Womens Scheme: ಮಹಿಳೆಯರಿಗಾಗಿ ರಾಜ್ಯದಲ್ಲಿ ಮತ್ತೊಂದು ಯೋಜನೆ ಜಾರಿ, ಸಿದ್ದರಾಮಯ್ಯ ಸರ್ಕಾರದ ಘೋಷಣೆ

ರಾಜ್ಯದ ಮಹಿಳೆಯರಿಗಾಗಿ ಇನ್ನೊಂದು ಯೋಜನೆ ಜಾರಿ, ಸರ್ಕಾರದ ಆದೇಶ

Govt New Scheme For Women’s: ರಾಜ್ಯ ಸರ್ಕಾರ ಮಹಿಳಾ ಸಬಲೀಕರಣದತ್ತ ಹೆಚ್ಚಿನ ಗಮನ ಹರಿಸುತ್ತಿದೆ. ಮಹಿಳೆಯರಿಗಾಗಿ ಸಾಕಷ್ಟು ವಿಶೇಷ ಯೋಜನೆಗಳನ್ನು ಪರಿಚಯಿಸಿದೆ. ಇನ್ನು ಚುನಾವಣಾ ಸಮಯದಲ್ಲಿ ಘೋಷಿಸಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಹೆಚ್ಚಿನ ಯೋಜನೆಗಳು ಮಹಿಳೆಯರಿಗೆ ಲಾಭವನ್ನು ನೀಡುತ್ತಿದೆ ಎನ್ನಬಹುದು.

ಅದರಲ್ಲೂ ಶಕ್ತಿ ಯೋಜನೆ ಹಾಗೂ ಗೃಹ ಲಕ್ಷ್ಮಿ ಯೋಜನೆಯು ವಿಶೇಷವಾಗಿ ಮಹಿಳೆಯರಿಗಾಗಿ ರೂಪಿಸಲಾಗಿದೆ. ಇನ್ನು ಅನ್ನ ಭಾಗ್ಯ ಯೋಜನೆಯ ಹಣ ನೇರವಾಗಿ ಮಹಿಳೆಯರ ಖಾತೆಗೆ ಜಮಾ ಆಗುತ್ತದೆ.

Free Driving Training In Karnataka 2024
Image Credit: Deccan Herald

ಮಹಿಳೆಯರಿಗಾಗಿ ರಾಜ್ಯದಲ್ಲಿ ಮತ್ತೊಂದು ಯೋಜನೆ ಜಾರಿ
ಹಲವಾರು ಯೋಜನೆಗಳ ಲಾಭವನ್ನು ಪಡೆಯುತ್ತಿರುವ ಮಹಿಳೆಯರಿಗೆ ಇದೀಗ ರಾಜ್ಯ ಸರ್ಕಾರ ನೂತನ ಯೋಜನೆಯನ್ನು ಪರಿಚಯಿಸುವ ಮೂಲಕ ರಾಜ್ಯದ ಮಹಿಳೆಯರಿಗೆ ಮತ್ತೊಂದು ಸಿಹಿಸುದ್ದಿ ನೀಡಿದೆ. ಇತ್ತೀಚಿಗೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಯ ಅನುಷ್ಠಾನದ ಬಗ್ಗೆ ಚರ್ಚೆ ನಡೆಸಲಾಗಿದೆ. ಅಷ್ಟಕ್ಕೂ ರಾಜ್ಯ ಸರ್ಕಾರ ಮಹಿಳೆಯರಿಗಾಗಿ ಪರಿಚಯಿಸಿದ ಹೊಸ ಯೋಜನೆ ಯಾವುದು..? ಯೋಜನೆಯ ಲಾಭವೇನು…? ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

ಮಹಿಳೆಯರಿಗಾಗಿ ವಾಹನ ಚಾಲನಾ ತರಭೇತಿ ಆರಂಭ
ಗೃಹ ಲಕ್ಷ್ಮಿ, ಶಕ್ತಿ ಯೋಜನೆಯ ಬಳಿಕ ಇದೀಗ ರಾಜ್ಯದಲ್ಲಿ ಮಹಿಳೆಯರಿಗಾಗಿ ಮತ್ತೊಂದು ಯೋಜನೆ ತಲೆ ಎತ್ತಿಕೊಳ್ಳಲಿದೆ. ರಾಮನಗರ ಬಿಡದಿ ಬಳಿ ಮಹಿಳೆಯರಿಗೆ ಮಾತ್ರ ಚಾಲನಾ ತರಬೇತಿ ನೀಡಲು ಪ್ರಾದೇಶಿಕ ಚಾಲನಾ ತರಬೇತಿ ಕೇಂದ್ರ ಆರಂಭಿಸಲಾಗಿದೆ. ಈ ನಿಟ್ಟಿನಲ್ಲಿ ನಿನ್ನೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ್ದು, ಅನುದಾನಕ್ಕೂ ಒಪ್ಪಿಗೆ ಸೂಚಿಸಲಾಗಿದೆ.

Free Driving Training For Women's
Image Credit: Government Jobs In Karnataka

ಹೀಗಾಗಿ ರಾಮನಗರ ತಾಲೂಕು ಬಿಡದಿಯಲ್ಲಿ ಮಹಿಳೆಯರಿಗಾಗಿ ಪ್ರಾದೇಶಿಕ ಚಾಲನಾ ತರಬೇತಿ ಕೇಂದ್ರ ಸ್ಥಾಪಿಸಲಾಗುತ್ತಿದೆ. ಇನ್ನುಮುಂದೆ ಮಹಿಳೆಯರು ಉಚಿತ ಚಾಲನಾ ತರಬೇತಿಯನ್ನು ಪಡೆದುಕೊಳ್ಳಬಹುದು. ಮಹಿಳೆರು ಸ್ವಾವಲಂಬಿ ಜೀವನ ನಡೆಸಬೇಕೆನ್ನುವುದು ಸರ್ಕಾರದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಮಹಿಳೆರಿಗಾಗಿ ವಿಶೇಷ ಯೋಜನೆಗಳು ಜಾರಿಯಾಗುತ್ತಿವೆ.

Join Nadunudi News WhatsApp Group

Join Nadunudi News WhatsApp Group