Fixed Deposit: ಈ ಬ್ಯಾಂಕುಗಳ FD ದರ ಹೆಚ್ಚಳ, ಹಿರಿಯ ನಾಗರಿಕರಿಗೆ FD ಇಡಲು ಈ ಬ್ಯಾಂಕುಗಳು ಬೆಸ್ಟ್

ಹಿರಿಯ ನಾಗರಿಕರಿಗೆ FD ಇಡಲು ಈ ಬ್ಯಾಂಕುಗಳು ಬೆಸ್ಟ್ ಸಿಗಲಿದೆ ಹೆಚ್ಚು ಬಡ್ಡಿ

Fixed Deposit Interest For Senior Citizens: ದೇಶದಲ್ಲಿ ಹಣದ ಉಳಿತಾಯಕ್ಕಾಗಿ ಹಲವಾರು ಯೋಜನೆಗಳು ಜಾರಿಯಲ್ಲಿವೆ. ಎಲ್ಲ ರೀತಿಯ ಯೋಜನೆಗಳ್ಳಿ ಹೂಡಿಕೆ ಮಾಡುವುದು ಅಷ್ಟೊಂದು ಸುರಕ್ಷಿತವಾಗಿರುವುದಿಲ್ಲ. ಜನರು ತಮ್ಮ ಉಳಿತಾಯದ ಹಣವನ್ನು ಸುರಕ್ಶಿತ ಹಾಗೂ ಹೆಚ್ಚಿನ ಲಾಭ ನೀಡುವ ಯೋಜನೆಗಳ್ಳಿ ಹೂಡಿಕೆ ಮಾಡಲು ಬಯಸುತ್ತಾರೆ.

ಇನ್ನು ಹಿರಿಯ ನಾಗರಿಕರು ಹೆಚ್ಚಾಗಿ ಸರಳ ಮತ್ತು ಸುರಕ್ಷಿತ ಯೋಜನೆಗಳನ್ನು ಹುಡುಕುತ್ತಾರೆ. ಯಾವುದೇ ಅಪಾಯವಿಲ್ಲದ ಹೂಡಿಕೆ ಎಂದರೆ ಅದು Fixed Deposit ಆಗಿದೆ. ಇನ್ನು ಸಾಮಾನ್ಯ ಹೂಡಿಕೆದಾರರಿಗಿಂತ ಹಿರಿಯ ನಾಗರಿಕರಿಗೆ FD ಯಲ್ಲಿ ಹೆಚ್ಚಿನ ಬಡ್ಡಿದರವನ್ನು ನೀಡಲಾಗುತ್ತದೆ. ಇದರಿಂದ ಹೆಚ್ಚಿನ ಆದಾಯದೊಂದಿಗೆ ಯಾವುದೇ ಅಪಾಯವಿಲ್ಲದೆ ಹೂಡಿಕೆಯ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.

Fixed Deposit Interest For Senior Citizens
Image Credit: Business Today

ಹಿರಿಯ ನಾಗರಿಕರಿಗೆ ಬಂಪರ್ ಗುಡ್ ನ್ಯೂಸ್
ನೀವು ಸ್ಥಿರ ಠೇವಣಿಗಳಲ್ಲಿ ಠೇವಣಿ ಇಡುವ ಹಣವು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ನೀವು ಹೂಡಿಕೆ ಮಾಡಿದ ಹಣಕ್ಕೆ ಬಡ್ಡಿಯ ರೂಪದಲ್ಲಿ ಆದಾಯವು ಪ್ರತಿ ತಿಂಗಳು ನಿಮ್ಮ ಖಾತೆಯನ್ನು ತಲುಪುತ್ತದೆ. ನೀವು ಈ ಮೊತ್ತದ ಹಣವನ್ನು ಒಂದು ವರ್ಷಕ್ಕೆ ಸ್ಥಿರ ಠೇವಣಿಯಲ್ಲಿ ಲಾಕ್ ಮಾಡಿದರೆ, ನೀವು ಒಂದು ವರ್ಷದವರೆಗೆ ತಿಂಗಳಿಗೆ ಈ ಮೊತ್ತದ ಬಡ್ಡಿಯನ್ನು ಗಳಿಸಬಹುದು. ನೀವು ಅವಧಿಯ ಕೊನೆಯಲ್ಲಿ ಮುಂದುವರಿಯಲು ಬಯಸಿದರೆ ನೀವು ನವೀಕರಿಸಬಹುದು.

FD ಮೇಲೆ ಹಿರಿಯ ನಾಗರಿಕರಿಗೆ ನೀಡುವ ಬಡ್ಡಿದರದ ಬಗ್ಗೆ ವಿವರ ಇಲ್ಲಿದೆ
ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್, ಕರ್ಣಾಟಕ ಬ್ಯಾಂಕ್‌ ನಲ್ಲಿ ಸ್ಥಿರ ಠೇವಣಿಯ ಮೇಲೆ ಹಿರಿಯ ನಾಗರಿಕರಿಗೆ 7.5 ರಿಂದ 8% ಬಡ್ಡಿದರವನ್ನು ನೀಡಲಾಗುತ್ತದೆ. ಆದರೆ ಖಾಸಗಿ ಬ್ಯಾಂಕ್‌ ಗಳಾದ ಐಸಿಐಸಿಐ, ಎಚ್‌ ಡಿಎಫ್‌ಸಿ, ಆಕ್ಸಿಸ್ ಬ್ಯಾಂಕ್‌ ಗಳು 8.5% ವರೆಗೆ ಬಡ್ಡಿದರವನ್ನು ಪಡೆಯುತ್ತವೆ. ಆದರೆ ಶೇ.9.5ರಷ್ಟು ಬಡ್ಡಿ ಪಡೆಯಬೇಕಾದರೆ ಸಣ್ಣ ಹಣಕಾಸು ಬ್ಯಾಂಕ್ ಗಳ ಮೊರೆ ಹೋಗಬೇಕು. ಉದಾಹರಣೆಗೆ, ಫಿನ್ ಕೇರ್ ಸ್ಮಾಲ್ ಫೈನಾನ್ಸ್‌ ನಲ್ಲಿ 444 ದಿನಗಳ FD ಗಾಗಿ ಹಿರಿಯ ನಾಗರಿಕರಿಗೆ 9% ಬಡ್ಡಿಯನ್ನು ನೀಡಲಾಗುತ್ತದೆ. ಅಲ್ಲದೆ, ಉಜ್ಜೀವನ್ ಸ್ಮಾಲ್ ಫೈನಾನ್ಸ್ ಹಿರಿಯ ನಾಗರಿಕರಿಗೆ FD ಮೇಲೆ 15 ತಿಂಗಳವರೆಗೆ 9% ಬಡ್ಡಿದರವನ್ನು ನೀಡುತ್ತದೆ.

Senior Citizen FD Interest Rate
Image Credit: Informalnewz

Join Nadunudi News WhatsApp Group

Join Nadunudi News WhatsApp Group