Free 5G Sim: ಮೊಬೈಲ್ ಬಳಸುವವರು ಈ ಚಿಕ್ಕ ಕೆಲಸವನ್ನ ಮಾಡಿದರೆ ಉಚಿತವಾಗಿ ಮನೆಗೆ ಬರಲಿದೆ 5G Sim Card.

Free 5G Sim: ಮೊಬೈಲ್ ಬಳಸುವವರು ಈ ಚಿಕ್ಕ ಕೆಲಸವನ್ನ ಮಾಡಿದರೆ ಉಚಿತವಾಗಿ ಮನೆಗೆ ಬರಲಿದೆ 5G Sim Card, ಹೌದು ದೇಶದಲ್ಲಿ ಸದ್ಯ ಕೆಲವು ನಗರಗಳಲ್ಲಿ 5G ಸೇವೆ ಆರಂಭ ಆಗಿದ್ದು ಇನ್ನೇನು ಕೆಲವೇ ದಿನಗಳಲ್ಲಿ ದೇಶದ ಪ್ರತಿಯೊಬ್ಬ ವ್ಯಕ್ತಿಗಳು ಕೂಡ 5G ಸೇವೆಯನ್ನ ಬಳಸಬಹುದಾಗಿದೆ. ಹೌದು ಜನರಿಗೆ ಅತ್ಯಂತ ವೇಗದ ಇಂಟರ್ನೆಟ್ ಸೇವೆಯನ್ನ ಒದಗಿಸುವ ಸಲುವಾಗಿ ದೇಶದಲ್ಲಿ 5G ಸೇವೆಯನ್ನ ಆರಂಭ ಮಾಡಲಾಗಿದ್ದು ಜನರು ಇನ್ನುಮುಂದೆ 5G ಸೇವೆಯನ್ನ ಬಳಸಬಹುದು.

ಸದ್ಯ ಜನರಲ್ಲಿ 5G ಸಿಮ್ ಹೇಗಿರಲಿದೆ ಮತ್ತು ಅದನ್ನ ಹೇಗೆ ಬಳಸುವುದು ಮತ್ತು ಅದಕ್ಕೆ ಎಷ್ಟು ರಿಚಾರ್ಜ್ ಮಾಡಬೇಕು ಅನ್ನುವ ಪ್ರಶ್ನೆ ಇದ್ದು ಆ ಎಲ್ಲಾ ಪ್ರಶ್ನೆಗಳಿಗೆ ಇನ್ನೇನು ಕೆಲವೇ ದಿನಗಳಲ್ಲಿ ಉತ್ತರ ಕೂಡ ಸಿಗಲಿದೆ. ಸದ್ಯ ಈಗ ಇನ್ನೊಂದು ಖುಷಿಯ ವಿಚಾರ ಏನು ಅಂದರೆ, ನಾವು ಸಿಮ್ ಶಾಪ್ ಗಳಿಗೆ ಹೋಗಿ ಸಿಮ್ ಖರೀದಿ ಮಾಡುವ ಅಗತ್ಯ ಇಲ್ಲ ಮತ್ತು ಈ ಚಿಕ್ಕ ಕೆಲಸವನ್ನ ಮಾಡಿದರೆ ನಮ್ಮ ಫ್ರೀ ಆಗಿ ಮನೆಗೆ 5G ಸಿಮ್ ಬರಲಿದೆ ಮತ್ತು ಯಾವುದೇ ಹಣ ಕೊಡುವ ಅಗತ್ಯ ಕೂಡ ಇಲ್ಲ. ಹಾಗಾದರೆ 5G ಸಿಮ್ ಮನೆಗೆ ಬರಲು ಯಾವ ಕೆಲಸವನ್ನ ಮಾಡಬೇಕು ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ.

