Garlic Price: ಈರುಳ್ಳಿ ಬೆನ್ನಲ್ಲೇ ಬೆಳ್ಳುಳ್ಳಿ ದರದಲ್ಲಿ ಐತಿಹಾಸಿಕ ಏರಿಕೆ, ಇನ್ನುಮುಂದೆ ಮನೆಯಲ್ಲಿ ಅಡುಗೆ ಮಾಡುವುದು ಕಷ್ಟ ಕಷ್ಟ

ಈರುಳ್ಳಿ ಬೆಲೆ ರಿಕೆಯ ನಡುವೆ ಈಗ ಬೆಳ್ಳುಳ್ಳಿ ಬೆಲೆ ಕೂಡ ಗಣನೀಯ ಏರಿಕೆ ಆಗಿದೆ

Garlic Price Hike: ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ತರಕಾರಿಗಳ ಬೆಲೆ ಏರುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಮೊದಲು ಟೊಮೊಟೊ ಬೆಲೆ ಗಗನಕ್ಕೆ ಏರಿದ್ದು, ಹಲವು ತಿಂಗಳು ಜನ ಟೊಮೆಟೊ ತಿನ್ನುವುದನ್ನೇ ಕಡಿಮೆ ಮಾಡಿ ಬಿಟ್ಟಿದ್ದರು. ಅಷ್ಟೇ ಅಲ್ಲದೆ ಟೊಮೊಟೊ ಬೆಲೆ ಸ್ವಲ್ಪ ಕಡಿಮೆ ಆಗುತ್ತಿದೆ ಎಂದ ತಕ್ಷಣ ಈರುಳ್ಳಿ ಬೆಲೆ ಗಗನಕ್ಕೆ ಏರಿಕೆ ಆಗ ತೊಡಗಿತ್ತು,

ಇನ್ನು ಈರುಳ್ಳಿ ಬೆಲೆ ಬಿಸಿ ಜನರಿಗೆ ತಾಕುತ್ತಿದ್ದಂತೆ ಸಡನ್ ಆಗಿ ಬೆಳ್ಳುಳ್ಳಿ ಬೆಲೆ ಹೇರಿಕೆ ಸರದಿ ಪ್ರಾರಂಭ ಆಗಿದೆ. ಹೀಗೆ ದಿನ ದಿನ ಒಂದೊಂದು ತರಕಾರಿಗಳ ಬೆಲೆ ಏರಿಕೆ ಆಗುತ್ತಾ ಹೋದರೆ ಇನ್ನು ಜೀವನ ನೆಡೆಸುವುದು ಬಹಳ ಕಷ್ಟಕರ ಆಗಲಿದೆ.

Garlic Price Hike
Image Credit: Oneindia

ಗಗನಕ್ಕೇರಿದೆ ಬೆಳ್ಳುಳ್ಳಿ ಬೆಲೆ

ಸಾಮಾನ್ಯವಾಗಿ ಎಲ್ಲಾರ ಮನೆಯಲ್ಲೂ ಅಡುಗೆಗೆ ಬೆಳ್ಳುಳ್ಳಿ ಬಳಸೇ ಬಳಸುತ್ತಾರೆ ಹಾಗಿದ್ದಲ್ಲಿ ಇನ್ನುಮುಂದೆ ಬೆಳ್ಳುಳ್ಳಿ ಹಾಕದೆ ಅಡುಗೆ ಮಾಡುವ ಪರಿಸ್ಥಿತಿ ಬರಬಹುದು. ಬೆಳ್ಳುಳ್ಳಿ ದರ ಇಷ್ಟೊಂದು ಏರಿಕೆ ಆಗಲಿದೆ ಎಂದು ಯಾರು ಕೂಡ ಊಹಿಸಿರಲಿಲ್ಲ. ಬೆಲೆ ಏರಿಕೆ ಆದ ತರಕಾರಿಗಳಿಗೆ ಹೋಲಿಸಿದರೆ ಬೆಳ್ಳುಳ್ಳಿ ಎಲ್ಲ ದರವನ್ನು ಮೀರಿ ಹೋಗಿದೆ. ಹೌದು ಬೆಳ್ಳುಳ್ಳಿ ದರ ಬರೋಬ್ಬರಿ ಕೆಜಿಗೆ 400 ರೂ.ಗೆ ತಲುಪಿದ್ದು, ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ. ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ದರ ಕೆಜಿಗೆ 320 ನಿಂದ 400 ರೂ.ವರೆಗೆ ತಲುಪಿದೆ.

Garlic Price Update
Image Credit: Naidunia

ಬೆಳ್ಳುಳ್ಳಿ ಬೆಲೆ ಎಷ್ಟು ಹೆಚ್ಚಾಗಿದೆ?

Join Nadunudi News WhatsApp Group

ಬೆಂಗಳೂರು, ಬೀದರ್, ಶಿವಮೊಗ್ಗ, ಚಿಕ್ಕಮಗಳೂರು ಸೇರಿ ಹಲವು ಕಡೆ ಬೆಳ್ಳುಳ್ಳಿ ದರ ಕೆಜಿಗೆ 400 ರೂ.ವರೆಗೆ ತಲುಪಿದೆ. ಉತ್ತಮ ದರ್ಜೆಯ ಬೆಳ್ಳುಳ್ಳಿ ದರ ಕೆಜಿಗೆ 400 ರೂ., ಸಾಧಾರಣ ಗುಣಮಟ್ಟದ ಬೆಳ್ಳುಳ್ಳಿ ಕೆಜಿಗೆ 240 -320 ರೂ.ವರೆಗೆ ಇದೆ.ಕಳೆದ ಒಂದು ತಿಂಗಳಲ್ಲಿ ಬೆಳ್ಳುಳ್ಳಿ ದರ ಎರಡು ಪಟ್ಟು ಹೆಚ್ಚಾಗಿದೆ.ಕಳೆದ ತಿಂಗಳು ಕೆಜಿಗೆ 100- 150ರೂ.ವರೆಗೆ ಇದ್ದ ದರ ನಂತರ 250 ರೂ.ಗೆ ತಲುಪಿತ್ತು.

ಇದೀಗ 400 ರೂಪಾಯಿವರೆಗೆ ಮಾರಾಟವಾಗುತ್ತಿದೆ. ಹೊಸ ಬೆಳೆ ಬರುವವರೆಗೆ ದರ ಏರುಗತಿಯಲ್ಲಿ ಸಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗಾಗಿ ಇನ್ನು ಸ್ವಲ್ಪ ಸಮಯ ಬೆಳ್ಳುಳ್ಳಿ ದರ ಇಷ್ಟರಲ್ಲೇ ಇರಬಹುದು ಅಥವಾ ಹೆಚ್ಚಾಗಬಹುದು ಎನ್ನಲಾಗಿದೆ.

Join Nadunudi News WhatsApp Group