Aadhaar Card: 10 ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡ್ ಹೊಂದಿರುವವರಿಗೆ ಹೊಸ ರೂಲ್ಸ್, ಬೇಗ ಈ ಕೆಲಸ ಮಾಡಿ.

ಈ ರೀತಿಯಾಗಿ ನಿಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸಿಕೊಳ್ಳಿ

Free Aadhaar Update Latest News: ಆಧಾರ್ ಕಾರ್ಡ್ ಎಲ್ಲಾ ರೀತಿಯ ಕೆಲಸಗಳಿಗೆ ಮುಖ್ಯವಾಗಿರುವ ಕಾರಣ ಆಧಾರ್ ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಇನ್ನು UIDAI ಆಧಾರ್ ನವೀಕರಣಕ್ಕೆ ಸಮಬಂಧಿಸಿದಂತೆ ಜನಸಮಾನ್ಯರಿಗೆ ಆಗಾಗ ಸೂಚನೆ ನೀಡುತ್ತಾ ಇರುತ್ತದೆ. ಸದ್ಯ UIDAI Free Aadhaar Card Update ಗೆ ಸಂಬಂಧಿಸಿದಂತೆ ಆಧಾರ್ ಹೊಂದಿರುವವರಿಗೆ ಬಿಗ್ ಅಪ್ಡೇಟ್ ನೀಡಿದೆ.

ಭಾರತೀಯ ಪ್ರಜೆಯಾಗಿರುವ ಪ್ರತಿಯೊಬ್ಬರೂ Aadhaar Card ಅನ್ನು ಹೊಂದುವುದು ಕಡ್ಡಾಯವಾಗಿದೆ. ಪ್ರತಿಯೊಬ್ಬರೂ ಕೂಡ ತಮ್ಮ ಆದ ಆಧಾರ್ ಕಾರ್ಡ್ ಅನ್ನು ಹೊಂದಿರುತ್ತಾರೆ. ಅದೇ ರೀತಿ ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ ಈ ಕೆಲಸವನ್ನು ಮಾಡುವುದು ಅಗತ್ಯವಾಗಿದೆ. ಸರ್ಕಾರ ನಿಗದಿ ಪಡಿಸಿರುವ ಸಮಯದೊಳಗೆ ನೀವು ಆಧಾರ್ ಸಂಬಂದಿತ ಈ ಕೆಲಸವನ್ನು ಮಾಡದೆ ಇದ್ದರೆ ಸಮಸ್ಯೆ ಎದುರಿಸಬೇಕಾಗುತ್ತದೆ ಎನ್ನುವುದು ನಿಮಗೆ ತಿಳಿದಿರಲಿ.

Free Aadhaar Update Last Date
Image Credit: Outlookindia

10 ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡ್ ಹೊಂದಿರುವವರಿಗೆ ಹೊಸ ರೂಲ್ಸ್
UIDAI 10 ವರ್ಷ ಹಳೆಯ ಆಧಾರ್ ಕಾರ್ಡ್ ಹೊಂದಿರುವವರಿಗೆ ಆಧಾರ್ ನವೀಕರಣವನ್ನು ಕಡ್ಡಾಗೊಳಿಸಿದೆ. ಈ ನಿಟ್ಟಿನಲ್ಲಿ ಜನಸಾಮಾನ್ಯರು ತಮ್ಮ ಆಧಾರ್ ಕಾರ್ಡ್ ನವೀಕರಣಕ್ಕೆ ಮುಂದಾಗಿದ್ದರು. ಇನ್ನು UIDAI ಜನರಿಗಾಗಿ Free Aadhaar Update ಅನ್ನು ನೀಡಿದೆ. ಈಗಾಗಲೇ UIDAI ಆಧಾರ್ ನವೀಕರಣಕ್ಕೆ ಕೊನೆಯ ದಿನಾಂಕವನ್ನು ನಿಗದಿಪಡಿಸಿತ್ತು. UIDAI ಇದೀಗ Free Aadhar Update ಸಾಕಷ್ಟು ಸಮಯ ನೀಡಿದೆ.

