WhatsApp Fee: ವಾಟ್ಸಾಪ್ ಬಳಸುವವರಿಗೆ ಹೊಸ ರೂಲ್ಸ್, ಇನ್ಮುಂದೆ ಹಣ ಕಟ್ಟಿದರೆ ಮಾತ್ರ ಮೆಸೇಜ್ ಮಾಡಬಹುದು.

ವಾಟ್ಸಾಪ್ ನಲ್ಲಿ ಮೆಸೇಜ್ ಮಾಡುವವರಿಗೆ ಹೊಸ ನಿಯಮ

Fee For WhatsApp Message: ಸದ್ಯ WhatsApp ಜನಪ್ರಿಯ ಅಪ್ಲಿಕೇಶನ್ ಆಗಿ ಗುರುತಿಸಿಕೊಂಡಿದೆ. ವಾಟ್ಸಾಪ್ ಅನ್ನು ಮಿಲಿಯನ್ ಗಿಂತಲೂ ಹೆಚ್ಚಿನ ಜನರು ಬಳಸುತ್ತಾರೆ. ಇತ್ತೀಚೆಗಂತೂ ವಾಟ್ಸಾಪ್ ತನ್ನ ಬಳಕೆದಾರರಿಗೆ ಹಲವಾರು ಅಪ್ಡೇಟ್ ಅನ್ನು ನೀಡುತ್ತಿದೆ.

ಸಧ್ಯ ವಾಟ್ಸಾಪ್ ಹೊಸ ಹಸ ಫೀಚರ್ ಅನ್ನು ನೀಡುವ ಜೊತೆಗೆ ತನ್ನ ಬಳಕೆದಾರರಿಗೆ ಬಿಗ್ ಅಪ್ಡೇಟ್ ಅನ್ನು ನೀಡಿದೆ. ಹೌದು, ಈ ಬಾರಿ ವಾಟ್ಸಾಪ್ ಫೀಚರ್ ನ ಹೊರತಾಗಿ ತನ್ನ ಬಳಕೆದಾರರಿಗೆ ಶಾಕ್ ನೀಡಿದೆ ಎನ್ನಬಹುದು. ಇನ್ನುಮುಂದೆ ವಾಟ್ಸಾಪ್ ನಲ್ಲಿ ಮೆಸೇಜ್ ಮಾಡುವವರಿಗೆ ಹೊಸ ನಿಯಮ ಅನ್ವಯವಾಗಲಿದೆ.

WhatsApp New Updates
Image Credit: chatalog

ವಾಟ್ಸಾಪ್ ಬಳಸುವವರೊಗೆ ಹೊಸ ರೂಲ್ಸ್
ನೀವೂ ವಾಟ್ಸಾಪ್ ಬಳಸುತ್ತಿದ್ದರೆ, ಈಗ ನೀವು ಪ್ರತಿ ಸಂದೇಶಕ್ಕೆ ರೂ. 2.30 ಪಾವತಿಸಬೇಕಾಗುತ್ತದೆ ಎಂದು ವಾಟ್ಸಾಪ್ ಮಾಲೀಕರು ಘೋಷಿಸಿದ್ದಾರೆ, ಇದಾದ ನಂತರ WhatsApp 20% ಕ್ಕಿಂತ ಹೆಚ್ಚು ಲಾಭವನ್ನು ಪಡೆಯುತ್ತದೆ. ಈಗ ವಾಟ್ಸಾಪ್‌ನ ಹೊಸ ಅಂತರಾಷ್ಟ್ರೀಯ ಸಂದೇಶ ವರ್ಗದ ಅಡಿಯಲ್ಲಿ ಯಾರು ಸಂದೇಶವನ್ನು ಕಳುಹಿಸುತ್ತಾರೋ ಅವರು ಜೂನ್ 30 ರಿಂದ ರೂ 2.30 ಪಾವತಿಸಬೇಕಾಗುತ್ತದೆ. ಈ ನಿಯಮ ಜೂನ್ 30 ರಿಂದ ಜಾರಿಗೆ ಬರಲಿದೆ. ಇದರ ಪ್ರಭಾವವು ಭಾರತ ಮತ್ತು ಇಂಡೋನೇಷ್ಯಾ ಎರಡರ ವ್ಯಾಪಾರದ ಮೇಲೆ ಬೀರಲಿದೆ. ಸದ್ಯ ಈ ಸುದ್ದಿಗೆ ವಾಟ್ಸಾಪ್ ಇನ್ನೂ ಕೂಡ ಸ್ಪಷ್ಟನೆ ನೀಡಿಲ್ಲ.

