Silai Machine Yojana: ಕೇಂದ್ರದ ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ…? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಕೇಂದ್ರ ಸರ್ಕಾರದಿಂದ ಉಚಿತ ಹೊಲಿಗೆ ಯಂತ್ರಕ್ಕೆ ಈ ರೀತಿಯಲ್ಲಿ ಅರ್ಜಿ ಸಲ್ಲಿಸಿ

Free Silai Machine Yojana 2024: ಮಹಿಳಾ ಸಬಲೀಕರಣ ಮತ್ತು ಮಹಿಳೆಯರು ಸ್ವಾವಲಂಬಿಯಾಗಲು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಭಾರತ ಸರ್ಕಾರವು ಉಚಿತ ಹೊಲಿಗೆ ಯಂತ್ರ ಯೋಜನೆಯನ್ನು ಪ್ರಾರಂಭಿಸಿದೆ.

ಕೇಂದ್ರದ ಈ ಯೋಜನೆಯಡಿ ಮಹಿಳೆಯರು ಉಚಿತ ಹೊಲಿಗೆ ಯಂತ್ರವನ್ನು ಪಡೆಯುವ ಮೂಲಕ ತಮಗೂ ತಮ್ಮ ಕುಟುಂಬಕ್ಕೂ ಆದಾಯವನ್ನು ಗಳಿಸಿಕೊಳ್ಳಬಹುದು. ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಈ ಯೋಜನೆಯು ಹೆಚ್ಚು ಸಹಕಾರಿಯಾಗಲಿದೆ.

Free Silai Machine Yojana 2024
Image Credit: Corpseed

ಕೇಂದ್ರದಿಂದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಅಂಗವಾಗಿ ಕೇಂದ್ರ ಸರ್ಕಾರವು ಉಚಿತ ಹೊಲಿಗೆ ಯಂತ್ರ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಇದರ ಅಡಿಯಲ್ಲಿ, ಹೊಲಿಗೆ ಯಂತ್ರವನ್ನು ಖರೀದಿಸಲು ಕೇಂದ್ರವು ರೂ. 15,000 ರೂ ನೀಡುತ್ತದೆ. ಈ ಹಣವನ್ನು ನೇರವಾಗಿ ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

ಇದಲ್ಲದೆ ಸ್ವಂತ ಹೊಲಿಗೆ ಯಂತ್ರವನ್ನು ಇಟ್ಟುಕೊಂಡು ಉದ್ಯೋಗ ಮಾಡಲು ಬಯಸುವವರಿಗೆ 20,000 ರೂ. ಸಾಲ ಸೌಲಭ್ಯ ನೀಡಲು ಸರ್ಕಾರ ನಿರ್ಧರಿಸಿದೆ. ಇದರಿಂದಾಗಿ ಹೊಲಿಗೆ ಕೆಲಸ ಮಾಡಿ ಮಹಿಳೆಯರು ತನ್ನ ಆದಾಯವನ್ನು ತಾವೇ ಗಳಿಸಿಕೊಳ್ಳಬಹುದು.

Free Silai Machine Yojana In India
Image Credit: upnews

ಅಗತ್ಯ ದಾಖಲೆಗಳು…?
*ಆಧಾರ್ ಕಾರ್ಡ್
*ಪಾನ್ ಕಾರ್ಡ್
*ಬ್ಯಾಂಕ್ ಪಾಸ್ ಬುಕ್
*ಆದಾಯ ಪ್ರಮಾಣಪತ್ರ
*ವಿಳಾಸ ಪುರಾವೆ
*ಜಾತಿ ಪ್ರಮಾಣಪತ್ರ
*ಪಡಿತರ ಚೀಟಿ
*ಮೊಬೈಲ್ ನಂಬರ್
*ಭಾವಚಿತ್ರ

Join Nadunudi News WhatsApp Group

ಅರ್ಹತೆ…?
ಈ ಯೋಜನೆಗೆ ಅರ್ಜಿ ಸಲ್ಲಿಸುವ ಮಹಿಳೆಯು ಭಾರತದ ನಿವಾಸಿಯಾಗಿರಬೇಕು ಮತ್ತು ಮಹಿಳೆಯ ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ ಉದ್ಯೋಗದಲ್ಲಿ ಇರಬಾರದು.

Free Silai Machine Yojana
Image Credit: Fastjobsearchers

Join Nadunudi News WhatsApp Group