Garlic Price: ಜನಸಾಮಾನ್ಯರಿಗೆ ವರ್ಷದ ಮೊದಲ ತಿಂಗಳೇ ಬಿಗ್ ಶಾಕ್, ಬೆಳ್ಳುಳ್ಳಿ ದರದಲ್ಲಿ ದಾಖಲೆಯ ಏರಿಕೆ

ಬೆಳ್ಳುಳ್ಳಿ ದರದಲ್ಲಿ ಇನ್ನಷ್ಟು ಏರಿಕೆ, ಬೆಲೆ ಏರಿಕೆಯಿಂದ ತತ್ತರಿಸಿದ ಜನ ಸಾಮಾನ್ಯರು, ಯಾವಾಗ ಕಡಿಮೆ ಆಗಲಿದೆ ಬೆಳ್ಳುಳ್ಳಿ ದರ?

Garlic Price Hike: ದಿನದಿಂದ ದಿನಕ್ಕೆ ಒಂದೊಂದೇ ದಿನಸಿ ಸಾಮಗ್ರಿಗಳ ಬೆಲೆ ಏರಿಕೆ ಆಗುತ್ತಿದ್ದು, ಅದರಲ್ಲಿ ಬೆಳ್ಳುಳ್ಳಿ ಮಿತಿ ದಾಟಿ ಹೋಗಿ ಹಲವು ಸಮಯವೇ ಕಳೆದಿದೆ. ಬೆಳ್ಳುಳಿ ದರ ಏರಿಕೆ ಆಗಿ ಹಲವು ದಿನ ಕಳೆದರು ಸ್ವಲ್ಪವು ಬೆಲೆ ಇಳಿಕೆ ಆಗಿಲ್ಲ. ಅಷ್ಟೇ ಅಲ್ಲದೆ ಇನ್ನು ಬೆಲೆ ಇಳಿಕೆ ಆಗುವ ಯಾವುದೇ ಲಕ್ಷಣಗಳು ಕೂಡ ಇಲ್ಲ ಎನ್ನಲಾಗುತ್ತಿದೆ.

ಈ ಬೆಲೆ ಏರಿಕೆಗಳಿಂದಾಗಿ ಜನ ಸಾಮಾನ್ಯರು ತತ್ತರಿಸಿ ಹೋಗುತ್ತಿದ್ದಾರೆ. ಸಾಮಾನ್ಯವಾಗಿ ಯಾವುದೇ ಸಾಮಗ್ರಿ ಬೆಲೆ ಏರಿಕೆ ಆದರೂ ಸ್ವಲ್ಪ ಸಮಯದ ನಂತರ ಬೆಲೆ ಇಳಿಕೆ ಆಗುತ್ತಾ ಬರುತ್ತದೆ ಆದರೆ ಬೆಳ್ಳುಳ್ಳಿ ಮಾತ್ರ ಇನ್ನು ಇಳಿಕೆಯತ್ತ ಸಾಗುತ್ತಿಲ್ಲ.

Garlic Price Hike
Image Credit: Times Of India

ಗಗನಕ್ಕೇರಿದ ಬೆಳ್ಳುಳ್ಳಿ ದರ

ರಾಜ್ಯದಲ್ಲಿ ಟೊಮೆಟೊ, ಈರುಳ್ಳಿ , ಇನ್ನಿತರ ಬೇಳೆ ಕಾಳು ಹಾಗು ಹಾಲು ದರಗಳ ಏರಿಕೆ ಜೊತೆಗೆ ಬೆಳ್ಳುಳ್ಳಿ ದರ ಕೂಡ ಗಗನಕ್ಕೇರಿದ್ದನ್ನು ನಾವು ನೋಡಿದ್ದೇವೆ. ಇನ್ನಿತರ ದರಗಳು ಸ್ವಲ್ಪ ಮಟ್ಟಿಗೆ ಕಡಿಮೆ ಆದರೂ, ಬೆಳ್ಳುಳಿ ದರ ಮಾತ್ರ ಒಂದು ಸ್ವಲ್ಪ ನು ಕಡಿಮೆ ಆಗಿಲ್ಲ. ಬೆಳ್ಳುಳ್ಳಿ ದರ ಕೆಜಿಗೆ 400 ರಿಂದ 500 ರೂ. ತಲುಪಿದೆ. ಕಳೆದ ವಾರ ಕೆ.ಜಿಗೆ 200 ರಿಂದ 300 ರೂ. ಇದ್ದ ಬೆಳ್ಳುಳ್ಳಿ ದರ ಈಗ 400- 500 ರೂ.ವರೆಗೆ ಏರಿಕೆಯಾಗಿದೆ. ಮುಂದಿನ ಫೆಬ್ರವರಿವರೆಗೂ ಬೆಳ್ಳುಳ್ಳಿ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು.

Garlic Price Latest Update
Image Credit: tv9telugu

ಮಳೆ ಕೊರತೆಯಿಂದಾಗಿ ಬೆಳ್ಳುಳಿ ದರದಲ್ಲಿ ಏರಿಕೆ

Join Nadunudi News WhatsApp Group

ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ರೈತರನ್ನು ಕಾಡಿದೆ, ಮಳೆ ಸರಿಯಾಗಿ ಆಗದ ಕಾರಣ ಬೆಳೆಗಳೆಲ್ಲಾ ನಾಶವಾಗಿದೆ. ಈ ಬೆಳೆ ನಾಶ ಬೆಲೆ ಏರಿಕೆಗೆ ಮುಖ್ಯ ಕಾರಣ ಎನ್ನಬಹುದಾಗಿದೆ. ಅತಿವೃಷ್ಟಿ ಮತ್ತು ಅನಾವೃಷ್ಟಿ ಎರಡರಿಂದಲೂ ಬೆಳ್ಳುಳ್ಳಿ ಬೆಳೆ ನಾಶವಾಗಿರುವುದರಿಂದ ಸಹಜವಾಗಿಯೇ ಬೆಳ್ಳುಳ್ಳಿ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ. ಕಳೆದ ಎರಡು ತಿಂಗಳಿನಿಂದ ಏರುಗತಿಯಲ್ಲೇ ಇರುವ ಬೆಳ್ಳುಳ್ಳಿ ದರ ಇದೀಗ ಒಂದು ಕೆಜಿಗೆ 400 ರಿಂದ 500 ರೂ. ವರೆಗೆ ಮುಟ್ಟಿದೆ. ಟೊಮೆಟೊ, ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಬಂದ ಬೆನ್ನಲ್ಲೇ ಬೆಳ್ಳುಳ್ಳಿ ಬೆಲೆಯಲ್ಲಿ ಏರಿಕೆಯಾಗಿರುವುದು ಜನಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ ಇನ್ನಷ್ಟು ತಾಕಿದೆ.

Join Nadunudi News WhatsApp Group