Vishwakarma Benefits: ಈ ಯೋಜನೆಯಲ್ಲಿ ಮಹಿಳೆಯರಿಗೆ ಸಿಗಲಿದೆ ಉಚಿತ ಹೊಲಿಗೆ ಯಂತ್ರ ಮತ್ತು ಕಡಿಮೆ ಬಡ್ಡಿಗೆ ಸಾಲ.

ಈ ಯೋಜನೆಯಡಿ ಮಹಿಳೆಯರು ಉಚಿತ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಬಹುದು

Free Sewing Machine For Women’s: ದೇಶದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕಳೆದ ವರ್ಷ Vishwakarma ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಈ ಯೋಜನೆಯಡಿ ದೇಶದ ಬಡ ಜನತೆಗೆ ಸಹಾಯವಾಗಲು ಸಾಕಷ್ಟು ಸೌಲಭ್ಯ ನೀಡಲು ಮೋದಿ ಸರ್ಕಾರ ಮುಂದಾಗಿದೆ.
ಸದ್ಯ ಮಹಿಳೆಯಯರು ಸ್ವಉದ್ಯೋಗವನ್ನು ಕಂಡುಕೊಳ್ಳಲು ಈ ವಿಶೇಷ ಯೋಜನೆಯಯು ಸಹಕಾರಿಯಾಗಲಿದೆ.

ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯವನ್ನು ನೀಡುವ ಉದ್ದೇಶದಿಂದ ವಿಶ್ವಕರ್ಮ ಯೋಜನೆಯಡಿ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರವನ್ನು ನೀಡಲು ನಿರ್ಧರಿಸಿದೆ. ಈ ಯೋಜನೆಯಡಿ ಮಹಿಳೆಯರು ಉಚಿತ ಹೊಲಿಗೆ ಯಂತ್ರವನ್ನು ಪಡೆಯುವ ಮೂಲಕ ತಮ್ಮ ಜೀವನವನ್ನು ಕಟ್ಟಿಕೊಳ್ಳಬಹುದು.

Free Sewing Machine For Women's
Image Credit: Original Source

ಕೇಂದ್ರದಿಂದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಯೋಜನೆ ಜಾರಿ
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಅಂಗವಾಗಿ ಕೇಂದ್ರ ಸರ್ಕಾರವು ಉಚಿತ ಹೊಲಿಗೆ ಯಂತ್ರ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಇದರ ಅಡಿಯಲ್ಲಿ, ಹೊಲಿಗೆ ಯಂತ್ರವನ್ನು ಖರೀದಿಸಲು ಕೇಂದ್ರವು ರೂ. 15,000 ರೂ ನೀಡುತ್ತದೆ.

ಈ ಹಣವನ್ನು ನೇರವಾಗಿ ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಇದಲ್ಲದೆ ಸ್ವಂತ ಹೊಲಿಗೆ ಯಂತ್ರವನ್ನು ಇಟ್ಟುಕೊಂಡು ಉದ್ಯೋಗ ಮಾಡಲು ಬಯಸುವವರಿಗೆ 20,000 ರೂ. ಸಾಲ ಸೌಲಭ್ಯ ನೀಡಲು ಸರ್ಕಾರ ನಿರ್ಧರಿಸಿದೆ. ಇದರಿಂದಾಗಿ ಹೊಲಿಗೆ ಕೆಲಸ ಮಾಡಿ ಮಹಿಳೆಯರು ತನ್ನ ಆದಾಯವನ್ನು ತಾವೇ ಗಳಿಸಿಕೊಳ್ಳಬಹುದು.

ಈ ಯೋಜನೆಯಲ್ಲಿ ಮಹಿಳೆಯರಿಗೆ ಸಿಗಲಿದೆ ಉಚಿತ ಹೊಲಿಗೆ ಯಂತ್ರ ಮತ್ತು ಕಡಿಮೆ ಬಡ್ಡಿಗೆ ಸಾಲ
ಹೊಸ ಉದ್ಯಮವನ್ನು ಆರಂಭಿಸಲು ಬಯಸುವವರನ್ನು ಉತ್ತೇಜಿಸಲು ಸರ್ಕಾರ ವಿಶ್ವಕರ್ಮ ಯೋಜನೆಯಡಿ ಉಚಿತ ಹೋಳಿಗೆ ಯಂತ್ರವನ್ನು ನೀಡಲು ಮುಂದಾಗಿದೆ. ಇನ್ನು ಅಧಿಕೃತ ವೆಬ್ ಸೈಟ್ https://pmvishwakarma.gov.in ಗೆ ಭೇಟಿ ನೀಡುವ ಮೂಲಕ ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಬಹುದು.

Join Nadunudi News WhatsApp Group

ಉಚಿತ ಹೊಲಿಗೆ ಯಂತ್ರದ ಜೊತೆಗೆ ಮಹಿಳೆಯರು ತಮ್ಮ ಸ್ವಂತ ಉದ್ಯೋಗಕ್ಕೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಪಾಸ್ ಪೋರ್ಟ್ ಸೈಸ್ ಫೋಟೋ, ಜಾತಿ ಪ್ರಮಾಣ ಪತ್ರ, ಹೊಲಿಗೆ ತರಬೇತಿ ಪಡೆದ ಪ್ರಮಾಣ ಪತ್ರ, Ration Card ಅಥವಾ ವೋಟರ್ ಐಡಿಯನ್ನು ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

Free Sewing Machine Scheme Update
Image Credit: News Guru Kannada

ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಹತೆಗಳೇನು..?
•ಈ ಯೋಜನೆಯಡಿ ಅರ್ಜಿ ಸಲ್ಲಿಸುವ ಮಹಿಳೆಯರ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು.

•ಅರ್ಜಿದಾರರು ಭಾರತ ದೇಶದ ಪ್ರಜೆಯಾಗಿದ್ದು ಆರ್ಥಿಕ ದುರ್ಬಲರಾಗಿರಬೇಕು.

•ಮಹಿಳೆಯ ಕುಟುಂಬದ ವಾರ್ಷಿಕ ಆದಾಯವು 1,20,000 ರೂಪಾಯಿ ಮೀರಿರಬಾರದು.

•ಇನ್ನು ವಿಧವೆ ಮಹಿಳೆಯರು ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದು.

Join Nadunudi News WhatsApp Group