Solar Rooftop: ಕೇಂದ್ರದಿಂದ 300 ಯೂನಿಟ್ ಉಚಿತ ಕರೆಂಟ್ ಪಡೆಯುವವರಿಗೆ ಹೊಸ ರೂಲ್ಸ್, ಷರತ್ತು ಹಾಕಿದ ಕೇಂದ್ರ

ಈ ಯೋಜನೆಯಡಿ ಉಚಿತ ವಿದ್ಯುತ್ ಪಡೆಯಲು ಏನೆಲ್ಲಾ ಮಾಡಬೇಕಾಗುತ್ತದೆ ಎನ್ನುವ ಬಗ್ಗೆ ಮಾಹಿತಿ.

Free Solar Rooftop Scheme: ಕೇಂದ್ರ ಮೋದಿ ಸರ್ಕಾರ ಇದೀಗ ದೇಶದ ಬಡ ಜನತೆಗಾಗಿ ಉಚಿತ ವಿದ್ಯುತ್ ಅನ್ನು ನೀಡುವ ಗುರಿಯನ್ನು ಹೊಂದಿದೆ. ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಗೃಹ ಜ್ಯೋತಿ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯಡಿ ಅರ್ಹರಿಗೆ 200 ಯುನಿಟ್ ಉಚಿತ ವಿದ್ಯುತ್ ಅನ್ನು ನೀಡಲಾಗುತ್ತಿದೆ. ಆದರೆ ಈ ಯೋಜನೆಯಡಿ ರಾಜ್ಯದ ಪ್ರತಿಯೊಂದು ಕುಟುಂಬವು ಯೋಜನೆಯ ಲಾಭವನ್ನು ಪಡೆಯುತ್ತಿಲ್ಲ.

ಅರ್ಹರಿಗೆ ಮಾತ್ರ ಉಚಿತ ವಿದ್ಯುತ್ ನ ಲಾಭ ದೊರೆಯುತ್ತಿದೆ ಎನ್ನಬಹುದು. ಆದರೆ ಇನ್ನುಮುಂದೆ ದೇಶದ ಪ್ರತಿಯೊಬ್ಬರೂ ಕೂಡ ಪ್ರಧಾನಿ ಮೋದಿ ಅವರು ಪರಿಚಯಿಸಿರುವ Surya Ghar Muft Bijli ಯೋಜನೆಯ ಮೂಲಕ ಉಚಿತ ವಿದ್ಯುತ್ ಅನ್ನು ಪಡೆಯಲು ಸಾಧ್ಯವಾಗುತ್ತದೆ. ಇದೀಗ ನಾವು ಈ ಯೋಜನೆಯಡಿ ಲಾಭ ಪಡೆಯಲು ಏನೆಲ್ಲಾ ಮಾಡಬೇಕಾಗುತ್ತದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Free Solar Rooftop Scheme
Image Credit: Deccanherald

ದೇಶದ ಜನತೆಗಾಗಿ ರಾಜ್ಯ ಸರ್ಕಾರದಿಂದ ಹೊಸ ಯೋಜನೆ
ಕೇಂದ್ರದ ಮೋದಿ ಸರ್ಕಾರ ಪರಿಚಯಿಸಿರುವ Surya Ghar Muft Bijli ಯೋಜನೆಯ ಅಡಿಯಲ್ಲಿ ದೇಶದ ಜನತೆಗೆ ಉಚಿತವಾಗಿ 300 ಯುನಿಟ್ ವಿದ್ಯುತ್ ಅನ್ನು ನೀಡಲಾಗುತ್ತದೆ. ಈ ಯೋಜನೆಯ ವಿಶೇಷವೆಂದರೆ, ಈ ಯೋಜನೆಯಡಿ ಉಚಿತ ವಿದ್ಯುತ್ ಅನ್ನು ಪಡೆಯುವುದರ ಜೊತೆಗೆ ಫಲಾನುಭವಿಗಳು ಆದಾಯವನ್ನು ಕೂಡ ಗಳಿಸಬಹುದು. ಈಗಾಗಲೇ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಗಾಗಿ 75,021 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಯೋಜನೆಯ ಲಾಭ ಪಡೆಯಲು ಅರ್ಜಿ ಆಹ್ವಾನ ಕೂಡ ಮಾಡಲಾಗಿದೆ.

Surya Ghar Muft Bijli ಯೋಜನೆಯ ಪ್ರಯೋಜನವೇನು…?
PM ಸೂರ್ಯ ಘರ್ ಯೋಜನೆಯಡಿಯಲ್ಲಿ 2 ಕಿಲೋವ್ಯಾಟ್ ವರೆಗಿನ ಸೋಲಾರ್ ಪ್ಲಾಂಟ್‌ ಗಳಿಗೆ ಶೇ.60 ಸಬ್ಸಿಡಿ ಮತ್ತು 1 ಕಿ.ವಾ.ಗೆ ಶೇ.40 ಸಬ್ಸಿಡಿಯನ್ನು ಸರ್ಕಾರ ನೀಡುತ್ತದೆ. ಸೋಲಾರ್ ಪ್ಲಾಂಟ್ ಸ್ಥಾಪಿಸಲು ಪ್ರತಿ ಕುಟುಂಬಕ್ಕೆ 78,000 ಸಹಾಯಧನ ಸಿಗುತ್ತದೆ. ಪ್ರಧಾನ ಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಈ ಯೋಜನೆಯಡಿ, 1 ಕೋಟಿ ಜನರಿಗೆ ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್ ಜೊತೆಗೆ ವರ್ಷಕ್ಕೆ 15,000 ರೂ. ಸಹಾಯಧನದ ಲಾಭ ಸಿಗಲಿದೆ. ಇನ್ನು 300 ಯೂನಿಟ್ ಉಚಿತ ವಿದ್ಯುತ್ ಪಡೆಯಲು https://pmsuryaghar.gov.in/ ನ ಅಧಿಕೃತ Web Site ಗೆ ಭೇಟಿ ನೀಡಿ ಉಚಿತ ವಿದ್ಯುತ್ ಗಾಗಿ ಅರ್ಜಿ ಸಲ್ಲಿಸಬಹುದು.

Join Nadunudi News WhatsApp Group

Surya Ghar Muft Bijli Yojana In India
Image Credit: Business Today

ಯೋಜನೆಯ ಲಾಭ ಪಡೆಯಲು ಈ ಷರತ್ತುಗಳು ಅನ್ವಯ
•ಉಚಿತ ವಿದ್ಯುತ್ ನ ಲಾಭ ಪಡೆಯಲು ಅರ್ಜಿದಾರರು ಭಾರತೀಯ ನಿವಾಸಿ ಆಗಿರಬೇಕು.

•ಕುಟುಂಬದ ಯಾವುದೇ ಸದಸ್ಯ ಸರ್ಕಾರೀ ನೌಕರಿ ಹೊಂದಿರಬಾರದು.

•ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವುದು ಕಡ್ಡಾಯ.

•ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ 1 .5 ಲಕ್ಷಕ್ಕಿಂತ ಕಡಿಮೆ ಇರಬೇಕು

Join Nadunudi News WhatsApp Group