Free Scooter: 12 ನೇ ತರಗತಿ ಪಾಸ್ ಆದವರಿಗೆ ಸಿಗಲಿದೆ ಸರ್ಕಾರದಿಂದ ಉಚಿತ ಸ್ಕೂಟರ್, ಷರತ್ತುಗಳು ಅನ್ವಯ.

12 ನೇ ತರಗತಿ ಪಾಸ್ ಆದವರಿಗೆ ಸಿಗಲಿದೆ ಸರ್ಕಾರದಿಂದ ಉಚಿತ ಸ್ಕೂಟರ್

Free Scooter For 12th Pass Students: ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಉನ್ನತಿ ಮತ್ತು ಸಬಲೀಕರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ವಿವಿಧ ಯೋಜನೆಗಳನ್ನು ನಡೆಸಲಾಗುತ್ತಿದೆ. ಈ ಯೋಜನೆಗಳ ಅಡಿಯಲ್ಲಿ ಸರ್ಕಾರವು ಮಹಿಳೆಯರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿದೆ. ಇದೀಗ ಈ ರಾಜ್ಯ ಸರ್ಕಾರ ದ್ವಿತೀಯ ಪಿಯುಸಿ ಮುಗಿಸಿರುವ ವಿದ್ಯಾರ್ಥಿಗಳಿಗೆ ವಿಶೇಷ ಯೋಜನೆಯನ್ನು ಘೋಷಿಸಿದೆ.

ಈ ಯೋಜನೆಯ ಮೂಲಕ ದ್ವಿತೀಯ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳು ಹೆಚ್ಚಿನ ಲಾಭವನ್ನು ಪಡೆಯಬಹುದು. ಇನ್ನು 2023-2024 ರ ಬಜೆಟ್ ಅನ್ನು ಮಂಡಿಸುವಾಗ ಈ ಯೋಜನೆಯನ್ನು ರಾಜ್ಯ ಸರ್ಕಾರವು ಘೋಷಿಸಿದೆ. ಸರ್ಕಾರ ಪರಿಚಯಿಸಿರುವ ಯೋಜನೆ ಯಾವುದು..? ಯೋಜನೆಯಡಿ ಏನು ಪ್ರಯೋಜನ ಸಿಗಲಿದೆ..? ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Free Scooter For 12th Pass Students
Image Credit: Patrika

12 ನೇ ತರಗತಿ ಪಾಸ್ ಆದವರಿಗೆ ಸಿಗಲಿದೆ ಸರ್ಕಾರದಿಂದ ಉಚಿತ ಸ್ಕೂಟರ್
ಶಿಕ್ಷಣ ಕ್ಷೇತ್ರದಲ್ಲಿ ಹೆಣ್ಣುಮಕ್ಕಳನ್ನು ಉತ್ತೇಜಿಸುವ ಮತ್ತು ಅವರ ಭವಿಷ್ಯವನ್ನು ಉಜ್ವಲಗೊಳಿಸುವ ಉದ್ದೇಶದಿಂದ ಮಧ್ಯಪ್ರದೇಶ ಸರ್ಕಾರವು ಈ ಯೋಜನೆಯಡಿಯಲ್ಲಿ ಹೆಣ್ಣುಮಕ್ಕಳಿಗೆ ಉಚಿತ ಸ್ಕೂಟಿ ನೀಡುತ್ತದೆ. ಮುಖ್ಯಮಂತ್ರಿ ಬಾಲಕಿಯರ ಸ್ಕೂಟಿ ಯೋಜನೆಯಡಿ ರಾಜ್ಯದ 12ನೇ ತರಗತಿ ತೇರ್ಗಡೆಯಾದ ಬಾಲಕಿಯರಿಗೆ ಉಚಿತ ಸ್ಕೂಟರ್ ನೀಡಲಾಗುತ್ತಿದೆ. 12 ನೇ ತರಗತಿಯಲ್ಲಿ ಯಾರು ಹೆಚ್ಚು ಅಂಕಗಳನ್ನು ಅಂತವರಿಗೆ ಉಚಿತ ಸ್ಕೂಟಿ ಸಿಗಲಿದೆ.

