ಸರ್ಕಾರೀ ನೌಕರರಿಗೆ ಹೊಸ ಭಾಗ್ಯ, ಉಚಿತ ಲ್ಯಾಪ್ ಟಾಪ್ ಹಾಗು ಮೊಬೈಲ್, ಯಾರು ಅರ್ಹರು ಮಾರ್ಗಸೂಚಿ ವೈರಲ್.

ಅರ್ಹತೆಯ ಆದಾರದ ಮೇಲೆ ಸರ್ಕಾರೀ ನೌಕರರಿಗೆ ಸಿಗಲಿದೆ ಉಚಿತ ಲ್ಯಾಪ್ ಟಾಪ್ ಹಾಗೂ ಮೊಬೈಲ್.

Free Mobile And Laptop For Government Employees: ಕೇಂದ್ರ ಸರ್ಕಾರ ಕೇಂದ್ರ ನೌಕರರಿಗೆ (Government Employees) ವಿವಿಧ ರೀತಿಯ ಸೌಲಭ್ಯವನ್ನು ನೀಡುತ್ತಿದೆ. ಇತ್ತೀಚಿಗೆ ಕೇಂದ್ರ ಸರ್ಕಾರ ನೌಕರರ ವೇತನ ಹೆಚ್ಚಳದ ಬಗ್ಗೆ ಘೋಷಣೆ ಹೊರಡಿಸಿತ್ತು.

ಇನ್ನು ವೇತನ ಹೆಚ್ಚಳದ ಜೊತೆಗೆ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸುವ ಬಗ್ಗೆ ಕೂಡ ಸಾಕಷ್ಟು ರೀತಿಯ ಅಪ್ಡೇಟ್ ಅನ್ನು ನೀಡಿತ್ತು. ವೇತನ ಹಾಗೂ ಪಿಂಚಣಿಯ ವಿಚಾರವಾಗಿ ಸರ್ಕಾರ ನೌಕರರಿಗೆ ಸಿಹಿ ಸುದ್ದಿ ನೀಡುತ್ತಲೇ ಇದೆ. ಇದೀಗ ಕೇಂದ್ರ ಸರ್ಕಾರ ಸರ್ಕಾರೀ ಉದ್ಯೋಗಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ.

Government employees will get free laptops and mobiles
Image Credit: Economictimes

ಸರ್ಕಾರೀ ನೌಕರರಿಗೆ ಉಚಿತವಾಗಿ ಸಿಗಲಿದೆ ಲ್ಯಾಪ್ ಟಾಪ್ ಮತ್ತು ಮೊಬೈಲ್
ಸರ್ಕಾರೀ ನೌಕರರಿಗೆ ಉಚಿತ ಲ್ಯಾಪ್ ಟಾಪ್ ಮತ್ತು ಮೊಬೈಲ್ ಸಿಗುವ ಬಗ್ಗೆ ಸರ್ಕಾರ ಘೋಷಣೆ ಹೊರಡಿಸಿದೆ. ಕೇಂದ್ರ ನೌಕರರು 1.3 ಲಕ್ಷ ರೂ. ಮೌಲ್ಯದ ಮೊಬೈಲ್, ಲ್ಯಾಪ್ ಟಾಪ್ ಅಥವಾ ಇನ್ನತರ ಸಾಧನವನ್ನು ಪಡೆಯಬಹುದಾಗಿದೆ.

ನೌಕರರು ಮೊಬೈಲ್, ಲ್ಯಾಪ್ ಟಾಪ್ ಪಡೆಯುವುದರ ಜೊತೆಗೆ ನಾಲ್ಕು ವರ್ಷಗಳ ನಂತರ ವೈಯಕ್ತಿಕ ಬಳಕೆಗಾಗಿ ಈ ಸಾಧನಗಳನ್ನು ತಮ್ಮ ಬಳಿ ಇಟ್ಟುಕೊಳ್ಳಲು ಅನುಮತಿ ನೀಡಲಾಗಿದೆ. ಇದೀಗ ಹಣಕಾಸು ಸಚಿವಾಲಯವು ನೌಕರರಿಗೆ ಮೊಬೈಲ್, ಲ್ಯಾಪ್ ಟಾಪ್ ನೀಡುವ ಕುರಿತು ವಿವಿಧ ಮಾರ್ಗಸೂಚಿಯನ್ನು ನೀಡಿವೆ.

ಉಚಿತ ಮೊಬೈಲ್, ಲ್ಯಾಪ್ ಟಾಪ್ ಪಡೆಯಲು ಯಾರು ಅರ್ಹರು
ಅರ್ಹ ಅಧಿಕಾರಿಗಳು ಅಧಿಕ್ರತ ಕೆಲಸಕ್ಕಾಗಿ ಮೊಬೈಲ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಫ್ಯಾಬ್ಲೆಟ್, ನೋಟ್‌ಬುಕ್, ನೋಟ್‌ಪ್ಯಾಡ್, ಅಲ್ಟ್ರಾ-ಬುಕ್, ನೆಟ್-ಬುಕ್ ಸೇರಿದಂತೆ ಇನ್ನಿತರ ಮೌಲ್ಯದಾಯಕ ಉಪಕರಣಗಳನ್ನು ತೆಗೆದುಕೊಳ್ಳಬಹುದಾಗಿದೆ. ಹಣಕಾಸು ಸಚಿವಾಲಯವು ಉಚಿತ ಮೊಬೈಲ್, ಲ್ಯಾಪ್ ಟಾಪ್ ಪಡೆಯಲು ಯಾರು ಅರ್ಹರು ಎನ್ನುವ ಬಗ್ಗೆ ಮಾರ್ಗಸೂಚಿಯನ್ನು ಹೊರಡಿಸಿದೆ.

Join Nadunudi News WhatsApp Group

Free Mobile And Laptop For Government Employees
Image Credit: Banglaxp

ಹಣಕಾಸು ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಯ ಪ್ರಕಾರ, ಕೇಂದ್ರ ಸರ್ಕಾರದ ಉಪ ಕಾರ್ಯದರ್ಶಿ ಮತ್ತು ಮೇಲಿನ ಹಂತದ ಎಲ್ಲ ಅಧಿಕಾರಿಗಳು ಅಂತಹ ಎಲೆಕ್ಟ್ರಾನಿಕ್ ಸಾಧನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.

ಸಚಿವಾಲಯ ಅಥವಾ ಇಲಾಖೆಯಲ್ಲಿನ ಅಧಿಕಾರಿಗಳಿಗೆ ಈಗಾಗಲೇ ಇಂತಹ ಸಾಧನವನ್ನು ನೀಡಿದ್ದಾರೆ ಅವರಿಗೆ ನಾಲ್ಕು ವರ್ಷಗಳವರೆಗೆ ಹೊಸ ಸಾಧನವನ್ನು ನೀಡಲಾಗುವುದಿಲ್ಲ ಎಂದು ಆದೇಶ ಹೊರಡಿಸಲಾಗಿದೆ. ಅರ್ಹ ಅಧಿಕಾರಿಗಳು ನಾಲ್ಕು ವರ್ಷದ ನಂತರ ಮೊಬೈಲ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಸೇರಿದಂತೆ ಇನ್ನಿತರ ಮೌಲ್ಯದಾಯಕ ಉಪಕರಣಗಳನ್ನು ಬಳಸಿಕೊಳ್ಳಬಹುದಾಗಿದೆ.

Join Nadunudi News WhatsApp Group