Garlic Price: ದೇಶದಲ್ಲಿ ಐತಿಹಾಸಿಕ ಏರಿಕೆ ಕಂಡ ಬೆಳ್ಳುಳ್ಳಿ ಬೆಲೆ, ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ ಬೆಳ್ಳುಳ್ಳಿ ಬೆಲೆ

ಈ ಕಾರಣಕ್ಕೆ ದೇಶದಲ್ಲಿ ಐತಿಹಾಸಿಕ್ ಏರಿಕೆ ಕಂಡ ಬೆಳ್ಳುಳ್ಳಿ ಬೆಲೆ

Garlic Price Hike: ದೇಶದಲ್ಲಿ ಬೆಲೆ ಏರಿಕೆಯ ಕಾರಣ ಜನರು ಕಂಗಾಲಾಗಿದ್ದಾರೆ ಎಂದು ಹೇಳಬಹುದು. ಯಾವುದೇ ವಸ್ತುವನ್ನು ಖರೀದಿಸಬೇಕಿದ್ದರು ಕೂಡ ಅಧಿಕ ಹಣವನ್ನು ನೀಡಬೇಕಾದ ಪರಿಸ್ಥಿತಿ ಬಂದೊದಗಿದೆ. ಪ್ರತಿನಿತ್ಯ ಬಳಸುವ ವಸ್ತುಗಳ ಬೆಲೆಯಂತು ಗಗನಕ್ಕೇರುತ್ತಿದೆ. ಜನರು ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಲು ಹಿಂದೇಟು ಹಾಕುವಂತಾಗಿದೆ. ಹಾಲು, ಮೊಸರು, ತರಕಾರಿ, ಬೇಳೆಕಾಳುಗಳಿಂದ ಹಿಡಿದು Gas ಬೆಲೆ ಕೂಡ ಹೆಚ್ಚುತ್ತಾ ಬಂದಿದೆ.

ಇನ್ನು ಕೆಲ ತಿಂಗಳುಗಳ ಹಿಂದೆಯಷ್ಟೇ ಅಡುಗೆಗೆ ಮುಖ್ಯವಾಗಿರುವ ಟೊಮೇಟೊ, ಈರುಳ್ಳಿ ಬೆಲೆ ಬಾರಿ ಏರಿಕೆ ಕಂಡಿತ್ತು. ಒಂದು ಕೆಜಿ ಟೊಮೊಟೊ, ಈರುಳ್ಳಿ ಬೆಲೆ ಊಹೆಗೂ ಮೀರಿತ್ತು. ಸದ್ಯ ಈ ಎರಡರ ಬೆಲೆ ಯಥಾಸ್ಥಿತಿ ತಲುಪಿದೆ ಎನ್ನಬಹುದು. ಆದರೆ ಸದ್ಯ ಅಡುಗೆಗೆ ಅಗತ್ಯವಾದ ಇನ್ನೊಂದು ವಸ್ತುವಿನ ಬೆಲೆ ಬಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಸದ್ಯ Social Media ದಲ್ಲಿ Trend ನಲ್ಲಿರುವ ಬೆಳ್ಳುಳ್ಳಿ ಕಬಾಬ್ ಗೆ ಅಗತ್ಯವಿರುವ ಬೆಳ್ಳುಳ್ಳಿ (Garlic ) ಬೆಲೆ ಗಗನಕ್ಕೇರಿಗೆ.

