FD Interest: ಈ 5 ಬ್ಯಾಂಕುಗಳ FD ಬಡ್ಡಿದರ ಬದಲಾವಣೆ, 2024 ರಲ್ಲಿ FD ಇಡಲು ಈ ಬ್ಯಾಂಕುಗಳು ಬೆಸ್ಟ್.

ಈ 5 ಬ್ಯಾಂಕುಗಳ FD ಬಡ್ಡಿದರದಲ್ಲಿ ಬದಲಾವಣೆ, FD ಇಡಲು ಈ ಬ್ಯಾಂಕ್ ಬೆಸ್ಟ್

Best Banks For FD INvestment: ಜನಸಾಮಾನ್ಯರ ಹಣದ ಉಳಿತಾಯದ ಆಯ್ಕೆಗೆ ಬ್ಯಾಂಕ್ ನೀಡುವ FD ಆಯ್ಕೆ ಉತ್ತಮ ಎನ್ನಬಹುದು. ಈ ಸ್ಥಿರ ಠೇವಣಿಯು ಮಾರುಕಟ್ಟೆಯ ಅಪಾಯಗಳಿಂದ ಮುಕ್ತವಾಗಿರುತ್ತದೆ. ಬ್ಯಾಂಕ್ ನ FD ಯಲ್ಲಿ ಹೂಡಿಕೆ ಮಾಡುವುದರಿಂದ ನೀವು ಹೆಚ್ಚಿನ ಲಾಭವನ್ನು ಪಡೆಯಬಹುದು.

ಈ ಹೂಡಿಕೆಯಲ್ಲಿ ನೀವು ನಷ್ಟದ ಬಗ್ಗೆ ಚಿಂತಿಸುವ ಅಗತ್ಯ ಇಲ್ಲ. ನೀವು ಹಣದ ಉಳಿತಾಯ ಮಾಡಲು ಬಯಸಿದರೆ ಬ್ಯಾಂಕುಗಳಲ್ಲಿ FD ಇಡುವುದು ಉತ್ತಮ. ದೇಶದ ಈ ಜನಪ್ರಿಯ ಬ್ಯಾಂಕ್ ಗಳು ಗ್ರಾಹಕರಿಗೆ FD ಮೇಲೆ ವಿಶೇಷ ಬಡ್ಡಿದರವನ್ನು ನೀಡುತ್ತಿದೆ. ನೀವು FD ಇಡುವ ಯೋಜನೆಯಲ್ಲಿದ್ದರೆ ಈ ಲೇಖನವನ್ನು ಓದುವ ಮೂಲಕ ಯಾವ ಬ್ಯಾಂಕ್ FD ಇಡಲು ಸೂಕ್ತ ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು.

Union Bank of India FD Interest Rate
Image Credit: Live Mint

ಈ 5 ಬ್ಯಾಂಕುಗಳ FD ಬಡ್ಡಿದರ ಬದಲಾವಣೆ

Union Bank of India
ಸಾರ್ವಜನಿಕ ವಲಯದ Union Bank of India ತನ್ನ ಸ್ಥಿರ ಠೇವಣಿಗಳ (FD ) ಮೇಲಿನ ಬಡ್ಡಿದರವನ್ನು ಬದಲಾಯಿಸಿದೆ. ಬ್ಯಾಂಕ್ 399 ದಿನಗಳ ಠೇವಣಿಗಳ ಮೇಲೆ 7.25% ಬಡ್ಡಿಯನ್ನು ನೀಡುತ್ತಿದೆ. 1 ವರ್ಷದಿಂದ 398 ದಿನಗಳ ಅವಧಿಗೆ 6.75% ಬಡ್ಡಿ ಲಭ್ಯವಿದೆ. 1 ವರ್ಷಕ್ಕಿಂತ ಕಡಿಮೆ ಅವಧಿಯ FD ಮೇಲೆ 3.50% ಬಡ್ಡಿ ಲಭ್ಯವಿದೆ. ಬ್ಯಾಂಕ್‌ನ ಅಧಿಕೃತ ವೆಬ್‌ ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಬಡ್ಡಿದರಗಳನ್ನು ಪರಿಶೀಲಿಸಬಹುದು.

