Firefox Avalon: ಬೈಸಿಕಲ್ ಖರೀದಿಸಿದರೆ ಸ್ಮಾರ್ಟ್ ವಾಚ್ ಉಚಿತ, ಬಂಪರ್ ಆಫರ್ ಘೋಷಣೆ ಮಾಡಿದ ಬೈಸಿಕಲ್ ಕಂಪನಿ.

14 ಸಾವಿರ ಬೆಲೆಯ ಸೈಕಲ್ ಖರೀದಿ ಮಾಡಿದರೆ ಈಗ ಒಂದು ಸ್ಮಾರ್ಟ್ ವಾಚ್ ಉಚಿತವಾಗಿ ಪಡೆದುಕೊಳ್ಳಬಹುದು.

Firefox Avalon Cycle Price: ಇದೀಗ ಬೈಸಿಕಲ್ ಖರೀದಿ ಮಾಡುವವರಿಗೆ ಬಂಪರ್ ಸುದ್ದಿ ಒಂದು ಹೊರ ಬಿದ್ದಿದೆ. ನೀವು ಬೈಸಿಕಲ್ ಖರೀದಿ ಮಾಡುವ ಮೂಲಕ ಹೊಸ ಸ್ಮಾರ್ಟ್ ವಾಚ್ ಅನ್ನು ಫ್ರೀ ಆಗಿ ಪಡೆಯಬಹುದು. ಈ ಬೈಸಿಕಲ್ ಬೆಲೆ ಎಷ್ಟು ಅನ್ನುವುದರ ಬಗ್ಗೆ ಮಾಹಿತಿ ತಿಳಿಯೋಣ.

Firefox Avalon ಬೈಸಿಕಲ್
ಪ್ರೀಮಿಯಂ, ಸ್ಮಾರ್ಟ್ ಹಾಗು ಉತ್ತಮ ಗುಣಮಟ್ಟದ ಬೈಸಿಕಲ್ ತಯಾರಿಕೆಗೆ ಜನಪ್ರಿಯವಾಗಿರುವ ಪ್ರಸಿದ್ಧ ಬೈಸಿಕಲ್ ಕಂಪನಿಯಾದ ಫೇರ್ ಫಾಕ್ಸ್ ಭಾರತದಲ್ಲಿ ಹೊಸ ಬೈಸಿಕಲನ್ನು ಬಿಡುಗಡೆ ಮಾಡಿದ್ದಾರೆ. ಈ ಕೈಗೆಟಕುವ ಹೊಸ ಬೈಸಿಕಲ್ ನತ್ತ ಗ್ರಾಹಕರನ್ನು ಸೆಳೆಯುವ ಸಲುವಾಗಿ ಕಂಪನಿಯು ಉಚಿತ ಸ್ಮಾರ್ಟ್ ವಾಚ್ ಅನ್ನು ನೀಡುವುದಾಗಿ ಘೋಷಿಸಿದೆ.

If you buy a cycle worth 14 thousand, you can now get a smart watch for free.
Image Credit: firefoxbikes

ಅಡ್ವೆಂಚರ್ ಉತ್ಸಾಹಿಗಳಿಗಾಗಿ ಟ್ರೆಮೊರ್ ಎಕ್ಸ್ ಸೀರಿಸ್ ಮತ್ತು ಮಹಿಳೆಯರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಅವಲೋನ್ ಎಂಬ ಮಾದರಿಯನ್ನು ಕಂಪನಿ ಪರಿಚಯಿಸಿದೆ. ಈ ಸರಣಿಯಲ್ಲಿ ಕಂಪನಿಯು ಹಲವಾರು ರೂಪಾಂತರಗಳನ್ನು ಈಗಾಗಲೇ ಮಾರಾಟ ಮಾಡುತ್ತಿದೆ. ಇದರೊಂದಿಗೆ ಅವಲಾನ್ ಹಾಗೂ ಟ್ರೆಮೊರ್ ಎಕ್ಸ್ ಮಾದರಿಯ ಬೈಸಿಕಲ್‌ಗಳನ್ನು ಈಗ ಬಿಡುಗಡೆ ಮಾಡಿದೆ.

Firefox Avalon ಬೈಸಿಕಲ್ ನ ಬೆಲೆ
Firefox Avalon ಮಹಿಳೆಯರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಬೈಸಿಕಲ್ ಆಗಿದ್ದು, ಇದರ ಬೆಲೆ ರೂಪಾಯಿ 14,000 ಆಗಿದೆ. ಈ ಬೈಸಿಕಲ್ ಖರೀದಿಸಿದರೆ 4,999 ರೂಪಾಯಿ ಮೌಲ್ಯದ ನಾಯ್ಸ್ ಬ್ರಾಂಡ್ ಬೀಟ್ ಸ್ಮಾರ್ಟ್ ವಾಚ್ ಅನ್ನು ಉಚಿವಾಗಿ ಪಡೆಯಬಹುದು. Firefox Avalon ಖರೀದಿಸುವ ಪ್ರತಿಯೊಬ್ಬರಿಗೂ ಈ ಸ್ಮಾರ್ ವಾಚ್ ಅನ್ನು ಉಚಿತವಾಗಿ ನೀಡಲು ಕಂಪನಿ ನಿರ್ಧರಿಸಿದೆ.

Buy a Firefox Avalon cycle and get a free smartwatch
Image Credit: gadgets360

Firefox Avalon ಬೈಸಿಕಲ್ ನ ವಿಶೇಷತೆ
Firefox Avalon ಬೈಸಿಕಲ್ ವಿವಿಧ ಸೌಲಭ್ಯಗಳನ್ನು ಒದಗಿಸುತ್ತದೆ. ನಗರ ಪ್ರದೇಶದ ಮಹಿಳೆಯರಿಗೆ ಈ ಸೈಕಲ್ ತುಂಬಾ ಸಹಕಾರಿಯಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದು ಕಡಿಮೆ ತೂಕದಲ್ಲಿ ಬರುವುದರಿಂದ ಆರಾಮದಾಯಕವಾಗಿ ಸವಾರಿ ಮಾಡಬಹುದು. ಇದರೊಂದಿಗೆ ಶಿಮಾನೋ ಶಿಫ್ಟರ್ ಗಳು ಮ್ಯಾಟ್ 700 ಸಿ ಟೈರ್ ಗಳು ಅತ್ತ್ಯುತ್ತಮ ಗ್ರಿಪ್ ನೀಡುತ್ತವೆ.

Join Nadunudi News WhatsApp Group

ಅದೇ ರೀತಿ ಫೈರ್‌ಫಾಕ್ಸ್ ಟ್ರೆಮೊರ್ ಎಕ್ಸ್ ಎರಡು ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಇದು ಸಿಂಗಲ್ ಸ್ಪೀಡ್ ವೇರಿಯಂಟ್ ಮತ್ತು 21S ಶಿಮಾನೋ ಡ್ರೈವ್ ಟ್ರೈನ್ ಎರಡರಲ್ಲೂ ಲಭ್ಯವಿರುತ್ತದೆ. ಟ್ರೆಮೊರ್ ಎಕ್ಸ್ 24 ಇಂಚು, 26 ಇಂಚು, 27.5 ಇಂಚು ಮತ್ತು 29 ಇಂಚುಗಳ ಚಕ್ರಗಳಲ್ಲಿ ಲಭ್ಯವಿದೆ.

Join Nadunudi News WhatsApp Group