Fish Price: ಮೀನು ಪ್ರಿಯರಿಗೆ ಶಾಕಿಂಗ್ ಸುದ್ದಿ,ಹೊಸ ವರ್ಷದಲ್ಲಿ ಮೀನುಗಳ ಬೆಲೆಯಲ್ಲಿ ಇಷ್ಟು ಹೆಚ್ಚಳ

2024 ರ ವೇಳೆಗೆ ಸ್ಥಳೀಯ ಮೀನುಗಳ ಬೆಲೆಯಲ್ಲಿ ಬಾರಿ ಏರಿಕೆ ಕಂಡುಬರಲಿದೆ

Fish Price Hike From January 2024: ಸದ್ಯ ರಾಜ್ಯದಲ್ಲಿ ಹಣದುಬ್ಬರತೆಯ ಪರಿಸ್ಥಿತಿ ಎದುರಾಗಿದೆ. ಎಲ್ಲ ರೀತಿಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ಜನರು ಆಹಾರ ಪದಾರ್ಥಗಳಿನಿಂದ ಹಿಡಿದು ಯಾವುದೇ ಅಗತ್ಯ ವಸ್ತುವನ್ನು ಖರೀದಿಸಬೇಕಿದ್ದರು ದುಪ್ಪಟ್ಟು ಹಣವನ್ನು ನೀಡುವಂತಹ ಪರಿಸ್ಥಿತಿ ಎದುರಾಗಿದೆ.

ಸದ್ಯ ರಾಜ್ಯದಲ್ಲಿ ಈ ಬಾರಿ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಾರಿ ಮಳೆಯ ಕೊರತೆಯಿಂದಾಗಿ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಮಳೆ ಇಲ್ಲದೆ ರೈತರು ತಮ್ಮ ಬೆಳೆಯನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಬಾರಿಯ ಬರಗಾಲ ರೈತರಿಗೆ ಮಾತ್ರವಲ್ಲದೆ ಸ್ಥಳೀಯ ಮೀನುಗಾರರ ಮೇಲು ಪರಿಣಾಮ ಬಿದ್ದಿದೆ. ಜನವರಿ ವೇಳೆಯಲ್ಲಿ ಸ್ಥಳೀಯ ಮೀನುಗಳ ಬೆಲೆ ಬಾರಿ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.

Fish Price Hike From January 2024
Image Credit: The Times Of India

ಮೀನು ಪ್ರಿಯರಿಗೆ ಶಾಕಿಂಗ್
ಸಾಮಾನ್ಯವಾಗಿ ಮಾಂಸಗಳ ಪೈಕಿ ಹೆಚ್ಚಾಗಿ ಮೀನನ್ನು ತಿನ್ನಲು ಹೆಚ್ಚಿನ ಜನರು ಇಷ್ಟಪಡುತ್ತಾರೆ. ಮೀನುಗಳಲ್ಲಿ ವಿವಿಧ ರೀತಿಯ ಮಿನುಗಳಿದ್ದು, ಒಂದೊಂದು ವಿಧದ ಮೀನುಗಳ ಕೂಡ ಒಂದು ರೀತಿಯ ರುಚಿಯನ್ನು ನೀಡುತ್ತದೆ. ಮೀನಿನ ರುಚಿಗೆ ಎಲ್ಲರು ಕೂಡ ಮರಳಾಗುತ್ತಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಸಮುದ್ರ ಮೀನುಗಳ ಬೆಲೆ ದುಬಾರಿಯಾಗಿದೆ. ಈ ಕಾರಣಕ್ಕೆ ಸ್ಥಳೀಯ ಮೀನುಗಳ ಮೇಲಿನ ಬೇಡಿಕೆ ಹೆಚ್ಚಿದೆ. ಆದರೆ ಈ ಬಾರಿಯ ಮಳೆಯ ಕೊರತೆ ಸ್ಥಳೀಯ ಮೀನುಗಳ ಬೆಲೆಯ ಏರಿಕೆಗೆ ಕಾರಣವಾಗಿದೆ. ಈ ಮೂಲಕ ಮೀನು ಪ್ರಿಯರಿಗೊಂದು ಶಾಕಿಂಗ್ ಸಮಾಚಾರ ಹೊರಬಿದ್ದಿದೆ.

Fish Price Hike
Image Credit: Original Source

ಸ್ಥಳೀಯ ಮೀನುಗಳ ಬೆಲೆಯಲ್ಲಿ ದಿಢೀರ್ ಏರಿಕೆ
ಮಳೆಯ ಕೊರತೆಯಿಂದಾಗಿ ಜಲಾಶಯಗಳು ಮಾತ್ರವಲ್ಲದೆ ಹಳ್ಳ ಕೊಳ್ಳಗಳು, ಕೆರೆ ಕಟ್ಟೆಗಳು ಎಲ್ಲವು ಬರಿದಾಗಿವೆ. ಈ ಹಿನ್ನಲೆ ಸ್ಥಳೀಯ ಮೀನುಗಳ ಉತ್ಪಾದನೆಯಲ್ಲಿ ಬಾರಿ ಇಳಿಕೆಯಾಗಿದೆ. ಸ್ಥಳೀಯ ಮೀನುಗಳ ಉತ್ಪಾದನಾ ಪ್ರಮಾಣ ಇಳಿಕೆಯಾದ ಕಾರಣ ಜನವರಿಯಲ್ಲಿ ಸ್ಥಳೀಯ ಮೀನುಗಳ ಬೆಲೆ ಬಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಮೂಲಗಳ ಪ್ರಕಾರ, ಶೇ. 50 ರಷ್ಟು ಮೀನಿನ ಉತ್ಪಾದನೆ ಕಡಿಮೆಯಾಗಿದ್ದು, ಈಗಾಗಲೇ 40 ರಷ್ಟು ಏರಿಕೆ ಕಂಡಿದೆ.

ಈ ವರ್ಷಾಂತ್ಯದಲ್ಲಿ ಇನ್ನಷ್ಟು ಬಿಸಿಲು ಇರುವ ಕಾರಣ ಬಹುತೇಕ ಎಲ್ಲ ನೀರಿನ ಜಲಾಶಯ ಬತ್ತಿಹೋಗಲಿದೆ. ಈ ಕಾರಣಕ್ಕೆ ಸ್ಥಳೀಯ ಮೀನುಗಳ ಬೆಲೆ ಸಹಜವಾಗಿಯೇ ಏರಿಕೆ ಕಾಣಲಿದೆ. ಮಾರುಕಟ್ಟೆ ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಜನವರಿ 2024 ರಿಂದ ಮೀನುಗಳ ಬೆಲೆಯಲ್ಲಿ ಸುಮಾರು 30 ಶೇಕಡಾ ಏರಿಕೆ ಆಗುವ ಸಾಧ್ಯತೆ ಇದೆ ಎಂದು ಅಂದಾಜು ಮಾಡಲಾಗಿದೆ.

Join Nadunudi News WhatsApp Group

Join Nadunudi News WhatsApp Group