Financial Planning: 20 ವರ್ಷಗಳಲ್ಲಿ 10 ಕೋಟಿ ಗಳಿಸುವುದು ಹೇಗೆ…? ಇಲ್ಲಿದೆ ಹೂಡಿಕೆಯ ವಿಧಾನ.

ಉತ್ತಮ ಭವಿಷ್ಯಕ್ಕಾಗಿ ಈ ರೀತಿಯಲ್ಲಿ ಇಂದೇ ಹೂಡಿಕೆ ಆರಂಭಿಸಿ.

Financial Planning Tip: ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ಭವಿಷ್ಯದಲ್ಲಿ ಆರ್ಥಿಕವಾಗಿ ಉತ್ತಮ ಸ್ಥಿರತೆ ಕಾಣಲು ಸಹಾಯವಾಗುತ್ತದೆ. ದೇಶದಲ್ಲಿ ಸಾಕಷ್ಟು ರೀತಿಯ ಹೂಡಿಕೆಯ ಯೋಜನೆಗಳಿವೆ. ಇನ್ನು ಕೇಂದ್ರ ಸರ್ಕಾರ ಜನತೆಗಾಗಿ ವಿವಿಧ ಯೋಜನೆಯನ್ನು ಪರಿಚಯಿಸುತ್ತಲೇ ಇರುತ್ತದೆ.

ಈಗಾಗಲೇ ಕೋಟ್ಯಂತರ ಜನರು ಕೇಂದ್ರ ಸರ್ಕಾರದ (Central Government) ಯೋಜನೆಗಳಲ್ಲಿ ಹೂಡಿಕೆಯನ್ನು ಆರಂಭಿಸಿದ್ದಾರೆ. ಮ್ಯೂಚುಯಲ್ ಫಂಡ್‌ ಗಳು, ಸ್ಟಾಕ್‌ ಗಳು, ಬಾಂಡ್‌ ಗಳು ಮತ್ತು ಸ್ಥಿರ ಠೇವಣಿಗಳಂತಹ ಆಯ್ಕೆಗಳಲ್ಲಿ ಹೂಡಿಕೆಗಳನ್ನು ಪ್ರಾರಂಭಿಸಿದರೆ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ.

systematic investment plan
Image Credit: Jama

Systematic Investment Plan(SIP)
ಮಕ್ಕಳ ವಿದ್ಯಾಭ್ಯಾಸದಿಂದ ಹಿಡಿದು ಮಕ್ಕಳ ಮದುವೆಗೆ ನೀವು ಉಳಿತಾಯ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡಬಹುದು. ಅನೇಕ ಉಳಿತಾಯ ಯೋಜನೆಗಳಲ್ಲಿ SIP ನಲ್ಲಿನ ಹೂಡಿಕೆಯು ಒಂದು ರೀತಿಯಲ್ಲಿ ಲಾಭವನ್ನು ನೀಡುತ್ತದೆ. ನಿಮ್ಮ ಮನೆಯ ಮಗುವಿನ ಹೆಸರಿನಲ್ಲಿ ಹೂಡಿಕೆಯನ್ನು ಆರಂಭಿಸಿದರೆ ಮಕ್ಕಳು ಬೆಳೆದು ದೊಡ್ಡವರಾದ ಬಳಿಕ ದೊಡ್ಡ ಲಾಭವನ್ನು ಪಡೆಯಬಹುದು.

