Tax 2023: ಈ ಐದು ಆದಾಯ ತೋರಿಸದೆ ಇದ್ದರೆ ನಿಮ್ಮ ಮೇಲೆ ಬೀಳಲಿದೆ ಕೇಸ್, ತೆರಿಗೆ ಇಲಾಖೆಯ ಆದೇಶ.

ನಿಮ್ಮಲಿರುವ ಈ ಐದು ಆದಾಯಗಳ ತೆರಿಗೆಯನ್ನು ಪಾವತಿಸದಿದ್ದರೆ ದಂಡ ಖಚಿತ.

Five Reason For Tax Notice: ಆದಾಯ ಇಲಾಖೆಯು ಇತ್ತೀಚಿಗೆ ಹೊಸ ಹೊಸ ಅಪ್ಡೇಟ್ ಅನ್ನು ನೀಡುತ್ತಿದೆ. ತೆರಿಗೆ ಪಾವತಿದಾರರಿಗೆ ಈ ತಿಂಗಳು ಬಾರಿ ನಷ್ಟ ಎದುರಾಗುವ ಸಾಧ್ಯತೆ ಇರುತ್ತದೆ. ಆದಾಯ ರಿಟರ್ನ್ ಪಾವತಿಗೆ (Income Tax Return) ಜುಲೈ 31 ಕೊನೆಯ ದಿನಾಂಕ ನಿಗದಿಯಾಗಿದ್ದು, ಇನ್ನು ಯಾವುದೇ ರೀತಿಯ ಗಡುವು ವಿಸ್ತರಣೆ ಆಗುವುದಿಲ್ಲ ಎಂದು ಹಣಕಾಸು ಇಲಾಖೆ ಸ್ಪಷ್ಟಪಡಿಸಿದೆ.

ಈಗಾಗಲೇ ಕೋಟ್ಯಾಂತರ ಜನರು ಐಟಿಆರ್ ಸಲ್ಲಿಸುತ್ತಿದ್ದಾರೆ. ಇನ್ನು ನಿಗದಿತ ಸಮಯದೊಳಗೆ ಐಟಿಆರ್ ಸಲ್ಲಿಕೆ ಆಗದಿದ್ದರೆ ಬರೋಬ್ಬರಿ 5 ಸಾವಿರ ದಂಡ ಪಾವತಿಸಬೇಕಾಗುತ್ತದೆ.

Five Reason For Tax Notice
Image Credit: Godigit

ಐಟಿಆರ್ ಸಲ್ಲಿಕೆಯಲ್ಲಿ ಯಾವುದೇ ತಪ್ಪಾಗಬಾರದು
ಇನ್ನು ತೆರಿಗೆ ಪಾವತಿದಾರವು ಐಟಿಆರ್ ಸಲ್ಲಿಕೆಯಲ್ಲಿ ಯಾವುದೇ ರೀತಿಯ ತಪ್ಪುಗಳನ್ನು ಮಾಡಬಾರದು. ಐಟಿಆರ್ ಸಲ್ಲಿಸುವ ಯಾವುದೇ ಮಾಹಿತಿ ನೀಡಿದ್ದರು ಅಥವಾ ಯಾವುದೇ ತಪ್ಪಾದ ಮಾಹಿತಿ ನೀಡಿದರು ಆದಾಯ ಇಲಾಖೆ ನಿಮ್ಮ ವಿರುದ್ದ ಕ್ರಮ ಕೈಗೊಳ್ಳುತ್ತದೆ.

ಇನ್ನು ಐಟಿಆರ್ ಸಲ್ಲಿಕೆಯಲ್ಲಿ ಈ ಐದು ವಿವರಗಳ ಬಗ್ಗೆ ಸರಿಯಾದ ಮಾಹಿತಿ ದಾಖಲಿಸದಿದ್ದರೆ ಆದಾಯ ಇಲಾಖೆ ನಿಮ್ಮ ವಿರುದ್ಧ ಕೇಸ್ ದಾಖಲಿಸುತ್ತದೆ. ಹೀಗಾಗಿ ಈ ಐದು ದಾಖಲೆಗಳ ಮಾಹಿತಿಯನ್ನು ನೀಡುವುದು ಕಡ್ಡಾಯವಾಗಿದೆ.

