Traveller: 10 ಲಕ್ಷಕ್ಕೆ ಮನೆಗೆ ತನ್ನಿ 14 ಆಸನಗಳ ಕಾರ್, ಬಾಡಿಗೆ ಬಿಸಿನೆಸ್ ಮಾಡಲು ಈ ಕಾರ್ ಬೆಸ್ಟ್.

ಅಗ್ಗದ ಬೆಲೆಗೆ ಖರೀದಿಸಿ 14 ಆಸನದ ದೊಡ್ಡ ಕಾರ್, ಬಿಸಿನೆಸ್ ಮಾಡುವವರಿಗಾಗಿ ಈ ಕಾರ್

Force Traveler 3350 Super: ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಕಾರ್ ಗಳು ಬಿಡುಗಡೆಗೋಡಿದೆ. ಕಾರ್ ಖರೀದಿಗೆ ಗ್ರಾಹಕರಿಗೆ ಆಯ್ಕೆಯಲ್ಲಿ ಯಾವುದೇ ಕೊರತೆ ಇಲ್ಲ ಎನ್ನಬಹುದು. ಮಾರುಕಟ್ಟೆಯಲ್ಲಿ ಅನೇಕ ಮಾದರಿಯ ಕಾರುಗಳು ಇದ್ದು ಜನರು ಯಾವ ಕಾರ್ ಖರೀದಿ ಮಾಡಬೇಕು ಅನ್ನುವ ಗೊಂದಲಕ್ಕೆ ಕೂಡ ಒಳಗಾಗುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.

ಇತ್ತೀಚೆಗಂತೂ ವಿವಿಧ ಕಾರ್ ತಯಾರಕ ಕಂಪನಿಗಳು ಹೆಚ್ಚು ಆಸನಗಳಿರುವ ಕಾರ್ ಗಳನ್ನೂ ಪರಿಚಯಿಸುತ್ತಿದೆ. ದೊಡ್ಡ ಕುಟುಂಬದವರಿಗೆ ದೊಡ್ಡ ಕಾರ್ ನ ಅವಶ್ಯಕತೆ ಇರುತ್ತದೆ. ಹಾಗೆಯೆ ಟ್ರಾವೆಲ್ ಗಾಗಿ ಕೂಡ ಜನರು ದೊಡ್ಡ ವಾಹನವನ್ನೇ ಬಯಸುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ ಇದೀಗ ಅಚ್ಚರಿಯೆಂಬಂತೆ 14 ಆಸನಗಳ ಕಾರ್ ಒಂದು ಪರಿಚಯವಾಗಿದೆ. ನೀವು ಈ ಅತಿ ದೊಡ್ಡ ಕಾರ್ ಅನ್ನು ಅಗ್ಗದ ಬೆಲೆಯಲ್ಲಿ ಖರೀದಿಸಬಹುದಾಗಿದೆ.

Force Traveler 3350 Super
Image Credit: Pune

ಬಾಡಿಗೆ ಬಿಸಿನೆಸ್ ಮಾಡಲು ಈ ಕಾರ್ ಬೆಸ್ಟ್
Force Traveler 3350 Super ವ್ಯಾನ್ ಬಾಡಿಗೆ ಬಿಸಿನೆಸ್ ಮಾಡುವವರಿಗೆ ಬೆಸ್ಟ್ ಆಯ್ಕೆ ಎನ್ನಬಹುದು. ಇದರಲ್ಲಿ 2.5-ಲೀಟರ್, 4-ಸಿಲಿಂಡರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 140 bhp ಪವರ್ ಮತ್ತು 320 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು 5 ಸ್ಪೀಡ್ ಮ್ಯಾನುವಲ್ ಗೇರ್‌ ಬಾಕ್ಸ್‌ ನೊಂದಿಗೆ ಸಜ್ಜುಗೊಂಡಿದ್ದು, ಗಂಟೆಗೆ 140 ಕಿಲೋಮೀಟರ್ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ನೀವು Force Traveler 3350 Super ವ್ಯಾನ್ ನಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳ ವೈಶಿಷ್ಟ್ಯಗಳು ನೋಡಬಹುದು.

10 ಲಕ್ಷಕ್ಕೆ ಮನೆಗೆ ತನ್ನಿ 14 ಆಸನಗಳ ಕಾರ್
ಕಾರು ಕೇವಲ 15 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 100 ಕಿಲೋಮೀಟರ್ ವೇಗವನ್ನು ತಲುಪುತ್ತದೆ. ಮಾರುಕಟ್ಟೆಯಲ್ಲಿ 9.96 ಲಕ್ಷಬೆಲೆಯಲ್ಲಿ ಲಭ್ಯವಾಗಲಿದೆ. 9 ರಿಂದ 14 ಜನರ ವಿಶಾಲವಾದ ಆಸನ ಸಾಮರ್ಥ್ಯದೊಂದಿಗೆ ಫೋರ್ಸ್ ಟ್ರಾವೆಲರ್ 3350 ಸೂಪರ್ ಹೆಚ್ಚು ಗಮನಾರ್ಹವಾಗಿದೆ. ಈ ವ್ಯಾನ್ ಅನ್ನು ಸರಕುಗಳನ್ನು ಸಾಗಿಸಲು ಅಥವಾ ಶಟಲ್ ಸೇವೆಗಳನ್ನು ಒದಗಿಸುವಂತಹ ವ್ಯಾಪಾರ ಉದ್ದೇಶಗಳಿಗಾಗಿ ಬಳಸಬಹುದು. ಇದರ ಶಕ್ತಿಯುತ ಎಂಜಿನ್ ನಯವಾದ ಮತ್ತು ದಕ್ಷ ಡ್ರೈವ್ ಅನ್ನು ನೀಡುತ್ತದೆ.

Force Traveler 3350 Super Price
Image Credit: Original Source

Force Traveler 3350 Super Feature
•Air conditioning, power steering
•Power windows
•Electric mirrors
•Central locking
•Anti-lock braking system (ABS)
•Electronic brake-force distribution (EBD)
•Dual front air bags

Join Nadunudi News WhatsApp Group

Join Nadunudi News WhatsApp Group