•Punjab National Bank
ಸಾರ್ವಜನಿಕ ವಲಯದ PNB ಹೊಸ ಬಡ್ಡಿದರವನ್ನು ನೀಡುತ್ತಿದೆ. ಈ ಬ್ಯಾಂಕ್ ಒಂದೇ ತಿಂಗಳಲ್ಲಿ ಎರಡು ಬಾರಿ FD ಬಡ್ಡಿ ದರಗಳನ್ನು ಪರಿಷ್ಕರಿಸಿದೆ. ಸಾಮಾನ್ಯ ನಾಗರಿಕರು 7 ದಿನಗಳಿಂದ 10 ವರ್ಷಗಳ FD ಗಳ ಮೇಲೆ 3.50% ರಿಂದ 7.05% ರಷ್ಟು ಬಡ್ಡಿಯನ್ನು ಪಡೆಯುತ್ತಿದ್ದಾರೆ. ಹಿರಿಯ ನಾಗರಿಕರಿಗೆ ಬಡ್ಡಿ ದರ 7.55%. 400 ದಿನಗಳ FD ಯಲ್ಲಿ ಹೆಚ್ಚಿನ ಬಡ್ಡಿ ಲಭ್ಯವಿದೆ.

Join Nadunudi News WhatsApp Group

Punjab National Bank FD Interest Rate
Image Credit: Businesstoday

•Federal Bank of India
ಖಾಸಗಿ ವಲಯದ ಬ್ಯಾಂಕ್ ಆಗಿರುವ Federal Bank of India ಜನವರಿ ತಿಂಗಳಿನಲ್ಲಿ FD ಮೇಲಿನ ಬಡ್ಡಿದರಗಳನ್ನು ಬದಲಾಯಿಸಿದೆ. ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ 7 ದಿನಗಳಿಂದ 10 ವರ್ಷಗಳ ಎಫ್‌ಡಿಯಲ್ಲಿ 3% ರಿಂದ 7% ಬಡ್ಡಿಯನ್ನು ನೀಡುತ್ತಿದೆ. ಹಿರಿಯ ನಾಗರಿಕರಿಗೆ ಗರಿಷ್ಠ ಬಡ್ಡಿ ದರ 7.50%. 500 ದಿನಗಳ ಎಫ್‌ ಡಿಯಲ್ಲಿ ಹೆಚ್ಚಿನ ಬಡ್ಡಿ ಲಭ್ಯವಿದೆ. ಸಾಮಾನ್ಯ ನಾಗರಿಕರಿಗೆ 7.75% ಮತ್ತು ಹಿರಿಯ ನಾಗರಿಕರಿಗೆ 8.25% ದರದಲ್ಲಿ ಲಭ್ಯವಿದೆ.

•IDBI Bank
ಇನ್ನು LIC ಬೆಂಬಲಿತ IDBI ಬ್ಯಾಂಕ್ FD ಯ ಬಡ್ಡಿದರಗಳಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ. ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ ತೆರಿಗೆ ಉಳಿತಾಯ FD ಮೇಲೆ 6.50% ಮತ್ತು ಹಿರಿಯ ನಾಗರಿಕರಿಗೆ 7% ಬಡ್ಡಿಯನ್ನು ನೀಡುತ್ತಿದೆ. 2 ವರ್ಷಕ್ಕಿಂತ ಹೆಚ್ಚು ಮತ್ತು 3 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿ ಲಭ್ಯವಿದೆ. ದರಗಳು ಸಾಮಾನ್ಯ ನಾಗರಿಕರಿಗೆ 7% ಮತ್ತು ಹಿರಿಯ ನಾಗರಿಕರಿಗೆ 7.50% ದರದಲ್ಲಿ ಲಭ್ಯವಿದೆ.

Bank Of Baroda FD Interest Rate
Image Credit: Jagran

•Bank of Baroda
ಸಾರ್ವಜನಿಕ ವಲಯದ Bank of Baroda ಕೂಡ ವಿಶೇಷ ಬಡ್ಡಿದರವನ್ನು ನೀಡುತ್ತಿದೆ. ಈ ಸಾರ್ವಜನಿಕ ವಲಯದ ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ 4.25% ರಿಂದ 6.50% ವರೆಗೆ ಬಡ್ಡಿಯನ್ನು ನೀಡುತ್ತಿದೆ. ಹಿರಿಯ ನಾಗರಿಕರಿಗೆ 4.75% ರಿಂದ 7.35% ವರೆಗೆ ಇರುತ್ತದೆ. ಇನ್ನು 399 ದಿನಗಳ ವಿಶೇಷ ಎಫ್‌ಡಿ ಯೋಜನೆಯಲ್ಲಿ ಸಾಮಾನ್ಯ ನಾಗರಿಕರು 7.15% ಮತ್ತು ಹಿರಿಯ ನಾಗರಿಕರು 7.65% ಬಡ್ಡಿಯನ್ನು ಪಡೆಯುತ್ತಿದ್ದಾರೆ.

Join Nadunudi News WhatsApp Group