Garlic Price Hike In India
Image Credit: Jagran

ಬರೋಬ್ಬರಿ ಅರ್ಧ ಸಾವಿರಕ್ಕೆ ಏರಿದೆ ಬೆಳ್ಳುಳ್ಳಿ ಪ್ರೈಸ್
ಹೌದು, ಕಳೆದ ಎರಡು ಮೂರು ತಿಂಗಳಿನಿಂದ Garlic ಬೆಲೆ ಬಾರಿ ಹೆಚ್ಚಾಗುತ್ತಿದೆ. ಬೆಳ್ಳುಳ್ಳಿ ಬೆಲೆಯ ಏರಿಕೆಯ ಪ್ರಮಾಣ ಇನ್ನು ಕಡಿಮೆ ಆಗುತ್ತಿಲ್ಲ. ಈ ಹಿಂದೆ Garlic ಕೆಜಿಗೆ 150 ರಿಂದ 200 ರೂ. ಲಭ್ಯವಾಗುತ್ತಿತ್ತು. ಆದರೆ ಇದೀಗ ಬೆಳ್ಳುಳ್ಳಿ ಕೈಗೆಟುಕದಂತಾಗಿದೆ. ಅಡುಗೆಗೆ Garlic ಬಳಸಲು ಸಾಧ್ಯವಾಗದ ಪರಿಸ್ಥಿತಿ ತಲುಪಿದೆ ಎಂದರೆ ತಪ್ಪಾಗಲಾರದು.

ದೆಹಲಿ, ಲಕ್ನೋ, ಭೋಪಾಲ್, ಪಾಟ್ನಾ ಸೇರಿದಂತೆ ಬಹುತೇಕ ನಗರಗಳಲ್ಲಿ ಬೆಳ್ಳುಳ್ಳಿ ಕೆಜಿಗೆ ಅರ್ಧ ಸಾವಿರ ತಲುಪಿದೆ. ಬಿಡಿಸಿದ ಬೆಳ್ಳುಳ್ಳಿ ಬೆಲೆ 540 ರೂ. ಆದರೆ ಇಡೀ ಬೆಳ್ಳುಳ್ಳಿ ಬೆಲೆ ಮಾರುಕಟ್ಟೆಯಲ್ಲಿ 492 ರೂ. ಆಗಿದೆ. ಇನ್ನು ಬೆಳ್ಳುಳ್ಳಿಯ ಬೆಲೆ ಇಷ್ಟೊಂದು ದುಬಾರಿಯಾಗಲು ಕಾರಣವೇನು..? ಎನ್ನುವ ಬಗ್ಗೆ ನಾವೀಗ ಮಾಹಿತಿ ತಿಳಿಯೋಣ.

Garlic Price Hike Update
Image Credit: NTV Telugu

ಬೆಳ್ಳುಳ್ಳಿ ಬೆಲೆ ಏರಿಕೆಗೆ ಕಾರಣವೇನು ಗೋತ್ತಾ..?
ಹೊಸ ಬೆಳೆ ಬರಲು ವಿಳಂಬ ಹಾಗೂ ಇಳುವರಿ ಕೊರತೆಯಿಂದ Garlic ಬೆಲೆ ಹೆಚ್ಚಾಗಿದೆ. ಬದಲಾಗುತ್ತಿರುವ ಹವಾಮಾನವು Garlic ಬೆಳೆಗಳ ಮೇಲೆ ಪರಿಣಾಮ ಬೀರಿದೆ. ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ರೈತರನ್ನು ಕಾಡಿದೆ, ಮಳೆ ಸರಿಯಾಗಿ ಆಗದ ಕಾರಣ ಬೆಳೆಗಳೆಲ್ಲಾ ನಾಶವಾಗಿದೆ. ಈ ಬೆಳೆ ನಾಶ ಬೆಲೆ ಏರಿಕೆಗೆ ಮುಖ್ಯ ಕಾರಣ ಎನ್ನಬಹುದಾಗಿದೆ. ಅತಿವೃಷ್ಟಿ ಮತ್ತು ಅನಾವೃಷ್ಟಿ ಎರಡರಿಂದಲೂ ಬೆಳ್ಳುಳ್ಳಿ ಬೆಳೆ ನಾಶವಾಗಿರುವುದರಿಂದ ಸಹಜವಾಗಿಯೇ Garlic ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ Garlic ಪೂರೈಕೆ ಸರಿಯಾಗಿ ಆಗುವವರೆಗೂ ಬೆಲೆ ಏರಿಕೆ ತಪ್ಪಿದ್ದಲ್ಲ ಎನ್ನಬಹುದು.

Join Nadunudi News WhatsApp Group

Join Nadunudi News WhatsApp Group