Jio 5G SIM will come to your home for free if you do this small task on Jio website.
Image Credit: economictimes.indiatimes.com

ಹೌದು ಜನರು ಉಚಿತವಾಗಿ Jio Sim ಬುಕ್ ಮಾಡಬಹುದಾಗಿದೆ. ದೇಶದಲ್ಲಿ Jio 5G ಸೇವೆಯನ್ನ ಆರಂಭ ಮಾಡಿದ್ದು ಜನರು ಕೆಲವು ನಿರ್ಧಿಷ್ಟ ಪ್ರದೇಶದಲ್ಲಿ 5G ಸೇವೆಯನ್ನ ಬಳಸಬಹುದು. Jio ಕಂಪನಿ ಗ್ರಾಹಕರಿಗೆ ಉಚಿತವಾಗಿ 5G ಸಿಮ್ ವಿತರಣೆ ಮಾಡಲು ಈಗ ರೆಡಿ ಆಗಿದೆ ಮತ್ತು ಸಿಮ್ ಅನ್ನು ಉಚಿತವಾಗಿ ಮನೆ ಮನೆಗೆ ವಿತರಣೆ ಮಾಡಲು ಜಿಯೋ ಈಗ ಮುಂದಾಗಿದೆ. ಗ್ರಾಹಕರು ಆನ್ಲೈನ್ ನಲ್ಲಿ ಜಿಯೋ ಸಿಮ್ ಖರೀದಿ ಮಾಡಿದರೆ ಜಿಯೋ ಆ ಸಿಮ್ ಅನ್ನು ನಿಮ್ಮ ಮನೆಗೆ ತಲುಪಿಸಲಿದೆ.

ಸಿಮ್ ಬುಕ್ ಮಾಡಲು ಗ್ರಾಹಕರು ಮೊದಲು Jio Website ಗೆ ಭೇಟಿ ನೀಡಬೇಕು. ನಿಮಗೆ ವೆಬ್ಸೈಟ್ ನಲ್ಲಿ ಜಿಯೋ 5G ಸಿಮ್ ಆಯ್ಕೆ ತೋರಿಸುತ್ತದೆ. ಸಿಮ್ ಆಯ್ಕೆಯಲ್ಲಿ ನೀವು ಹೆಸರು ಮತ್ತು ಸಂಖ್ಯೆಯನ್ನ ನಮೂದಿಸಬೇಕು. ಹೆಸರು ಮತ್ತು ಸಂಖ್ಯೆ ಪ್ರಕ್ರಿಯೆ ಪೂರ್ಣವಾದ ನಂತರ ನಿಮಗೆ ನಿಮ್ಮ ಮೊಬೈಲ್ ಗೆ ಒಂದು OTP ಬರುತ್ತದೆ ಮತ್ತು ಆ ಒಟಿಪಿ ಅನ್ನು ಲಗತ್ತಿಸಬೇಕು. ಈ ಪ್ರಕ್ರಿಯೆ ಪೂರ್ಣವಾದ ನಂತರ ನೀವು postpaid ಅಥವಾ prepaid ಅನ್ನು ಆಯ್ಕೆ ಮಾಡಬಹುದು.

ಈ ಪ್ರಕ್ರಿಯೆ ಪೂರ್ಣವಾದ ನಂತರ ನೀವು ನಿಮ್ಮ ವಿಳಾಸವನ್ನ ನಮೂದಿಸಬೇಕು ಮತ್ತು ವಿಳಾಸವನ್ನ ನಮೂದಿಸಿದ ಕೆಲವೇ ದಿನಗಳಲ್ಲಿ ನಿಮ್ಮ ಮನೆಗೆ ಸಿಮ್ ಕಾರ್ಡ್ ಬರಲಿದೆ ಮತ್ತು ಈ ಪ್ರಕ್ರಿಯೆಯಲ್ಲಿ ನೀವು ಯಾವುದೇ ಹಣವನ್ನ ಕೊಡುವ ಅಗತ್ಯ ಕೂಡ ಇರುವುದಿಲ್ಲ.

Join Nadunudi News WhatsApp Group

Join Nadunudi News WhatsApp Group