ಕಡಿಮೆ ಹೂಡಿಕೆಯೊಂದಿದೆ ನಿಮ್ಮ ಮಗುವಿನ ಭವಿಷ್ಯಕ್ಕಾಗಿ ಹೂಡಿಕೆಯನ್ನು ಮಾಡಬಹುದು. ನಿಮ್ಮ ಮಗುವಿನ ಹೆಸರಿನಲ್ಲಿ ಒಂದಿಷ್ಟು ಹಣವನ್ನು SIP ಅನ್ನು ಪ್ರಾರಂಭಿಸಿ ಮತ್ತು 20 ವರ್ಷಗಳವರೆಗೆ ನಿರಂತರವಾಗಿ ಹೂಡಿಕೆ ಮಾಡುತಿದ್ದರೆ ಹೆಚ್ಚಿನ ಲಾಭವನ್ನು ಪಡೆಯಬಹುದು. ಸಾರ್ವಜನಿಕ ಭವಿಷ್ಯ ನಿಧಿ (PPF), ಉದ್ಯೋಗಿ ಭವಿಷ್ಯ ನಿಧಿ (EPF), ಮತ್ತು ಈಕ್ವಿಟಿ-ಲಿಂಕ್ಡ್ ಸೇವಿಂಗ್ಸ್ ಸ್ಕೀಮ್ (ELSS) ನಂತಹ ತೆರಿಗೆ ಉಳಿತಾಯ ಹೂಡಿಕೆಯ ಆಯ್ಕೆಗಳಲ್ಲಿ ಹೆಚ್ಚಿನ ಲಾಭವನ್ನುಪಡೆಯಬಹುದು.

systematic investment plan benefits
Image Credit: News18

20 ವರ್ಷಗಳಲ್ಲಿ 10 ಕೋಟಿ ಗಳಿಸುವುದು ಹೇಗೆ..?
ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವುದು ಒಂದು ರೀತಿಯ ಉತ್ತಮ ಆಯ್ಕೆಯಾಗಿದೆ. ನೀವು ವಾಣಿಜ್ಯ ಕಲ್ಪನೆಯನ್ನು ಹೊಂದಿದ್ದರೆ ಅಥವಾ ಉದ್ಯಮಶೀಲತೆಯಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ಹೊಂದಿದ್ದರೆ ಇದು ಗಣನೀಯ ಸಂಪತ್ತಿನ ಮಾರ್ಗವಾಗಿದೆ. ಕಾಲಕಾಲಕ್ಕೆ ನಿಮ್ಮ ಹೂಡಿಕೆಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಿ ಮತ್ತು ಅಗತ್ಯವಿದ್ದರೆ ಅದನ್ನು ಸರಿಹೊಂದಿಸಿ.

Join Nadunudi News WhatsApp Group

ನಿಮ್ಮ ನಿರ್ದಿಷ್ಟ ಅಗತ್ಯಗಳಿಗೆ ಅನುಗುಣವಾಗಿ ಹಣಕಾಸು ಯೋಜನೆಯನ್ನು ಸಿದ್ಧಪಡಿಸಿಕೊಳ್ಳಿ. 20 ವರ್ಷಗಳಲ್ಲಿ 10 ಕೋಟಿ ರೂ.ಗಳ ಆರ್ಥಿಕ ಗುರಿಯನ್ನು ಸಾಧಿಸಲು ಶಿಸ್ತು ಮತ್ತು ಬದ್ಧತೆಯ ಅಗತ್ಯವಿದೆ. 20 ವರ್ಷಗಳಲ್ಲಿ 10 ಕೋಟಿ ಹಣವನ್ನು ಸಂಗ್ರಿಹಿಸಲು ಮುಖ್ಯವಾಗಿ ಹಣದ ಉಳಿತಾಯ ಅಗತ್ಯವಿದೆ. ಸ್ಮಾರ್ಟ್ ಹೂಡಿಕೆ, ವೈವಿಧ್ಯೀಕರಣ ಮತ್ತು ಶಿಸ್ತಿನ ಸಂಯೋಜನೆಯ ಮೂಲಕ ಇದನ್ನು ಸಾಧಿಸಬಹುದು. ಆದಷ್ಟು ಬೇಗ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಪ್ರಾರಂಭಿಸಿದೆ ಹೆಚ್ಚು ಲಾಭವನ್ನು ಗಳಿಸಬಹುದು.

Join Nadunudi News WhatsApp Group