Fever App: ಮೊಬೈಲ್ ನಲ್ಲಿ ಬಂದಿದೆ ಜ್ವರದ ಆಪ್, ಇನ್ನುಮುಂದೆ ಜ್ವರ ಬಂದರೆ ಭಯಪಡುವ ಅಗತ್ಯ ಇಲ್ಲ.

ಥರ್ಮೋಮೀಟರ್ ಬಳಸದೆ ಜ್ವರ ಪರೀಕ್ಷಿಸಲು ಸ್ಮಾರ್ಟ್ ಫೋನ್ ನಲ್ಲಿ ಹೊಸ ಅಪ್.

Fever Application In Mobile: ಇತ್ತೀಚಿನ ಯುಗವನ್ನು ಸ್ಮಾರ್ಟ್ ಫೋನ್ ಯುಗವೆಂದೇ ಕರೆಯುತ್ತಾರೆ. ಸ್ಮಾರ್ಟ್ ಫೋನ್ ನಲ್ಲಿ ಹೆಚ್ಚಾಗಿ ಎಲ್ಲ ಕೆಲಸವನ್ನು ಮಾಡಬಹುದಾಗಿದೆ. ಶಿಕ್ಷಣ, ಬ್ಯಾಂಕಿಂಗ್, ಟ್ರಾಕಿಂಗ್, ವೈದ್ಯಕೀಯ, ಶಾಪಿಂಗ್ ಅನ್ನು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಸುಲಭವಾಗಿಯೇ ಮಾಡಬಹುದು.

ಸ್ಮಾರ್ಟ್ ಫೋನ್ ನಲ್ಲಿ ಹಲವು ಆಪ್ ಗಳ ಮೂಲಕ ತಮಗೆ ಬೇಕಾದ ಸಾಕಷ್ಟು ವಿಚಾರಗಳನ್ನು ತಿಳಿದುಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ಜನರು ತಮಗೆ ಬೇಕಾದ ಮಾಹಿತಿಯನ್ನು ಮೊಬೈಲ್ ಫೋನ್ ನಿಂದಲೇ ತಿಳಿದುಕೊಳ್ಳುತ್ತಾರೆ. ಮೊಬೈಲ್ ಫೋನ್ ನಿಂದ ನಮಗೆ ಮಾಹಿತಿಯನ್ನು ತಿಳಿದುಕೊಳ್ಳುವುದು ಉತ್ತಮವಾಗಿದೆ.

A new app to check fever on smart phone
Image Credit: Postsen

ಸ್ಮಾರ್ಟ್ ಫೋನ್ ನಲ್ಲಿ ಜ್ವರವನ್ನು ಪರೀಕ್ಷಿಸಿಸಲು ಹೊಸ ಅಪ್ಲಿಕೇಶನ್
ಇನ್ನು ನಿಮಗೆ ಜ್ವರ ಬಂದರೆ ನೀವು ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯುವುದು ಅನಿವಾರ್ಯವಾಗಿದೆ. ಜ್ವರ ಬಂದರೆ ಅದನ್ನು ಕಂಡು ಹಿಡಿಯಲು ಅದಕ್ಕೆ ಥರ್ಮೋಮೀಟರ್ ಸಹ ಇದೆ. ಇದೀಗ ಸ್ಮಾರ್ಟ್ ಫೋನ್ ಮೂಲಕ ಜ್ವರ ಅನ್ನು ಕಂಡುಹಿಡಿಯಬಹುದು. ಇದಕ್ಕಾಗಿಯೇ ಸ್ಮಾರ್ಟ್ ಫೋನ್ ನಲ್ಲಿ ಒಂದು ಆಪ್ ಬಿಡುಗಡೆಯಾಗಿದೆ.

ಫೀವರ್ ಅಪ್ಲಿಕೇಶನ್
ವಾಷಿಂಗ್ಟನ್ ವಿಶ್ವವಿದ್ಯಾಲಯದ ಸಂಶೋಧಕರು ಜ್ವರ ಬಂದರೆ ತಿಳಿದುಕೊಳ್ಳಲು ಫೀವರ್ ಆಪ್ ಅನ್ನು ಪರಿಚಯಿಸಿದ್ದಾರೆ. ಇದರ ಮೂಲಕ ದೇಹದ ಉಷ್ಣತೆಯನ್ನು ಅಳೆಯಬಹುದಾಗಿದೆ. ಈ ಅಪ್ ನಿಮ್ಮ ಫೋನ್ ನಲ್ಲಿ ಥರ್ಮೋಮೀಟರ್ ಆಗಿ ಕಾರ್ಯನಿರ್ವಹಿಸುತ್ತದೆ.

A new app to check fever on smart phone
Image Credit: Raisingchildren

ಇನ್ನು ಈ ಅಪ್ಲಿಕೇಶನ್ ಅನ್ನು 37 ರೋಗಿಗಳ ಮೇಲೆ ಪರೀಕ್ಷಿಸಲಾಗಿದೆ. ಇದು ನಿಜವಾದ ಫಲಿತಾಂಶವನ್ನು ನೀಡಿದೆ ಎನ್ನಲಾಗುತ್ತಿದೆ. ಸ್ಮಾರ್ಟ್ ಫೋನ್ ನಲ್ಲಿ ಇಂತಹದೊಂದು ಅಪ್ಲಿಕೇಶನ್ ಬಿಡುಗಡೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಇನ್ನುಮುಂದೆ ಜ್ವರ ಬಂದರೆ ಥರ್ಮೋಮೀಟರ್ ಬಳಸದೆ ನಿಮ್ಮ ಮೊಬೈಲ್ ನಲ್ಲಿ ಫೀವರ್ ಆಪ್ ಮೂಲಕ ಪರೀಕ್ಷಿಸಿಕೊಳ್ಳಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group