ಇನ್ಮುಂದೆ ಹಣ ಕಟ್ಟಿದರೆ ಮಾತ್ರ ಮೆಸೇಜ್ ಮಾಡಬಹುದು
ವಾಟ್ಸಾಪ್‌ನ ಹೊಸ ನಿರ್ಧಾರವು ಅಮೆಜಾನ್, ಗೂಗಲ್ ಮತ್ತು ಮೈಕ್ರೋಸಾಫ್ಟ್‌ ನಂತಹ ಅಂತರರಾಷ್ಟ್ರೀಯ ಕಂಪನಿಗಳ ಸಂವಹನ ಬಜೆಟ್ ಅನ್ನು ಹೆಚ್ಚಿಸಲಿದೆ. ವಾಸ್ತವವಾಗಿ, ವಾಟ್ಸಾಪ್ ಮೂಲಕ ಪರಿಶೀಲನೆಯು ಸಾಮಾನ್ಯ ಅಂತಾರಾಷ್ಟ್ರೀಯ ಪರಿಶೀಲನೆ OTP ಗಿಂತ ಅಗ್ಗವಾಗಿದೆ. ಮೆಟಾ ಮತ್ತು ವಾಟ್ಸಾಪ್ ಅಂತರಾಷ್ಟ್ರೀಯ ಒನ್ ಟೈಮ್ ಪಾಸ್‌ವರ್ಡ್ (OTP) ಹೊಸ ವರ್ಗವನ್ನು ಪ್ರಾರಂಭಿಸಿವೆ. ಇದು ಭಾರತದಲ್ಲಿ ವ್ಯಾಪಾರ ಸಂದೇಶಗಳನ್ನು ಕಳುಹಿಸುವ ವೆಚ್ಚವನ್ನು ಹೆಚ್ಚಿಸುತ್ತದೆ.

WhatsApp Latest News
Image Credit: Original Source

WhatsApp ನ ಈ ಹಂತವು ಕಂಪನಿಯ ಗಳಿಕೆಯನ್ನು ಹೆಚ್ಚಿಸುತ್ತದೆ. ವರದಿಯ ಪ್ರಕಾರ, ಅಂತರಾಷ್ಟ್ರೀಯ ಸಂದೇಶದ (WhatsApp International Message) ಬೆಲೆಯನ್ನು ಮೊದಲಿಗಿಂತ ಸುಮಾರು 20 ಪಟ್ಟು ಹೆಚ್ಚಿಸಲಾಗಿದೆ. ಆದಾಗ್ಯೂ, ಸಾಮಾನ್ಯ ಬಳಕೆದಾರರು ಮೊದಲಿನಂತೆ ಉಚಿತವಾಗಿ WhatsApp ಅನ್ನು ಬಳಸಲು ಸಾಧ್ಯವಾಗುತ್ತದೆ. WhatsApp ನ ಈ ಹೊಸ ನಿರ್ಧಾರವು ವ್ಯವಹಾರದ SMS ಮೇಲೆ ಪರಿಣಾಮ ಬೀರುತ್ತದೆ.

Join Nadunudi News WhatsApp Group

ಇಲ್ಲಿಯವರೆಗೆ ಟೆಲಿಕಾಂ ಕಂಪನಿಯು ಸ್ಥಳೀಯ SMS ಕಳುಹಿಸಲು ಪ್ರತಿ SMS ಗೆ 0.12 ಪೈಸೆ ವಿಧಿಸುತ್ತಿತ್ತು. ಇದಾದ ನಂತರ ಅಂತಾರಾಷ್ಟ್ರೀಯ ಬೆಲೆ ಪ್ರತಿ SMS ಗೆ 4.13 ರೂ. ಆದರೆ ವಾಟ್ಸಾಪ್ ಅಂತಾರಾಷ್ಟ್ರೀಯ ಎಸ್‌ಎಂಎಸ್‌ ಗೆ ಪ್ರತಿ ಎಸ್‌ಎಂಎಸ್‌ಗೆ 0.11 ಪೈಸೆ ವಿಧಿಸುತ್ತಿತ್ತು. ಆದರೆ ಈಗ ಪ್ರತಿ ಎಸ್ ಎಂಎಸ್ ಗೆ 2.3 ರೂ.ಗೆ ಹೆಚ್ಚಿಸಲಾಗಿದೆ.ವ್ಯಾಪಾರ ಮಾಡುವವರಿಗಾಗಿಯೇ ಈ ಬದಲಾವಣೆ ಮಾಡಲಾಗುತ್ತಿದ್ದು, ಜನಸಾಮಾನ್ಯರಿಗೆ ಯಾವುದೇ ತೊಂದರೆ ಇಲ್ಲ ಎನ್ನಬಹುದು.

Fee For WhatsApp Message
Image Credit: Digitaltrends

Join Nadunudi News WhatsApp Group