April Rules: ನಾಳೆಯಿಂದ ಬದಲಾಗಲಿದೆ ಪಾನ್, ಆಧಾರ್ ಮತ್ತು ಏಟಿಎಂ ಕಾರ್ಡ್ ನಿಯಮ, ದುಬಾರಿ ಶುಲ್ಕ ಜಾರಿ

ನಾಳೆಯಿಂದ ಬದಲಾಗಲಿದೆ ಈ ಹಣಕಾಸು ನಿಯಮಗಳು

Financial Year End In India: ಇಂದಿಗೆ 2023 -24 ರ ಹಣಕಾಸು ವರ್ಷ ಪೂರ್ಣಗೊಳ್ಳಲಿದೆ. ನಾಳೆಯಿಂದ ಹೊಸ ಹಣಕಾಸು ವರ್ಷ 2024 -25 ಆರಂಭಗೊಳ್ಳಲಿದೆ. ಇನ್ನು ಹಣಕಾಸಿಗೆ ಸಂಬಂಧಿಸಿದ ಕೆಲಸವನ್ನು ಪೂರ್ಣಗೊಳಿಸಲು ಇಂದು ಕೊನೆಯ ದಿನ ಆಗಿದೆ. ಏಕೆಂದರೆ April 1 ರಿಂದ ಹೊಸ ಹಣಕಾಸು ನಿಯಮಗಳು ಜಾರಿಯಾಗುತ್ತದೆ. ಹಾಗಾದರೆ ನಾವೀಗ ನಾಳೆಯಿಂದ ಬದಲಾಗಲಿರುವ ಈ ನಿಯಮಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

Pan card And Aadhar Card Link
Image Credit: India Filings

ನಾಳೆಯಿಂದ ಬದಲಾಗಲಿದೆ ಈ ಹಣಕಾಸು ನಿಯಮಗಳು
•Pan card And Aadhar Card Link
ಪ್ಯಾನ್ ಅನ್ನು ಆಧಾರ್‌ ನೊಂದಿಗೆ ಲಿಂಕ್ ಮಾಡಲು ಹಲವಾರು ಗಡುವನ್ನು ವಿಸ್ತರಿಸಲಾಗಿದೆ. ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ ಗೆ ಲಿಂಕ್ ಮಾಡಲು ಕೊನೆಯ ದಿನಾಂಕ 31 ಮಾರ್ಚ್ 2024. ಈ ಮಾರ್ಚ್ ಅಂತ್ಯದೊಳಗೆ ಆಧಾರ್ ನೊಂದಿಗೆ ಪಾನ್ ಅನ್ನು ಲಿಂಕ್  ಮಾಡದಿದ್ದರೆ 1000 ದಂಡವನ್ನು ಪಾವತಿಸಬೇಕಾಗುತ್ತದೆ.

•EPFO Account
ಹೊಸ ಹಣಕಾಸು ವರ್ಷದಲ್ಲಿ EPFO ದಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಉದ್ಯೋಗಿಗಳ ಭವಿಷ್ಯ ನಿಧಿಯು ಏಪ್ರಿಲ್ 1 ರಿಂದ ಹೊಸ ನಿಯಮಗಳನ್ನು ಜಾರಿಗೆ ತರಲಿದೆ. ಹೊಸ ನಿಯಮದ ಪ್ರಕಾರ, ನೀವು ಉದ್ಯೋಗವನ್ನು ಬದಲಾಯಿಸಿದರೆ ನಿಮ್ಮ ಹಳೆಯ ಪಿಎಫ್ ಅನ್ನು ಆಟೋ ಮೋಡ್‌ ಗೆ ವರ್ಗಾಯಿಸಲಾಗುತ್ತದೆ. ಅಂದರೆ, ಉದ್ಯೋಗವನ್ನು ಬದಲಾಯಿಸುವಾಗ ನೀವು ಪಿಎಫ್ ಮೊತ್ತವನ್ನು ವರ್ಗಾಯಿಸಲು ವಿನಂತಿಸುವ ಅಗತ್ಯವಿಲ್ಲ. ಹೊಸ ಆರ್ಥಿಕ ವರ್ಷದಿಂದ ಈ ಅವ್ಯವಸ್ಥೆ ಕೊನೆಗೊಳ್ಳಲಿದೆ.

SBI Credit Card
Image Credit: Cardinfo

•SBI Credit Card
ಇನ್ನು SBI ಕ್ರೆಡಿಟ್ ಕಾರ್ಡ್ ಬಳಕೆದಾರರಾಲಿಗೂ ಕೂಡ ಹೊಸ ನಿಯಮ ಜಾರಿಯಾಗಲಿದೆ. ಏಪ್ರಿಲ್ 1, 2024 ರಿಂದ, SBI ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಹಲವಾರು ಪ್ರಮುಖ ಬದಲಾವಣೆಗಳನ್ನು ಮಾಡುತ್ತಿದೆ. ಏಪ್ರಿಲ್ 1 ರಿಂದ ನೀವು ಬಾಡಿಗೆಯನ್ನು ಪಾವತಿಸಿದರೆ ನಿಮಗೆ ಯಾವುದೇ ರಿವಾರ್ಡ್ ಪಾಯಿಂಟ್‌ ಗಳನ್ನು ನೀಡಲಾಗುವುದಿಲ್ಲ. ಈ ನಿಯಮವು ಕೆಲವು ಕ್ರೆಡಿಟ್ ಕಾರ್ಡ್‌ ಗಳಿಗೆ ಏಪ್ರಿಲ್ 1 ರಿಂದ ಅನ್ವಯಿಸುತ್ತದೆ ಮತ್ತು ಕೆಲವು ಕ್ರೆಡಿಟ್ ಕಾರ್ಡ್‌ ಗಳಿಗೆ ಈ ನಿಯಮವು ಏಪ್ರಿಲ್ 15 ರಿಂದ ಅನ್ವಯಿಸುತ್ತದೆ.

•FASTag New Rule
ನೀವು ಬ್ಯಾಂಕ್‌ ನಿಂದ ನಿಮ್ಮ ಕಾರಿನ ಫಾಸ್ಟ್‌ ಟ್ಯಾಗ್‌ ನ KYC ಅನ್ನು ನವೀಕರಿಸದಿದ್ದರೆ ಏಪ್ರಿಲ್ 1 ರಿಂದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ FASTag ನ KYC ಅನ್ನು ಮಾಡಲು ಇಂದು ಕೊನೆಯ ದಿನ. ಏಕೆಂದರೆ ನಾಳೆಯಿಂದ ಬ್ಯಾಂಕ್ FASTag ಅನ್ನು ನಿಷ್ಕ್ರಿಯಗೊಳಿಸುತ್ತದೆ ಅಥವಾ ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ. ಇದಾದ ನಂತರ ಫಾಸ್ಟ್ಯಾಗ್ ನಲ್ಲಿ ಬ್ಯಾಲೆನ್ಸ್ ಇದ್ದರೂ ಹಣ ಪಾವತಿಯಾಗುವುದಿಲ್ಲ.

Join Nadunudi News WhatsApp Group

FASTag New Rule 2024
Image Credit: Rewariyasat

Join Nadunudi News WhatsApp Group