ಈ ಐದು ಆದಾಯ ತೋರಿಸದೆ ಇದ್ದರೆ ನಿಮ್ಮ ಮೇಲೆ ಬೀಳಲಿದೆ ಕೇಸ್
*ಅಪ್ರಾಪ್ತ ಮಕ್ಕಳ ಖಾತೆಯ ಬಡ್ಡಿಯ ವಿವರ ನೀಡುವುದು ಕಡ್ಡಾಯ
ಸಾಮಾನ್ಯವಾಗಿ ಹೂಡಿಕೆಯ ಲಾಭದ ಮೊತ್ತಕ್ಕೆ ಐಟಿಆರ್ ಅನ್ನು ಸಲ್ಲಿಸಬೇಕಾಗುತ್ತದೆ. ಪೋಷಕರು ತಮ್ಮ ಅಪ್ರಾಪ್ತ ಮಕ್ಕಳ ಹೆಸರಿನಲ್ಲಿ ಖಾತೆಯನ್ನು ತೆರೆದರೆ ಅದರ ಲಾಭವು ಪೋಷಕರಿಗೆ ತಲುಪುತ್ತದೆ. ಮಗುವಿನ ಹೆಸರಿನಲ್ಲಿ ಬರುವ ಬಡ್ಡಿಯ ಲಾಭವನ್ನು ನೀವು ನಿಮ್ಮ ಆದಾಯಕ್ಕೆ ಸೇರಿಸಿಕೊಂಡು ಐಟಿಆರ್ ಸಲ್ಲಿಸುವಾಗ ಮಾಹಿತಿ ನೀಡಬೇಕು. ಅಪ್ರಾಪ್ತರ ಆದಾಯವನ್ನು ಸೇರಿಸುವ ಮೂಲಕ 1500 ರೂ. ಕಡಿತವನ್ನು ಕ್ಲೈಮ್ ಮಾಡಬಹುದು.

Join Nadunudi News WhatsApp Group

Five Reason For Tax Notice
Image Credit: Hdfcsec

*ಹೂಡಿಕೆಯ ಮೇಲಿನ ಲಾಭದ ವಿವರ
ಆದಾಯ ರಿಟರ್ನ್ ಸಲ್ಲಿಸುವ ಆದಾಯ ರಿಟರ್ನ್ ಪಡೆಯುವ ಬಗ್ಗೆ ಮಾಹಿತಿ ಸಲ್ಲಿಸಬೇಕು. ಪಿಪಿಎಫ್ ನ ಮೂಲಕ ಗಳಿಸಿದ ಬಡ್ಡಿಯು ತೆರಿಗೆ ಮುಕ್ತವಾಗಿರುತ್ತದೆ. ಐಟಿಆರ್ ಸಲ್ಲಿಕೆಯಲ್ಲಿ ಇದರ ಮಾಹಿತಿಯನ್ನು ನೀಡಬೇಕಾಗುತ್ತದೆ.

*ಉಳಿತಾಯ ಖಾತೆಯಿಂದ ಗಳಿಸಿದ ಲಾಭದ ವಿವರ
ಇನ್ನು ತೆರಿಗೆದಾರರು ತಮ ಉಳಿತಾಯ ಬ್ಯಾಂಕ್ ಖಾತೆಯಿಂದ ಗಳಿಸಿದ ಬಡ್ಡಿಯ ಹಣದ ಬಗ್ಗೆ ಕೂಡ ಮಾಹಿತಿ ನೀಡಬೇಕು. ಈ ಬಗ್ಗೆ ಮಾಹಿತಿ ನೀಡಿದ ನಂತರ ಸೆಕ್ಷನ್ 80TTA ಅಡಿಯಲ್ಲಿ 10,000 ರೂ. ವರೆಗೆ ಕಡಿತವಾಗಿ ಕ್ಲೈಮ್ ಮಾಡಿಕೊಳ್ಳಲಾಗುತ್ತದೆ.

Five Reason For Tax Notice
Image Credit: Moneycontrol

*ವಿದೇಶದ ಹೂಡಿಕೆಯ ವಿವರ
ನೀವು ವಿದೇಶದಲ್ಲಿ ಹೂಡಿಕೆ ಮಾಡಿದ್ದರೆ, ಮನೆ ಅಥವಾ ಆಸ್ತಿ ಇನ್ನಾವುದೇ ರೂಪದಲ್ಲಿ ಲಾಭ ಗಳಿಸಿದ್ದರೆ ಐಟಿಆರ್ ಸಲ್ಲಿಕೆಯ ಸಮಯದಲ್ಲಿ ಮಾಹಿತಿ ನೀಡಬೇಕು.

*ಸಂಚಿತ ಬಡ್ಡಿಯ ವಿವರ
ಬಡ್ಡಿಯಿಂದ ಬಂದ ಒಟ್ಟು ಆದಾಯಕ್ಕೆ ಸಂಚಿತ ಬಡ್ಡಿ ಎನ್ನಲಾಗುತ್ತದೆ. ಈ ಸಂಚಿತ ಠೇವಣಿ ಅಥವಾ ಬಾಂಡ್‌ಗಳಿಂದ ಬಡ್ಡಿ, ಇದನ್ನು ಮುಕ್ತಾಯದ ಮೇಲೆ ಮಾತ್ರ ಪಾವತಿಸಲಾಗುತ್ತದೆ. ಇಂತಹ ಆದಾಯದ ಮೇಲೆ ಟಿಡಿಎಸ್ ತೆಗೆದುಕೊಳ್ಳಲಾಗುತ್ತದೆ. ಈ ಕಾರಣಕ್ಕೆ ಐಟಿಆರ್ ಸಲ್ಲಿಕೆಯ ಸಮಯದಲ್ಲಿ ಸಂಚಿತ ಬಡ್ಡಿಯ ಬಗ್ಗೆ ವಿವಿರವನ್ನು ನೀಡಬೇಕಾಗುತ್ತದೆ.

Join Nadunudi News WhatsApp Group