಸ್ಟ್ ಟ್ಯಾಗ್ ಬಳಕೆದಾರರು ಒಂದು ವಾಹನಕ್ಕೆ ಒಂದೇ ಫಾಸ್ಟ್ ಟ್ಯಾಗ್ ಅನ್ನು ಅನುಸರಿಸಬೇಕು ಮತ್ತು ಈ ಹಿಂದೆ ನೀಡಲಾದ ಎಲ್ಲ ಫಾಸ್ಟ್ ಟ್ಯಾಗ್ ಗಳನ್ನೂ ಆಯಾ ಬ್ಯಾಂಕ್ ಗಳ ಮೂಲಕ ತ್ಯಜಿಸಬೇಕು. ಒಂದು ವಾಹನ ಒಂದು ಫಾಸ್ಟ್‌ ಟ್ಯಾಗ್ ಅಭಿಯಾನದಡಿಯಲ್ಲಿ ಫಾಸ್ಟ್ಯಾಗ್‌ ನ ಉತ್ತಮ ಅನುಭವವನ್ನು ಉತ್ತೇಜಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಹಿತಿ ತಿಳಿಸಿದೆ.

FASTag KYC Update
Image Credit: Deccanherald

ಕೇಂದ್ರದಿಂದ ಇನ್ನೊಂದು ಕಠಿಣ ನಿರ್ಧಾರ
ಟೋಲ್ ಪ್ಲಾಜಾಗಳಲ್ಲಿ ತಡೆರಹಿತ ಚಾಲನೆಯನ್ನು ನೀಡಲು ವಿವಿಧ ಕ್ರಮ ಕೈಗೊಳ್ಳಲಾಗುತ್ತದೆ. ಟೋಲ್ ಸಂಗ್ರಹಣೆಯಲ್ಲಿ ವಾಹನ ಸವಾರರ ಸಮಯ ವ್ಯರ್ಥವಾಗಬಾರದು ಎನ್ನುವ ಕಾರಣದಿಂದ ವಿವಿಧ ತಂತ್ರಜ್ಞಾನಗಳನ್ನು ಬಳಸಿ ಟೋಲ್ ಸಂಗ್ರಹಣೆ ಮಾಡಲಾಗುತ್ತಿದೆ. ಸದ್ಯ NHAI ನಿಂದ “ಒಂದು ವಾಹನಕ್ಕೆ ಒಂದೇ ಫಾಸ್ಟ್ ಟ್ಯಾಗ್” ಎನ್ನುವ ಹೊಸ ನಿಯಮ ಜಾರಿಯಾಗಿದೆ. ಎಲೆಕ್ಟ್ರಾನಿಕ್ ಟೋಲ್ ಸಂಗ್ರಹಣಾ ವ್ಯವಸ್ಥೆಯ ದಕ್ಷತೆಯನ್ನು ಹೆಚ್ಚಿಸಲು NHAI ಈ ನಿರ್ಧಾರ ಕೈಗೊಂಡಿದೆ.

Join Nadunudi News WhatsApp Group

Join Nadunudi News WhatsApp Group