Free Recharge: ಕೇಂದ್ರದಿಂದ 239 ರೂ ರಿಚಾರ್ಜ್ ಉಚಿತವಾಗಿ ಸಿಗಲಿದೆ, ಸುದ್ದಿಗೆ ಸ್ಪಷ್ಟನೆ ನೀಡಿದ ಕೇಂದ್ರ.

ಭಾರತೀಯರಿಗೆ ಕೇಂದ್ರ ಸರ್ಕಾರದಿಂದ ಉಚಿತವಾಗಿ 239 ರೂಪಾಯಿ ರಿಚಾರ್ಜ್ ನೀಡಲಾಗುತ್ತದೆ ಅನ್ನುವ ಸುದ್ದಿಗೆ ಈಗ ಸ್ಪಷ್ಟನೆ ಸಿಕ್ಕಿದೆ.

Central Government Free Recharge scheme: ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ನಕಲಿ ಸುದ್ದಿಗಳು ವೈರಲ್ ಆಗುತ್ತಿದೆ. ಕೇಂದ್ರದ ಮೋದಿ ಸರ್ಕಾರವು ಸಾಕಷ್ಟು ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ ಎನ್ನುವ ವಿಚಾರಗಳು ವರದಿಯಾಗುತ್ತಿದೆ.

ಇನ್ನು ಇತ್ತೀಚೆಗಷ್ಟೇ ಮೋದಿ  (Narendra Modi) ಸರ್ಕಾರ ಉಚಿತ ಮೊಬೈಲ್ ರಿಚಾರ್ಜ್ (Free Mobile Recharge) ನೀಡಲಾಗಿದೆ ಎನ್ನುವ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ. ಇದೀಗ ಈ ವೈರಲ್ ಸುದ್ದಿಯ ಸತ್ಯಾಸತ್ಯತೆಯ ಬಗ್ಗೆ ಮಾಹಿತಿ ತಿಳಿಯೋಣ.

The news that Indians will be given a free recharge of Rs 239 by the central government has now been clarified.
Image Credit: theconversation

ಭಾರತೀಯರಿಗೆ 239 ರೂ ರಿಚಾರ್ಜ್ ಉಚಿತವಾಗಿ ನೀಡಲಿದೆ ಮೋದಿ ಸರ್ಕಾರ
ಇತ್ತೀಚಿಗೆ ಸ್ಮಾರ್ಟ್ ಫೋನ್ ಗಳ ಬಳಕೆ ಹೆಚ್ಚುತ್ತಿದೆ. ಇನ್ನು ಪ್ರತಿಷ್ಠಿತ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳು ವಿವಿಧ ರೀತಿಯ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ. ಇನ್ನು ಮೊಬೈಲ್ ಬಳಕೆಯಲ್ಲಿ ಸಿಮ್ ಕಾರ್ಡ್ ರಿಚಾರ್ಜ್ ಅಗತ್ಯವಿರುತ್ತದೆ.

ಇನ್ನು ತಿಂಗಳಿಗೆ ಒಮ್ಮೆ ಮೊಬೈಲ್ ಫೋನ್ ಗಳಿಗೆ ರಿಚಾರ್ಜ್ ಮಾಡುವುದು ಅಗತ್ಯವಾಗಿದೆ. ಇನ್ನು ಮೋದಿ ಸರ್ಕಾರ ಇದೀಗ ಭಾರತೀಯರಿಗೆ 239 ರೂ. ರಿಚಾರ್ಜ್ ಉಚಿತ ನೀಡಲಿದೆ ಎನ್ನುವ ಬಗ್ಗೆ ಸಾಕಷ್ಟು ಸುದ್ದಿಗಳು ವೈರಲ್ ಆಗಿದ್ದವು. ಇದೀಗ ಕೇಂದ್ರ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಿದೆ.

Join Nadunudi News WhatsApp Group

ವೈರಲ್ ಸುದ್ದಿಗೆ ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ
ಪಿಐಬಿ  (PIB) ಫ್ಯಾಕ್ಟ್ ಚೆಕ್ ಉಚಿತ ರಿಚಾರ್ಜ್ ನೀಡುವ ಸುದ್ದಿಯ ಬಗ್ಗೆ ಪರಿಶೀಲನೆ ನಡೆಸಿದೆ. 2024 ರ ಚುನಾವಣೆಯಲ್ಲಿ ಹೆಚ್ಚು ಜನರು ಬಿಜೆಪಿ ಮತ ಚಲಾಯಿಸಲು ಮತ್ತು ಮತ್ತೆ ಬಿಜೆಪಿ ಸರ್ಕಾರ ರಚನೆಯಾಗಲು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಭಾರತೀಯ ಬಳಕೆದಾರರಿಗೆ 28 ದಿನಗಳವರೆಗೆ ₹239 ರ ಉಚಿತ ರಿಚಾರ್ಜ್ ನೀಡಲಿದ್ದಾರೆ ಎನ್ನುವ ಸುದ್ದಿ ನಕಲಿ ಎಂದು PIB ಫ್ಯಾಕ್ಟ್ ಚೆಕ್ ಬಹಿರಂಗಪಡಿಸಿದೆ. ನಕಲಿ ಸುದ್ದಿಗಳ ಬಗ್ಗೆ ಎಚ್ಚರವಾಗಿರಿ ಎಂದು ಸರ್ಕಾರ ಎಚ್ಚರಿಕೆ ನೀಡಿದೆ.

Join Nadunudi News WhatsApp Group