ಹೌದು UIDAI ಮಾರ್ಚ್ 14 ರ ಉಚಿತ ಆಧಾರ್ ನವೀಕರಣದ ಕೊನೆಯ ದಿನಾಂಕವನ್ನು ಜೂನ್ 14 2024 ರ ವರಿಗೆ ವಿಸ್ತರಿಸಿದೆ. ಈ ಮೂಲಕ ಇನ್ನು ಆಧಾರ್ ನವೀಕರಣ ಮಾಡಿಕೊಳ್ಳದೆ ಇರುವವರಿಗೆ ಇನ್ನು ಮೂರು ತಿಂಗಳು ಸಮಯಾವಕಾಶವನ್ನು ನೀಡಿದೆ. ನೀವು ಜೂನ್ 14 ರೊಳಗೆ ಆಧಾರ್ ನವೀಕರಣವನ್ನು ಮಾಡಿದರೆ ಯಾವುದೇ ಶುಲ್ಕವನ್ನು ಪಾವತಿಸುವ ಅಗತ್ಯ ಇಲ್ಲ. ಆದರೆ ಜೂನ್ 14 ರ ನಂತರ ಆಧಾರ್ ನವೀಕರಣಕ್ಕೆ 50 ರೂ. ಶುಲ್ಕವನ್ನು ಪಾವತಿಸಬೆಕಾಗುತ್ತದೆ.

Free Aadhaar Update
Image Credit: India

ಈ ರೀತಿಯಾಗಿ ನಿಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸಿಕೊಳ್ಳಿ
*ಮೊದಲು UIDAI Website ಆಗಿರುವ https://myaadhaar.uidai.gov.in/ ಗೆ ಭೇಟಿ ನೀಡಬೇಕು.

Join Nadunudi News WhatsApp Group

*UIDAI Website ನಲ್ಲಿ ಲಾಗಿನ್ ಆಗಿ Password ರಚಿಸಬೇಕು.

*ನಂತರ My Aadhaar ಮೇಲೆ ಟ್ಯಾಬ್ ಮಾಡಿ ಆಧಾರ್ ವಿವರಗಳನ್ನು ನವೀಕರಿಸಿ ನಮೂದಿಸಬೇಕು.

*ನೋಂದಾಯಿತ ಮೊಬೈಲ್ ಸಂಖ್ಯೆಗೆ ಬಂದ OTP ಅನ್ನು ನಮೂದಿಸಿ ಲಾಗಿನ್ ಆಗಬೇಕು.

•ನಂತರ ನೀವು ಬದಲಾವಣೆ ಮಾಡಬೇಕಾದ ವಿವರವನ್ನು ಭರ್ತಿ ಮಾಡಬೇಕು.

•ನಂತರ ಡಾಕ್ಯುಮೆಂಟ್ಸ್ ಅಪ್ಡೇಟ್ ಆಯ್ಕೆಯನ್ನು ಆರಿಸಬೇಕಾಗುತ್ತದೆ.

•ಇಲ್ಲಿ ನೀವು ಆಧಾರ್ ಗೆ ಸಂಬಂಧಿಸಿದ ಮಾಹಿತಿಯನ್ನು ನೋಡುತ್ತಿರಿ.

•ಎಲ್ಲಾ ವಿವರಗಳನ್ನು ಪರಿಶೀಲಿಸಿ ಮತ್ತು ನಂತರ ವಿಳಾಸವನ್ನು ನವೀಕರಿಸಲು ಅಗತ್ಯವಿರುವ ದಾಖಲೆಗಳನ್ನು ಅಪ್‌ ಲೋಡ್ ಮಾಡಿ.

•ನಂತರ ಆಧಾರ್ ನವೀಕರಣ ಪ್ರಕ್ರಿಯೆಯನ್ನು ಸ್ವೀಕರಿಸಿ.

•ನಂತರ ನೀವು ನವೀಕರಣ ವಿನಂತಿ ಸಂಖ್ಯೆ (URN) ಸಂಖ್ಯೆ 14 ಅನ್ನು ಪಡೆಯುತ್ತೀರಿ.

•ಇದರ ಮೂಲಕ ನೀವು ಆಧಾರ್ ನವೀಕರಣ ಪ್ರಕ್ರಿಯೆಯನ್ನು ಟ್ರ್ಯಾಕ್ ಮಾಡಬಹುದು.

Aadhaar Card Update
Image Credit: Godigit

Join Nadunudi News WhatsApp Group