ಮಧ್ಯಪ್ರದೇಶ ಸರ್ಕಾರವು ಗರ್ಲ್ಸ್ ಸ್ಕೂಟಿ ಯೋಜನೆಯಡಿಯಲ್ಲಿ ಪ್ರತಿ ವರ್ಷ ರಾಜ್ಯದ 5 ಸಾವಿರಕ್ಕೂ ಹೆಚ್ಚು ಹೆಣ್ಣುಮಕ್ಕಳಿಗೆ ಸ್ಕೂಟರ್ ಪ್ರಯೋಜನವನ್ನು ನೀಡಲಾಗುತ್ತದೆ ನೀವು ಮಧ್ಯಪ್ರದೇಶದಲ್ಲಿ ವಾಸಿಸುವ ಬ್ರಾಹ್ಮಿ ಜಾತಿಯ ಹುಡುಗಿಯಾಗಿದ್ದರೆ ಅಥವಾ ನಿಮ್ಮ ಮಗಳು 12 ನೇ ತರಗತಿಯಲ್ಲಿ ಓದುತ್ತಿದ್ದರೆ, ಅಂತವರಿಗೆ ಈ ಯೋಜನೆ ಲಭ್ಯವಾಗಲಿದೆ.

Free Scooty Distribution
Image Credit: Informalnewz

ಯೋಜನೆಯ ಬಗ್ಗೆ ತಿಳಿದುಕೊಳ್ಳಿ
ಮಾರ್ಚ್ 1, 2023 ರಂದು ಮಧ್ಯಪ್ರದೇಶ ಸರ್ಕಾರದ ಹಣಕಾಸು ಸಚಿವರು ರಾಜ್ಯ ಸರ್ಕಾರದ ಹಣಕಾಸು ಬಜೆಟ್ 2023-2024 ಅನ್ನು ಮಂಡಿಸಿದ್ದರು. ಈ ಬಾರಿಯ ಬಜೆಟ್‌ ನಲ್ಲಿ ಹಣಕಾಸು ಸಚಿವರು ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸಲು ಮುಖ್ಯಮಂತ್ರಿ ಬಾಲಿಕಾ ಸ್ಕೂಟಿ ಯೋಜನೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದರು. ಈ ಯೋಜನೆಯಡಿ 12 ನೇ ತರಗತಿಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ರಾಜ್ಯದ ಹೆಣ್ಣುಮಕ್ಕಳಿಗೆ ರಾಜ್ಯ ಸರ್ಕಾರವು ಉಚಿತ ಸ್ಕೂಟಿ ನೀಡುತ್ತದೆ.

Join Nadunudi News WhatsApp Group

ಮುಖ್ಯಮಂತ್ರಿ ಬಾಲಿಕಾ ಸ್ಕೂಟಿ ಯೋಜನೆಯ ಮೂಲಕ ರಾಜ್ಯದಲ್ಲಿ 12ನೇ ತರಗತಿ ಫಲಿತಾಂಶ ಪ್ರಕಟವಾದ ನಂತರ ಪ್ರತಿ ವರ್ಷ ಸುಮಾರು 5000 ಬಾಲಕಿಯರಿಗೆ ಉಚಿತ ಎಲೆಕ್ಟ್ರಿಕ್ ಸ್ಕೂಟರ್‌ ಗಳನ್ನು ನೀಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದರಿಂದ ರಾಜ್ಯದ ಇತರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಉಚಿತ ಸ್ಕೂಟಿ ಯೋಜನೆ 2024 ರ ಮುಖ್ಯ ಉದ್ದೇಶವೆಂದರೆ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಹುಡುಗಿಯರಿಗೆ ಉಚಿತ ಸ್ಕೂಟಿ ನೀಡುವುದಾಗಿದೆ.

MP Free Scooty Yojana 2024
Image Credit: Oneindia

Join Nadunudi News WhatsApp Group